LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬಿಗ್ ಬಾಸ್​ ಮನೆಯಲ್ಲಿ ಹೊಡೆದಾಡಿಕೊಂಡ ರಂಜಿತ್-ಜಗದೀಶ್..? ಇಬ್ಬರನ್ನೂ ಹೊರಹಾಕಿದ್ರ ಬಿಗ್ ಬಾಸ್..?

ಬಿಗ್ ಬಾಸ್ ಕನ್ನಡ ಸೀಸನ್ 11 : ರಲ್ಲಿ ಜಗದೀಶ್ ಅವರು ದೊಡ್ಮನೆಯಲ್ಲಿ ಸಾಕಷ್ಟು ಕಿರಿಕ್ ಮಾಡಿಕೊಂಡಿದ್ದರು. ಏಪ್ರಿಲ್ 15ರ ಎಪಿಸೋಡ್​ನಲ್ಲಿ ಅವರು ಬಿಗ್ ಬಾಸ್​ ವಿರುದ್ಧವೇ ಅವಾಚ್ಯ ಶಬ್ದ ಬಳಕೆ ಮಾಡಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈಗ ಅವರು ಬಿಗ್ ಬಾಸ್​ನಿಂದಲೇ ಔಟ್ ಆಗಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ದೊಡ್ಡದಾಗಿ ಫೈಟ್ ನಡೆದಿದೆ ಎಂದು ಹೇಳಲಾಗುತ್ತಿದೆ. ಇದು ಕೇವಲ ಮಾತಿನ ಫೈಟ್ ಅಲ್ಲ, ಕೈಕೈ ಮಿಲಾಯಿಸಿ ನಡೆದ ಕುಸ್ತಿ. ಈ ಕಾರಣದಿಂದಲೇ ರಂಜಿತ್ ಹಾಗೂ ಜಗದೀಶ್ ಅವರು ದೊಡ್ಮನೆಯಿಂದ ಔಟ್ ಆಗಿದ್ದಾರೆ ಎಂದು ವರದಿ ಹರಿದಾಡಿದೆ. ಈ ಫೈಟ್​ನಿಂದ ದೊಡ್ಮನೆ ಪ್ರಕ್ಷುಬ್ದವಾಗಿದೆ ಎಂದು ಹೇಳಲಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ.

 

‘ಬಿಗ್ ಬಾಸ್​’ನಲ್ಲಿ ವಾತಾವರಣ ಹದಗೆಟ್ಟಿದೆ. ಅಕ್ಟೋಬರ್ 17ರ ಎಪಿಸೋಡ್​ನಲ್ಲಿ ಎಲ್ಲರೂ ಜಗದೀಶ್ ವಿರುದ್ಧ ಒಂದಾಗಿದ್ದರು. ಇದರಿಂದ ಸಿಡುಕುತ್ತಿದ್ದ ಜಗದೀಶ್ ಬಿಗ್ ಬಾಸ್ ವಿರುದ್ಧವೇ ಅವಾಚ್ಯ ಶಬ್ದ ಬಳಕೆ ಮಾಡುತ್ತಿದ್ದರು. ಇನ್ನು, ರಂಜಿತ್ ಅವರು ‘ಹೀಗೆ ಮುಂದುವರಿದರೆ ಜಗದೀಶ್ ಅವರ ಎದಮೇಲೆ ಕಾಲಿಟ್ಟು ಹೋಗೋತ್ತೇನೆ’ ಎಂದು ಎಚ್ಚರಿಕೆ ನೀಡಿದ್ದರು. ಈಗ ಹಾಗೆಯೇ ಆಯಿತೇ ಎನ್ನುವ ಪ್ರಶ್ನೆ ಮೂಡಿದೆ.

ಕೆಲವು ವರದಿಗಳ ಪ್ರಕಾರ ದೊಡ್ಮನೆಯಲ್ಲಿ ಜಗದೀಶ್ ಹಾಗೂ ರಂಜಿತ್ ಮಧ್ಯೆ ಫೈಟ್ ನಡೆದಿದೆ ಎಂದು ಹೇಳಲಾಗುತ್ತಿದೆ. ಬಿಗ್ ಬಾಸ್ ನಿಯಮಗಳ ಪ್ರಕಾರ ಮನೆಯಲ್ಲಿ ಫೈಟ್ ಆದರೆ ಅದರ ಭಾಗಿದಾರರನ್ನು ನೇರವಾಗಿ ಹೊರಹಾಕಲಾಗುತ್ತದೆ. ಈ ಮೊದಲು ಹುಚ್ಚ ವೆಂಕಟ್ ಅವರು ಈ ರೀತಿ ಫೈಟ್ ಮಾಡಿಕೊಂಡು ಹೊರ ಹೋಗಿದ್ದರು. ಈಗ ಜಗದೀಶ್ ಹಾಗೂ ರಂಜಿತ್ ಬಡಿದಾಡಿಕೊಂಡು ಹೊರ ಹೋದರು ಎನ್ನಲಾಗಿದೆ. ಕೆಲವು ಕಡೆಗಳಲ್ಲಿ ಜಗದೀಶ್ ಮಾತ್ರ ಹೊರ ಹೋಗಿದ್ದಾರೆ ಎಂದು ವರದಿ ಆಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ಕೇಂದ್ರ ಸರ್ಕಾರದಿಂದ ಬರಬೇಕಾದ ಪಿಂಚಣಿ ಎರಡು ವರ್ಷದಿಂದ ರಾಜ್ಯಕ್ಕೆ ಕೊಟ್ಟಿಲ್ಲ'- ಸಿಎಂ ಅಸಮಾಧಾನಶಾಲಾ ಆವರಣದೊಳಗೆ ಮದ್ಯ ಸೇವನೆ - ಇಬ್ಬರು ಶಿಕ್ಷಕರು ಅಮಾನತುಮಿಯಾಝಾಕಿ ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು - ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ!ಸರ್ಕಾರವೇ ಇನ್ನು ಮೇಲೆ 108 ಆ್ಯಂಬುಲೆನ್ಸ್ ಸೇವೆ ನೀಡಲಿದೆಸೋಫಿಯಾ ಖುರೇಷಿ ಕುಟುಂಬಸ್ಥರ ಮೇಲೆ ದಾಳಿ ಎಂದು ಫೇಕ್ ಪೋಸ್ಟ್ಸುಪ್ರೀಂ ಕೋರ್ಟ್‌ನ 52ನೇ ಸಿಜೆಐ ಆಗಿ ಬಿ.ಆರ್. ಗವಾಯಿ ಪ್ರಮಾಣ ವಚನ ಸ್ವೀಕಾರಉಡುಪಿ: ಮಲ್ಪೆ ಬಂದರಿನಲ್ಲಿ ಬಾಂಬ್ ಸ್ಫೋಟ, ಐವರು ಗಂಭೀರ..!ಆಕಸ್ಮಿಕವಾಗಿ ಗಡಿರೇಖೆ ದಾಟಿ ಪಾಕ್ ವಶದಲ್ಲಿದ್ದ ಬಿಎಸ್‌ಎಫ್ ಯೋಧ ಭಾರತಕ್ಕೆ ವಾಪಾಸ್'ನಮಗೆ ತೊಂದರೆ ನೀಡಿದರೆ ನಾವು ಅವರನ್ನು ಬಿಡುವುದಿಲ್ಲ'- ಯೋಗಿ ಆದಿತ್ಯನಾಥ್‌ಪಾಕ್ ಪರ ಘೋಷಣೆ - ಟೆಕ್ಕಿ ಅರೆಸ್ಟ್‌