LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬಹುಪತ್ವಿತ್ವ ನಿಷೇಧ ಮಸೂದೆ ತರಲು ಮುಂದಾದ ಅಸ್ಸಾಂ ಸರ್ಕಾರ.

ದಿಸ್ಪುರ್:ಅಸ್ಸಾಂ ಸರ್ಕಾರ ಬಹುಪತ್ನಿತ್ವ ನಿಷೇಧಕ್ಕೆ ಮುಂದಾಗಿದ್ದು, ಡಿಸೆಂಬರ್‌ನಲ್ಲಿ ರಾಜ್ಯ ವಿಧಾನಸಭೆಯಲ್ಲಿ ಮಸೂದೆ ಮಂಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಶನಿವಾರ ತಿನ್ಸುಕಿಯಾದಲ್ಲಿ ಬಿಜೆಪಿ ಮಿತ್ರ ಪಕ್ಷಗಳ ಸಭೆಯನ್ನುದ್ದೇಶಿಸಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಮುಂದಿನ 45 ದಿನಗಳಲ್ಲಿ ರಾಜ್ಯ ಸರ್ಕಾರವು ರಾಜ್ಯದಲ್ಲಿ ಬಹುಪತ್ನಿತ್ವವನ್ನು ನಿಷೇಧಿಸುವ ಮಸೂದೆಯನ್ನು ಅಂತಿಮಗೊಳಿಸಲಿದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ಬಹುಪತ್ನಿತ್ವ ನಿಷೇಧಿಸಬೇಕೆ ಅಥವಾ ಬೇಡವೇ ಎಂಬುದನ್ನು ವಿಶ್ಲೇಷಿಸಲು ಕಾನೂನು ಸಮಿತಿ ರಚಿಸಲಾಗಿದೆ. ನಾವು ಸಕಾರಾತ್ಮಕ ಚಿಂತನೆಗಳನ್ನು ಸ್ವೀಕರಿಸಿದ್ದೇವೆ. ಬಹುಪತ್ನಿತ್ವವನ್ನು ನಿಷೇಧಿಸುವ ಉದ್ದೇಶಿತ ಮಸೂದೆಯ ಕುರಿತು ನಾವು ಸಾರ್ವಜನಿಕ ಅಭಿಪ್ರಾಯ ಮತ್ತು ಸಲಹೆಗಳನ್ನು ಕೇಳಿದ್ದೇವೆ. ನಮ್ಮ ಸಾರ್ವಜನಿಕ ಸೂಚನೆಗೆ ಪ್ರತಿಕ್ರಿಯೆಯಾಗಿ ನಾವು ಒಟ್ಟು 149 ಸಲಹೆಗಳನ್ನು ಸ್ವೀಕರಿಸಿದ್ದೇವೆ. ಇವುಗಳಲ್ಲಿ 146 ಸಲಹೆಗಳು ಮಸೂದೆಯ ಪರವಾಗಿವೆ ಎಂದರು.

ಅವು ಬಹುಪತ್ನಿತ್ವ ನಿಷೇಧಿಸುವ ಕ್ರಮವನ್ನು ಬೆಂಬಲಿಸುತ್ತವೆ. ಆದಾಗ್ಯೂ, ಬಹುಪತ್ನಿತ್ವವನ್ನು ನಿಷೇಧಿಸಲು ಮೂರು ಸಲಹೆಗಳು ತಮ್ಮ ವಿರೋಧ ವ್ಯಕ್ತಪಡಿಸಿವೆ. ನಮ್ಮ ಮುಂದಿನ ಹಂತವು ಮಸೂದೆಯನ್ನು ರಚಿಸುವುದು ಎಂದು ಶರ್ಮಾ ಅವರು ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರಸೇವಕರ ಬಂಧನ ಖಂಡಿಸಿ ನಾಳೆ ರಾಜ್ಯವ್ಯಾಪಿ ಪ್ರತಿಭಟನೆಇಬ್ಬರು ಮಕ್ಕಳೊಂದಿಗೆ ತಾಯಿ ನಿಗೂಢ ಸಾವು..!ಷರತ್ತು ಉಲ್ಲಂಘನೆ - ಭಾರತದ 71 ಲಕ್ಷಕ್ಕೂ ಅಧಿಕ ವಾಟ್ಸ್​ಆ್ಯಪ್ ಅಕೌಂಟ್ ಬ್ಯಾನ್ಕರ್ನಾಟಕದಲ್ಲಿ ಇಂದಿನಿಂದ ಕೋವಿಡ್ ವ್ಯಾಕ್ಸಿನೇಷನ್ ಆರಂಭಶಬರಿಮಲೆ ಮಕರವಿಳಕ್ಕು ಉತ್ಸವ – ಮೊದಲ ದಿನವೇ ಭಕ್ತರ ಸಾಗರಸುಮ್ಮನೆ ICU ಗೆ ದಾಖಲು ಮಾಡುವ ಹಾಗಿಲ್ಲ….ಮೊದಲ ಬಾರಿಗೆ ಕೇಂದ್ರ ಸರಕಾರದಿಂದ ನಿಯಮಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ದಿನ ಸಾರ್ವತ್ರಿಕ ರಜೆ ಘೋಷಣೆಗೆ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹ..!ರಾಜ್ಯದ ಪ್ರತಿ ಮನೆಗಳಿಗೆ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆ ವಿತರಣೆ: ಶರಣ್ ಪಂಪ್‌ವೆಲ್ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ - ನಾಲ್ಕು ಮಂದಿ ಮೃತ್ಯುಏರ್ ಗನ್, ಚಾಕು ಹಿಡಿದು ಪ್ರಾರ್ಥಮಿಕ ಶಾಲಾ ಮಕ್ಕಳ ಹೊಡೆದಾಟಕ್ಕೆ ಶಿಕ್ಷಕ ವರ್ಗ ತಲ್ಲಣ..!