E-PAPER
17 Nov 2026, 12:18:46 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬಿಜೆಪಿ ಗ್ರಾಮಾಂತರ ಜಿಲ್ಲಾ ಕಾರ್ಯಕಾರಣಿ ಸಭೆ

ಬೆಳಗಾವಿ-05:ಕೇಂದ್ರದ ಮೇಲೆ‌ ಬೊಟ್ಟು ಮಾಡುವ ಕಾಂಗ್ರೆಸ್ ಸರ್ಕಾರ ಮೊದಲು ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಹಾಗೂ ಕಳೆದ 20 ವರ್ಷಗಳಿಂದ ಕೇಂದ್ರದಿಂದ ರಾಜ್ಯಕ್ಕೆ ಬಂದಿರುವ ಒಟ್ಟು ಅನುದಾನ, ತೆರಿಗೆ ಹಂಚಿಕೆ ಸೇರಿದಂತೆ ಎಲ್ಲ ಅಂಶಗಳನ್ನೊಳಗೊಂಡ ಶ್ವೇತಪತ್ರವನ್ನು ಹೊರಡಿಸುವಂತೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬೆಳಗಾವಿಯ ಮಹಾವೀರ ಭವನದಲ್ಲಿ ಸೋಮವಾರ ನಡೆದ ಗ್ರಾಮಾಂತರ ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ನವರು ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಅದು ಸತ್ಯವಾಗುವುದಿಲ್ಲ ಮುಖ್ಯಮಂತ್ರಿ ಸಿದ್ದರಾಮ್ಯಯನವರೇ, ರಾಜ್ಯದ ಜನತೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುವುದನ್ನು ಬಿಟ್ಟು, ಶ್ವೇತಪತ್ರ ಹೊರಡಿಸಿ ಬೆಳಗಾವಿ ಜಿಲ್ಲೆ ಒಂದಕ್ಕೆ 12 ಲಕ್ಷ ಪಡಿತರದಾರರಿಗೆ ಉಚಿತ ಅಕ್ಕಿ, 3.46ಲಕ್ಷ ಜನರಿಗೆ ಉಜ್ವಾಲಾ ಗ್ಯಾಸ್, 12.5 ಸಾವಿರ ಕೋಟಿ ರೈಲ್ವೆ ಯೋಜನೆ ಹೀಗೆ ಪಟ್ಟಿ ಮಾಡುತ್ತಾ ಹೊದರೆ ಹಿಂದೆದೂ ಸಿಗದಷ್ಟು ಅನುದಾನ ರಾಜ್ಯಕ್ಕೆ ಸಿಕ್ಕೆದೆ ಎಂದರು.
ವಿಧಾನ ಪರಿಷತ್ತಿನ ಸದಸ್ಯ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್.ಅರುಣ ಮಾತನಾಡಿ,
ಯುಪಿಎ ಅವಧಿಗೆ ಹೋಲಿಸಿದರೆ ಎನ್‌ಡಿಎ ಅವಧಿಯಲ್ಲಿ ದೇಶದ ಚಿತ್ರಣವೆ ಬದಲಾಗಿದೆ. ಯುವಕರಿಗೆ ಸ್ವಯಂ ಉದ್ಯೋಗ, ಕುಶಲಕರ್ಮಿ ಶ್ರಮಯೊಜನೆ ಮೂಲಕ ಕರ್ನಾಟಕಕ್ಕೆ ಹಿಂದಿನಕ್ಕಿಂತ ಮೂರು ಪಟ್ಟು ಹಣ ದೊರೆತಿದೆ. ಈ ಸತ್ಯ ಕಾಂಗ್ರೆಸ್ ಸರ್ಕಾರಕ್ಕೆ ಗೊತ್ತಿದೆ.
ಜಲಜೀವನ್ ಮಿಷನ್, ಅಮೃತ್ ಯೋಜನೆ, ಸ್ಮಾರ್ಟ್‌ಸಿಟಿ, ಪಿಎಂ ಅವಾಸ್ ಯೋಜನೆ, ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಇದುವರೆಗೆ ಎಷ್ಟು ಅನುದಾನ ನೀಡಿದೆ, ಎಷ್ಟರ ಮಟ್ಟಿಗೆ ಈ ಅನುದಾನ ಬಳಕೆಯಾಗಿದೆ ಎಂಬ ಶ್ವೇತಪತ್ರ ಹೊರಡಿಸುವ ಧಮ್ಮು ತಾಕತ್ತು ನಿಮಗಿದೆಯೇ ಎಂದು ಬಿಜೆಪಿ ವಿ.ಪ ಸದಸ್ಯ ಡಿ.ಎಸ್.ಅರುಣ ಅವರು ಸವಾಲು ಹಾಕಿದರು.
ಕೇಂದ್ರ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಪಟಾಲಮ್ ಕಟ್ಟಿಕೊಂಡು ಬೊಬ್ಬೆ ಹೊಡೆಯುತ್ತಿರುವ ಸಿದ್ದರಾಮಯ್ಯನವರೇ, ಕನ್ನಡಿಗರ ಶ್ರಮದ ಹಣವನ್ನು ವಾಮಮಾರ್ಗದಲ್ಲಿ ಸಂಗ್ರಹಿಸಿ ಛತ್ತೀಸ್‌ಘಡ, ಮಧ್ಯ ಪ್ರದೇಶ ಚುನಾವಣೆಗೆ ನೀಡಿದ ನಿಮಗೆ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಹೇಳಿದರು.
