LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬಿಗ್​ಬಾಸ್ ಮನೆ ಅಲ್ಲೋಲ ಕಲ್ಲೋಲ ಗ್ಯಾರೆಂಟಿ - ದೊಡ್ಮನೆಗೆ ಫೇಸ್​ಬುಕ್ ಲಾಯರ್ ಎಂಟ್ರಿ..!

ಬಿಗ್‌ ಬಾಸ್‌ ಕನ್ನಡ ಸೀಸನ್ 11ರ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ನಡುವೆ ರಾಜಾ ರಾಣಿ ಶೋನ ಗ್ರ್ಯಾಂಡ್‌ ಫಿನಾಲೆಯಲ್ಲಿ ಒಬ್ಬೊಬ್ಬ ಸ್ಪರ್ಧಿಯನ್ನು ಬಹಿರಂಗಗೊಳಿಸಲಾಗುತ್ತಿದೆ. ಆ ಪೈಕಿ ಈಗಾಗಲೇ ಸತ್ಯ ಸೀರಿಯಲ್‌ ನಟಿ ಗೌತಮಿ ಜಾಧವ್ ಮೊದಲ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆ ಪ್ರವೇಶಿಸದಲಿದ್ದಾರೆ.

ಆದರೆ, ಅವರು ಸ್ವರ್ಗಕ್ಕಾ? ಅಥವಾ ನರಕಕ್ಕಾ? ಎಂಬ ಕುತೂಹಲಕ್ಕೆ ಭಾನುವಾರ ಸಂಜೆ ವೇಳೆ ಗೊತ್ತಾಗಲಿದೆ. ಇನ್ನು ಎರಡನೇ ಸ್ಪರ್ಧಿ ಬಾಯಲ್ಲಿ ಬೆಂಕಿ ಉಂಡೆ ಉರುಳಿಸುವ ವಕೀಲ. ಬಿಗ್​ಬಾಸ್ ಮನೆಯ ಇತಿಹಾಸ ಗಮಿಸಿದರೆ ಹೀಗೆ ಜೋರಾಗಿ ಕಿರುಚಾಡುವ, ಜಗಳವಾಡುವ, ಇನ್ನೊಬ್ಬರನ್ನು ದೂಷಿಸಿ, ತಂತ್ರ-ಕುತಂತ್ರದ ಆಟ ಆಡುವ ಸ್ಪರ್ಧಿಗಳು ಗೆದ್ದಿಲ್ಲ. ಆದರೆ ಕೊನೆಯವರೆಗೂ ಉಳಿದುಕೊಳ್ಳುತ್ತಾರೆ. ಹೊರಗಡೆ ಹೆಸರು ಮಾಡುತ್ತಾರೆ. ಹಾಗಾಗಿ ಬಿಗ್​ಬಾಸ್ ಪ್ರತಿಬಾರಿ ಇಂಥಹಾ ವ್ಯಕ್ತಿಗಳನ್ನು ಆರಿಸಿ ಬಿಗ್​ಬಾಸ್ ಮನೆ ಒಳಗೆ ಕಳಿಸುತ್ತದೆ. ಈ ಬಾರಿಯಂತೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ದೊಡ್ಡ ಬಾಯಿಯಿಂದ, ಜಗಳ ಮಾಡಿಕೊಳ್ಳುವ ವ್ಯಕ್ತಿತ್ವದಿಂದಲೇ ಚಿರಪರಿಚಿತರಾದ ವ್ಯಕ್ತಿಯನ್ನು ಬಿಗ್​ಬಾಸ್ ಮನೆಯ ಒಳಗೆ ಕಳಿಸುತ್ತಿದೆ. 