LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬಿಗ್ ಬಾಸ್ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ನಮ್ರತಾ ಗೌಡ!

ಬೆಂಗಳೂರು : ಬಿಗ್ ಬಾಸ್ ಕನ್ನಡ ಕಿರುತೆರೆಯಲ್ಲಿ ಬಹಳ ಸದ್ದು ಮಾಡುವ ಅತಿದೊಡ್ಡ ರಿಯಾಲಿಟಿ ಶೋ. ಹಿರಿತೆರೆ, ಕಿರುತೆರೆ, ಸಾಮಾನ್ಯ ವ್ಯಕ್ತಿ, ಸಾಧಕ ಶೋನಲ್ಲಿ ಭಾಗಿಯಾಗ್ತಾನೆ. ಈ ಶೋ ಯಾವಾಗಲೂ ಸದ್ದು ಮಾಡುತ್ತಿರುತ್ತದೆ. ಸ್ಪರ್ಧಿಗಳೂ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿ, ನಟಿ ನಮ್ರತಾ ಗೌಡ ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ.

 

ಪ್ಲ್ಯಾನ್ ಪ್ರಕಾರ ನಡೆಯುತ್ತಿಲ್ಲ:

ನಮ್ರತಾ ಗೌಡ ಯಾರಿಗೆ ತಾನೇ ಗೊತ್ತಿಲ್ಲ. ನಾಗಿಣಿ ಎಂದಾಕ್ಷಣ ತಟ್ಟನೆ ನೆನಪಾಗುವ ಹೆಸರು. ಕನ್ನಡ ಕಿರುತೆರೆಯಲ್ಲಿ ಖ್ಯಾತರಾದವರು. ನಾಗಿಣಿ ಮುಗಿಯುತ್ತಿದ್ದಂತೆ ಬಿಗ್ ಬಾಸ್ ನತ್ತ ಲಗ್ಗೆ ಇಟ್ಟರು. ಬಿಗ್ ಬಾಸ್​ ನಲ್ಲಿ ಇದ್ದಾಗ ವಿನಯ್ ಗೌಡ, ನಮ್ರತಾ, ರಕ್ಷಕ್ ಬುಲೆಟ್, ಈಶಾನಿ, ಮೈಕಲ್ ಅಜಯ್ ಜೊತೆಯಾಗಿ ಇರುತ್ತಿದ್ದರು.

ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಹೊರಗೆ ಪ್ರತಿ ವಾರ ಸಿಗೋಣ, ಪಾರ್ಟಿ ಮಾಡೋಣ ಎಂದೆಲ್ಲ ಪ್ಲ್ಯಾನ್ ಮಾಡಿದ್ದರು. ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಆರಂಭದಲ್ಲಿ ಕೆಲವು ಬಾರಿ ಇವರು ಭೇಟಿ ಆಗಿದ್ದು ಇದೆ. ಈಗ ಆ ರೀತಿಯ ಭೇಟಿಗಳು ನಿರಂತರವಾಗಿ ನಡೆಯುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ದಿನವೂ ಸಿಗಬೇಕು ಇಲ್ಲವಾದರೆ ವಾರಕ್ಕೆ ಒಮ್ಮೆ ಆದರೂ ಸಿಗಬೇಕು ಎಂದು ಬಿಗ್ ಬಾಸ್​​ನಲ್ಲಿ ಪ್ಲ್ಯಾನ್ ಮಾಡಿದ್ದೀವಿ. ಆದರೆ, ಅದೆಲ್ಲ ನಡೆಯುತ್ತಿಲ್ಲ. ನನ್ನ ಸರ್ಕಲ್​ನಲ್ಲಿ ಇರುವವರನ್ನು ನನ್ನ ಬರ್ತ್ ಡೇ ಕರೆದಿದ್ದೆ. ನಾನು ರೆಗ್ಯುಲರ್ ಆಗಿ ಯಾರ ಜೊತೆಗೂ ಕಂಟ್ಯಾಕ್ಟ್ ಇಲ್ಲ. ವಿನಯ್, ಈಶಾನಿ ಜೊತೆ ಆಗಾಗ ಕಾಲ್​ನಲ್ಲಿ ಮಾತನಾಡುತ್ತೇನೆ. ರಕ್ಷಕ್, ಕಾರ್ತಿಕ್ ಹಾಗೂ ಇತರರು ಈವೆಂಟ್​ನಲ್ಲಿ ಮಾತಾಡ್ತೀನಿ ಎಂದಿದ್ದಾರೆ.

ಕಾರು ಖರೀದಿಸಿದ ನಟಿ : 

 

ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ನಮ್ರತಾ ಗೌಡ, ಅಂದು ನಮ್ರತಾ ಗೌಡ ಅವರು ಹೊಸ ಕಾರೊಂದನ್ನು ಖರೀದಿಸಿದ್ದರು. ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರನ್ನು ನಮ್ರತಾ ಗೌಡ ಖರೀದಿಸಿದ್ದರು. ಈ ಕಾರಿನ ಬೆಲೆ 8 ರಿಂದ 9 ಲಕ್ಷ ರೂ. ಆಗಿದೆ. ಕಾರು ಕೊಂಡ ಸಂಭ್ರಮವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅವರ ಅಭಿಮಾನಿಗಳು ಶುಭಹಾರೈಸಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನವರಾತ್ರಿ ಹಬ್ಬದ ಉಪವಾಸದಲ್ಲಿ ನಿಮ್ಮ ಆಹಾರ ಪದ್ಧತಿ ಹೀಗಿದ್ದರೆ ಅನಾರೋಗ್ಯ ಹತ್ತಿರ ಸುಳಿಯಲ್ಲಗರಿಕೆ ಹುಲ್ಲಿನ ಆರೋಗ್ಯ ಪ್ರಯೋಜನ ಗೊತ್ತೇ..?24 ಗಂಟೆಯೊಳಗೆ ರಾಜ್ಯ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆ.!ಇಂದಿನಿಂದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಸತ್ತು ಕಡ್ಡಾಯ.!ಲಿಡ್ಕರ್: ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನನವರಾತ್ರಿ ಶುರು ಆಗುವ ಮೊದಲು ಈ 5 ವಸ್ತು ಮನೆಯಿಂದ ಆಚೆ ತೆಗೆದು ಹಾಕಿರಿ, ಇವು ದುಃಖ ದರಿದ್ರತೆಗೆ ಕಾರಣ ಆಗುತ್ತವೆವಚನ-ಸುಂಕದ ಬಂಕಣ್ಣ  .!34,863 ಖಾಲಿ ಹುದ್ದೆಗಳನ್ನು ಕಾಲ ಮಿತಿಯಲ್ಲಿ ತುಂಬಲು ಸಿಎಂ ಸಿದ್ದರಾಮಯ್ಯ ಸೂಚನೆಕೋಲ್ಕತ್ತಾ ಟ್ರೈನಿ ವೈದ್ಯೆ ಅತ್ಯಾಚಾರ ಕೇಸ್‌: ಆರೋಪಿ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌ ಸಲ್ಲಿಕೆಬಿಟ್ ಕಾಯಿನ್ ಹಗರಣ: ಡಿವೈಎಸ್​ಪಿ ಶ್ರೀಧರ್ ಪೂಜಾರಿ ಅರೆಸ್ಟ್‌