LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬಾಯ್ ಫ್ರೆಂಡ್ ಜೊತೆಗಿನ ವೀಡಿಯೋ ಕರೆ ದೃಶ್ಯಗಳನ್ನಿಟ್ಟುಕೊಂಡು ಅಕ್ಕನಿಂದಲೇ ತಂಗಿಗೆ ಬ್ಲಾಕ್ ಮೇಲ್

ಬೆಂಗಳೂರು: ಅಕ್ಕನೇ ತನ್ನ ಬಾಯ್ ಫ್ರೆಂಡ್ ಜೊತೆ ಸೇರಿ ತಂಗಿಯನ್ನ ಬ್ಲಾಕ್ ಮೇಲ್ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. 37 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನನ್ವಯ ಆಕೆಯ ಬಾಯ್ ಫ್ರೆಂಡ್ ಮೊಹಮ್ಮದ್ ತಬ್ರೇಜ್, ಅಕ್ಕ ಬಿಂದು ಹಾಗೂ ಅಕ್ಕನ ಬಾಯ್ ಫ್ರೆಂಡ್ ಇರ್ಫಾನ್ ಪಾಶಾ ವಿರುದ್ಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರ ಮಹಿಳೆ ವಿವಾಹಿತಳಾಗಿದ್ದು ತನ್ನ ಬಾಲ್ಯ ಸ್ನೇಹಿತ ತಬ್ರೇಜ್ ಎಂಬಾತನೊಂದಿಗೆ ಪ್ರೀತಿ ಮುಂದುವರೆಸಿದ್ದಳು. 2022-23ರವರೆಗಿನ ಅವಧಿಯಲ್ಲಿ ಕೆಂಗೇರಿಯಲ್ಲಿರುವ ತನ್ನ ಅಕ್ಕ‌ ಬಿಂದು ಮನೆಗೆ ಹೋಗುತ್ತಿದ್ದ ದೂರುದಾರೆ, ತನ್ನ ಬಾಯ್ ಫ್ರೆಂಡ್ ಜೊತೆ ಮಾತನಾಡುತ್ತಿದ್ದಳು. ಆ ಸಂಧರ್ಭದಲ್ಲಿ ತನ್ನ ಬಾಯ್ ಫ್ರೆಂಡ್ ಮೊಹಮ್ಮದ್ ತಬ್ರೇಜ್ ಜೊತೆ ನ್ಯೂಡ್ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಳು. ಆದರೆ ಕಾಲ್ ರೆಕಾರ್ಡ್ ಮಾಡಿಕೊಂಡಿದ್ದ ತಬ್ರೇಜ್ ಅದನ್ನ ದೂರುದಾರಳ ಅಕ್ಕ ಬಿಂದು ಹಾಗೂ ಆಕೆಯ ಬಾಯ್ ಫ್ರೆಂಡ್ ಇರ್ಫಾನ್ ಪಾಶಾಗೆ ತೋರಿಸಿದ್ದಾನೆ.

ನಂತರ ಬಿಂದು ಆಕೆಯ ಗೆಳೆಯ ಇರ್ಫಾನ್ ಪಾಷಾ ಹಾಗೂ ಮೊಹಮ್ಮದ್ ತಬ್ರೇಜ್ ಸೇರಿ ದೂರುದಾರ ಮಹಿಳೆಯನ್ನ ಬೆದರಿಸಲಾರಂಭಿಸಿದ್ದಾರೆ. 80 ಸಾವಿರ ಹಣ ನೀಡದಿದ್ದರೆ ವಿಡಿಯೋಗಳನ್ನ ದೂರುದಾರಳ ಗಂಡನಿಗೆ ತೋರಿಸುವುದಾಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ದೂರಿನನ್ವಯ ಮೊಹಮ್ಮದ್ ತಬ್ರೇಜ್, ಇರ್ಫಾನ್ ಪಾಶಾ ಹಾಗೂ ಬಿಂದು ವಿರುದ್ಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯೋಧರ ಪರಾಕ್ರಮವನ್ನು ಕೊಂಡಾಡಿದ ರಾಜನಾಥ್ ಸಿಂಗ್ದೆಹಲಿ ಕಾಲೇಜಿನಲ್ಲಿ ಬೆಂಕಿ ಅವಘಡ - ತಪ್ಪಿದ ಭಾರೀ ಅನಾಹುತತಂದೆಯನ್ನೇ ಮದುವೆಗೆ ಆಹ್ವಾನಿಸಿಲ್ಲವಂತೆ ಚೈತ್ರಾ ಕುಂದಾಪುರಮಣಿಪುರ:10 ಉಗ್ರರನ್ನು ಗುಂಡಿಕ್ಕಿ ಹತ್ಯೆ,ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡುಗಳು ವಶಕ್ಕೆಚೀನದ ಏರ್‌ ಡಿಫೆನ್ಸ್‌ ಸಿಸ್ಟಮನ್ನೇ ನಿಷ್ಕ್ರಿಯಗೊಳಿಸಿ ದಾಳಿ ಮಾಡಿದ ಭಾರತಎನ್‌ಕೌಂಟರ್‌ನಲ್ಲಿ ಜೈಶ್‌ನ ಮೂರು ಉಗ್ರರ ಹತ್ಯೆಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ..!ಮಂಗಳೂರು: ಮೇ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ನೂತನ ಜಿಲ್ಲಾಧಿಕಾರಿ ಕಚೇರಿ ಉದ್ಘಾಟನೆಕುಂದಾಪುರ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ..!ರಾಜ್ಯದಾದ್ಯಂತ ಬೆಳ್ಳಂಬೆಳಗ್ಗೆ 40 ಕಡೆಗಳಲ್ಲಿ ಲೋಕಾಯುಕ್ತ ದಾಳಿ