LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ಬಿಜೆಪಿ, ಆರ್‌ಎಸ್‌ಎಸ್‌ಗೆ ಸಂವಿಧಾನ ಖಾಲಿ ಪುಸ್ತಕ, ಆದರೆ ಕಾಂಗ್ರೆಸ್‌ಗೆ ದೇಶದ ಡಿಎನ್‌ಎ - ರಾಹುಲ್ ತಿರುಗೇಟು

ಮುಂಬೈ : ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಸಂವಿಧಾನವು ಖಾಲಿಯಾಗಿ ಕಾಣಬಹುದು. ಆದ್ರೆ ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟಕ್ಕೆ ಅದು ದೇಶದ ಡಿಎನ್‌ಎ ಎಂದು ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.

ಮಹಾರಾಷ್ಟ್ರದ ನಂದೂರ್‌ಬಾರ್‌ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿ, ಸಂವಿಧಾನದ ಖಾಲಿ ಪ್ರತಿ ಎಂಬ ಬಿಜೆಪಿಯ ಟೀಕೆಗೆ ರಾಹುಲ್ ಗಾಂಧಿ ಪ್ರತ್ಯುತ್ತರ ನೀಡಿದರು.

ಈ ಹೋರಾಟವು ಸಿದ್ಧಾಂತದ ಹೋರಾಟ, ಒಂದು ಕಡೆ ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟ ಇದೆ ಇನ್ನೊಂದು ಕಡೆ ಬಿಜೆಪಿ-ಆರ್‌ಎಸ್‌ಎಸ್ ಇದೆ. ದೇಶವು ಸಂವಿಧಾನದ ಮೂಲಕ ನಡೆಯಬೇಕು ಎಂದು ನಾವು ಹೇಳುತ್ತೇವೆ. ಆದರೆ ಪ್ರಧಾನಿ ಏನನ್ನೂ ಬರೆಯದೆ ಖಾಲಿ ಪುಸ್ತಕ ಎಂದು ಹೇಳುತ್ತಾರೆ. ಈ ಪುಸ್ತಕವು ಆರ್‌ಎಸ್‌ಎಸ್-ಬಿಜೆಪಿಗೆ ಮಾತ್ರ ಖಾಲಿಯಾಗಿದೆ, ನಮಗೆ ಇದು ದೇಶದ ಡಿಎನ್‌ಎ ಎಂದರು.

ಸಂವಿಧಾನವು ಅಂಬೇಡ್ಕರ್, ಫುಲೆಜಿ, ಶಿವಾಜಿ ಮಹಾರಾಜ್, ಭಗವಾನ್ ಬುದ್ಧ, ಮಹಾತ್ಮ ಗಾಂಧಿ ಅವರ ಚಿಂತನೆಗಳನ್ನು ಒಳಗೊಂಡಿದೆ. ಇದು ನಮಗೆ ಬರೀ ಪುಸ್ತಕವಲ್ಲ, ನಮಗೆ ಇದು ಸಾವಿರಾರು ವರ್ಷಗಳ ಹಿಂದಿನ ಚಿಂತನೆ ಮತ್ತು ಅದರಲ್ಲಿ ಏನು ಬರೆಯಲಾಗಿದೆ ಅದಕ್ಕಾಗಿ ಭಾರತದಲ್ಲಿ ಜನರು ಸಾವಿರಾರು ವರ್ಷಗಳಿಂದ ಸಾಯುತ್ತಿದ್ದಾರೆ ಮತ್ತು ಹೋರಾಡುತ್ತಿದ್ದಾರೆ ಎಂದು ಅವರು ಹೇಳಿದರು.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಂದೇ ಭಾರತ್ ಎಕ್ಸ್‍ಪ್ರೆಸ್‍ನಿಂದ ಶಿಕ್ಷಣ, ಅರೋಗ್ಯ, ವ್ಯಾಪಾರ ವಹಿವಾಟಿಗೆ ಅನುಕೂಲ; ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್ಮೆಟ್ರೋ ಯೋಜನೆಯಲ್ಲಿ ರಾಜ್ಯ ಸರ್ಕಾರದ್ದೂ ಪಾಲಿದೆ: ಸಚಿವ ಎಂ ಬಿ ಪಾಟೀಲ್.!ಕೇಂದ್ರ ಎನ್ಡಿಎ ಸರ್ಕಾರದಿಂದ ದೇಶದ ಸಾಧನೆ ಆಗಿಲ್ಲ : ಸಂತೋಷ್ ಲಾಡ್.!ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ತತ್ವ ಆದರ್ಶಗಳೇ ಜೀವನಕ್ಕೆ ಬುನಾದಿ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿಅಂಬೇಡ್ಕರ್ ವಸತಿ ಶಾಲೆಯಲ್ಲಿ ಕಲುಷಿತ ಆಹಾರ ಸೇವಿಸಿ 25 ವಿದ್ಯಾರ್ಥಿಗಳು ಅಸ್ವಸ್ಥ.!ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಇರುವಂತೆ ಸಹಕಾರಿ ಸಂಸ್ಥೆಗಳ ಅಧ್ಯಕ್ಷ ಸ್ಥಾನಕ್ಕೂ ಮೀಸಲಾತಿ.!ಹೃದಯಘಾತದಿಂದ 15 ವರ್ಷ ಬಾಲಕ ಸಾವು.!ಆಗಸ್ಟ್ 15 ರಿಂದ ಮತ್ತೆ ಮಳೆಯ ಅಬ್ಬರ: ಹವಾಮಾನ ಇಲಾಖೆ.!ಶಿಕ್ಷಕರಿಗೆ ಮಾಹಿತಿ.! ಸರ್ಕಾರಿ ಶಾಲೆ ಶಿಕ್ಷಕರ ವರ್ಗಾವಣೆ ಪರಿಷ್ಕೃತ ವೇಳಾಪಟ್ಟಿ.!ಚಿತ್ರದುರ್ಗ : ಮಹಾನಗರ ಪಾಲಿಕೆಯನ್ನಾಗಿಸಲು ನಕಾಶೆ ತಯಾರಿ: ಶಾಸಕ ಕೆ. ಸಿ ವೀರೇಂದ್ರ ಪಪ್ಪಿ.!