'ಫೇಸ್​ಬುಕ್ ಲಾಯರ್' ಎಂದು ಟೀಕಾಕಾರರಿಂದ ಕರೆಸಿಕೊಳ್ಳುವ, ತಮ್ಮ ವಕೀಲಿಕೆಗಿಂತಲೂ ಸಾಮಾಜಿಕ ಜಾಲತಾಣದಿಂದ ಭಾರಿ ಹೆಸರು ಮಾಡಿರುವ ವಕೀಲ ಜಗದೀಶ್ ಅವರನ್ನು ಬಿಗ್​ಬಾಸ್ ಮನೆಗೆ ಎರಡನೇ ಸ್ಪರ್ಧಿಯಾಗಿ ಕಳಿಸಲಾಗುತ್ತಿದೆ. ಲಾಯರ್ ಜಗದೀಶ್​ರದ್ದು ವರ್ಣಮಯ ವ್ಯಕ್ತಿತ್ವ ಮಾತ್ರವಲ್ಲ, ಅವರದ್ದು ಬಹಳ ವರ್ಣಮಯ ವೈಯಕ್ತಿಕ ಜೀವನ ಸಹ. ಬಿಗ್​ಬಾಸ್​ಗೆ ಹೇಳಿ ಮಾಡಿಸಿದ ವ್ಯಕ್ತಿ ಜಗದೀಶ್. ಸಿಟ್ಟಿನ ವ್ಯಕ್ತಿತ್ವದ ಜಗದೀಶ್​, ಮಾತುಗಾರ. ಏಕವಚನ, ಅಶ್ಲೀಲ ಪದಗಳು ಅವರಿಗೆ ತೀರಾ ಸಾಮಾನ್ಯ ಎಂಬುದು ಅವರ ಸಾಮಾಜಿಕ ಜಾಲತಾಣ ವಿಡಿಯೋ ನೋಡಿದರೆ ತಿಳಿಯುತ್ತದೆ. ಅಂದಹಾಗೆ ಜಗದೀಶ್​ಗೆ ಮದುವೆಯಾಗಿದ್ದು ಆದರೆ ಅವರಿಗೆ ಡಿವೋರ್ಸ್ ಆಗಿದ್ದು, ಪತ್ನಿ ಹಾಗೂ ಮಗ ಅವರಿಂದ ದೂರ ಇದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ಗ್ಯಾರಂಟಿಗಳಿಗೆ ಮೀಸಲಿಟ್ಟ ಹಣ ಯಾರು ನುಂಗುತ್ತಿದ್ದಾರೆ'?- ಸರಕಾರಕ್ಕೆ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆಅನ್ನಭಾಗ್ಯದ ದುಡ್ಡೂ ಬಂದಿಲ್ಲ, ಗೃಹಲಕ್ಷ್ಮಿ ಹಣವೂ ಜಮೆಯಾಗಿಲ್ಲ- ಕೆಲವು ತಿಂಗಳಿಂದ ಸ್ಥಗಿತಗೊಂಡಿರುವ ಗ್ಯಾರಂಟಿಗಳುಆಂಧ್ರದಲ್ಲಿ GB (Guillain Barre) ಸಿಂಡ್ರೋಮ್ ಗೆ 2 ಬಲಿ …..!'ರೈತರ ಬೇಡಿಕೆಗಳಿಗೆ ನಮ್ಮದು ಪ್ರಥಮ ಆದ್ಯತೆ'- ಸಿ.ಎಂ.ಸಿದ್ದರಾಮಯ್ಯವೈಮಾನಿಕ ದಾಳಿ : ಅಲ್ ಖೈದಾ ಸದಸ್ಯನನ್ನು ಹೊಡೆದುರುಳಿಸಿದ ಅಮೆರಿಕ ಸೇನೆಸಿದ್ದರಾಮಯ್ಯ ಸಹಿ ನಕಲು ಮಾಡಿ ವಂಚನೆ: ಆರೋಪಿ ಬಂಧನ'ಕೇಂದ್ರದಲ್ಲಿ ಬಿಜೆಪಿಗೆ ಬಹುಮತವಿಲ್ಲ, ಮೋದಿ ಬದಲಾವಣೆ ಆಗಬಹುದು'- ಸಂತೋಷ್ ಲಾಡ್ಇಂದಿನಿಂದ ಫಾಸ್ಟ್‌ಟ್ಯಾಗ್‌ ಹೊಸ ನಿಯಮ ಜಾರಿ; ಕಡಿಮೆ ಬ್ಯಾಲೆನ್ಸ್ ಇದ್ರೆ ದುಪ್ಪಟ್ಟು ದಂಡರೈಲ್ವೆ ಮೆಗಾ ಸಬ್ ಅರ್ಬನ್ ಯೋಜನೆಗೆ ಪ್ಲ್ಯಾನ್ : ರೈತರಿಂದ ಆಕ್ರೋಶಫೆಬ್ರವರಿ 20ರಂದು ದೆಹಲಿ ಸಿಎಂ ಪ್ರಮಾಣವಚನ ಸ್ವೀಕಾರ ಸಾಧ್ಯತೆ