LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬಹುನಿರೀಕ್ಷಿತ ಚಂದ್ರಯಾನ-3 ಕ್ಕೆ ಕ್ಷಣಗಣನೆ: ಅಪರಾಹ್ನ 2.35ಕ್ಕೆ ನಭಕ್ಕೆ

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೊ ವಿಜ್ಞಾನಿಗಳು ಭಾರತದ ಬಹು ನಿರೀಕ್ಷಿತ ಚಂದ್ರಯಾನ-3 ಉಡಾವಣೆಗೆ ಸಜ್ಜಾಗಿದ್ದಾರೆ. ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದ್ದು ಭಾರತೀಯ ಕಾಲಮಾನ ಇಂದು ಮಧ್ಯಾಹ್ನ 2.35ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಹಾರಲಿದೆ.

2019ರಲ್ಲಿ ಚಂದ್ರಯಾನ 2 ಹೆಸರಿನಲ್ಲಿ ಮತ್ತೊಂದು ಪ್ರಯೋಗ ಮಾಡಲಾಗಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಬೇಕಿದ್ದ ‘ಚಂದ್ರಯಾನ-2’ರ ವಿಕ್ರಮ್‌ ಲ್ಯಾಂಡರ್‌ ಸಾಫ್ಟ್‌ ಲ್ಯಾಂಡಿಂಗ್‌ ಸಾಧ್ಯವಾಗದೇ ಅಪ್ಪಳಿಸಿ, ವೈಫಲ್ಯ ಕಂಡಿತ್ತು. ಅದರ ಮುಂದುವರಿದ ಭಾಗವಾಗಿರುವ ಚಂದ್ರಯಾನ-3 ಉಪಗ್ರಹ ಎಲ್ ವಿಎಂ3 - ಎಂ4 ರಾಕೆಟ್ ನ್ನು ಹೊತ್ತು ಸಾಗಲಿದೆ.ಚಂದ್ರಯಾನ-3 ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ನ್ನು ಹೊಂದಿದ್ದು, ಇದು ಸುಮಾರು 3,900 ಕಿಲೋಗ್ರಾಂಗಳಷ್ಟು ಭಾರವನ್ನು ಹೊಂದಿದೆ.

ಉಪಗ್ರಹ ಇಳಿಯಲು ಗೊತ್ತುಪಡಿಸಿದ ಲ್ಯಾಂಡಿಂಗ್ ಕೇಂದ್ರ ಚಂದ್ರನ ದಕ್ಷಿಣ ಧ್ರುವವಾಗಿದೆ, ಚಂದ್ರನ ಮೇಲ್ಮೈ ಮೇಲೆ ಆಗಸ್ಟ್ 23 ಅಥವಾ 24 ರ ಸುಮಾರಿಗೆ ಲ್ಯಾಂಡಿಂಗ್ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಇದು 14 ಭೂಮಿಯ ದಿನಗಳಿಗೆ ಸಮನಾಗಿರುತ್ತದೆ, ಚಂದ್ರಯಾನ-3 ಚಂದ್ರನ ಪರಿಶೋಧನೆಗೆ ಸಿದ್ಧವಾಗಿದೆ. ಚಂದ್ರನ ದಕ್ಷಿಣ ಭಾಗದಲ್ಲಿ ಇಳಿದರೆ ಮೊದಲ ಯಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇಲ್ಲಿ ಸೂರ್ಯನ ಬೆಳಕು ಪ್ರವೇಶ ಮಾಡುವುದಿಲ್ಲ. ಇಲ್ಲಿ ಮೈನ ೨೩೦ ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು ಎಲೆಕ್ಟ್ರಾನಿಕ್ ಉಪಕರಣ ಗಳು ಕಾರ್ಯವೆಸಗುವಂತೆ ಮಾಡುವುದು ಸವಾಲಿನ ಕೆಲಸ.

ಚಂದ್ರಯಾನ-3 ರ ನೇರ ಉಡಾವಣೆಯನ್ನು ವೀಕ್ಷಿಸಲು ಇಸ್ರೋದ ಅಧಿಕೃತ ವೆಬ್‌ಸೈಟ್ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿದ್ದು ಆಸಕ್ತರು ಉಡಾವಣೆಯ ರೋಚಕ ಕ್ಷಣವನ್ನು ಅನುಭವಿಸಬಹುದು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕನ್ನಡ ಹೋರಾಟಗಾರರ ಬಂಧನದಿಂದ ದುಃಖ ತಂದಿದೆ : ಬಸವರಾಜ ಬೊಮ್ಮಾಯಿಅತಿಥಿ ಉಪನ್ಯಾಸಕರ ವೇತನ ಹೆಚ್ಚಳ: ರಾಜ್ಯ ಸರ್ಕಾರ ಘೋಷಣೆ'ಲೋಕಾಯುಕ್ತ ವಿಚಾರಣೆಗೆ ಅನುಮತಿ: ವಿಳಂಬ ಸಲ್ಲದು'- ಸಿಎಂ ಕಟ್ಟುನಿಟ್ಟಿನ ಸೂಚನೆಬೆಂಗಳೂರು ಏರ್ ಪೋರ್ಟ್ ಟರ್ಮಿನಲ್ - 2ರಲ್ಲಿ ಹೈಟೆಕ್ ಬಸ್ ನಿಲ್ದಾಣಕ್ಕೆ ಚಾಲನೆಐಫೋನ್ ಹ್ಯಾಕ್ ಆರೋಪವನ್ನು ನಿರಾಕರಿಸಿದ ಸಚಿವ ರಾಜೀವ್ ಚಂದ್ರಶೇಖರ್ಜೆಡಿಯು ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತೀಶ್ ಕುಮಾರ್ ನೇಮಕಪರೀಕ್ಷಾರ್ಥವಾಗಿ ಸಂಚರಿಸುತ್ತಿದ್ದ ರೈಲಿಗೆ ಸಿಲುಕಿ ವಿದ್ಯಾರ್ಥಿನಿಯರು ಮೃತ್ಯುಎಸ್‌ಯುವಿ ರೂಫ್ ನಲ್ಲಿ ಮಕ್ಕಳನ್ನು ಮಲಗಿಸಿ ಕಾರು ಚಾಲನೆ: ಪ್ರಕರಣ ದಾಖಲುನಾಳೆಯಿಂದ ಮಂಗಳೂರು - ಮಡಗಾಂವ್ ವಂದೇ ಭಾರತ್‌ ರೈಲು ಆರಂಭಪಾಕಿಸ್ತಾನದಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ನಿಷೇಧ: ಪ್ರಧಾನಿ ಘೋಷಣೆ