----------
ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿರಬಹುದು. 10ತಿಂಗಳ ಕಾಂಗ್ರೆಸ್ ಸರ್ಕಾರ ಜನತೆಗೆ ಬೇಸರವಾಗಿದ್ದು ಸದ್ಯದಲ್ಲಿ ಮರು ಚುನಾವಣೆ ನಡೆದರೆ ಬಿಜೆಪಿ 140ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ. ಕಾರ್ಯಕರ್ತರು ಯಾವುದೆ ಕಾರಣಕ್ಕೂ ಎದೆಗುಂದದೆ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಂಬರುವ ಲೊಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಮತ್ತು ಬೆಳಗಾವಿಯಲ್ಲಿ ವಿಜಯ ಸಾಧಿಸೋಣ. ಬೈಲಹೊಂಗಲ ಸವದತ್ತಿ ಹಾಗೂ ರಾಮದುರ್ಗದಲ್ಲಿ ಪಕ್ಷಕ್ಕೆ ಹೆಚ್ಚು ಮತಗಳು ದೊರೆಯುವಂತೆ ಶ್ರಮವಹಿಸೋಣ ಪಕ್ಷದ ಕಾರ್ಯಕರ್ತರೊಂದಿಗೆ ನಾನಿದ್ದೆನೆ ಎಂದರು.
_________

ಕಾರ್ಯಕ್ರಮದಲ್ಲಿ ಖಾನಾಪುರ ಶಾಸಕ‌ ವಿಠಲ‌ ಹಲಗೇಕರ, ಸಂಸದೆ ಮಂಗಳಾ ಅಂಗಡಿ ಮಾಜಿ ಶಾಸಕ ಅರವಿಂದ ಪಾಟೀಲ. ಜಿಲ್ಲಾ ಅಧ್ಯಕ್ಷ ಸುಭಾಷ ಪಾಟೀಲ, ಮಾಜಿ‌ ಶಾಸಕ‌ ಸಂಜಯ ಪಾಟೀಲ ಮಾತನಾಡಿದರು.
ವಿಭಾಗ ಪ್ರಭಾರಿ ಪ್ರಕಾಶ ಅಕ್ಕಲಕೋಟ ಸಮಘಟನಾತ್ಮಕ ಅವಧಿ ತಗೆದುಕೊಂಡರು. ಸಂದೀಪ ದೇಶಪಾಂಡೆ ಮೊದಿಯವರಿಗೆ ರಾಮ ಮಂದಿರ ಕಾರ್ಯನಿರ್ವಹಿಸಿದ್ದಕ್ಕೆ ಅಭಿನಂದನೆ ನಿರ್ಣಯ ಮಂಡಿಸಿದರೆ ನೀತಿನ ಚೌಗಲೆ ಅನಮೋಧನೆ ಮಾಡಿದರು.
ವೇದಿಕೆಯ ಮೇಲೆ ಮಾಜಿ ಶಾಸಕ, ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ, ಜಗದೀಶ ಮೆಟಗುಡ್, ಸುರೇಶ ಮಾರಿಹಾಳ, ಪ್ರಮೋದ ಕೋಚೇರಿ, ಬಿ.ಎಫ್.ಕೊಳದೂರ, ಮಾರುತಿ ಕೊಪ್ಪದ, ಲಕ್ಷ್ಮಣ ತಪಸಿ, ಧನಶ್ರೀ ದೇಸಾಯಿ, ರತ್ನಾ ಗೋಧಿ, ಸೊನ್ನದ, ಮಂಜುಳಾ ಹಿರೇಮಠ, ಯುವರಾಜ ಜಾಧವ, ಜಗದೀಶ ಕೌಜಗೇರಿ, ಡಾ.ಗುರುಪ್ರಸಾದ ಕೋತಿನ,ಜಿಲ್ಲಾ‌ ಮಾಧ್ಯಮ ಸಂಚಾಲಕ ಎಫ್.ಎಸ್. ಸಿದ್ದನಗೌಡರ, ಇದ್ದರು.
ಕಾರ್ಯಕ್ರಮದಲ್ಲಿ ಗುರುಪಾದ ಕಳ್ಳಿ, ಈರಣ್ಣ ಚಂದರಗಿ, ಸಂಜಯ ಕೂಬಲ, ಡಾ. ಬಸವರಾಜ ಪರವಣ್ಣವರ, ರಾಜೇಂದ್ರ ಗೌಡಪ್ಪಗೋಳ, ಮಹಾದೇವ ಶಕ್ಕಿ, ಧನಂಜಯ ಜಾಧವ, ಭಿಮಶಿ ಭರಮಣ್ಣವರ, ರಾಜೇಶ ಬೀಳಗಿ, ಗುರು ಮೆಟಗುಡ್, ಯಲ್ಲೇಶ ಕೊಲಕಾರ, ಸಂತೋಷ ದೇಶನೂರ, ವಿಠಲ‌ ಸಾಯಣ್ಣವರ, ವೀರಭದ್ರ ಪುಜಾರಿ, ಈರಣ್ಣ ಅಂಗಡಿ, ಭಿಮಶಿ ಮಳೆದವರ ನೂರಾರು ಪದಾಧಿಕಾರಿಗಳು ಇದ್ದರು. ಇದೆ ಸಂದರ್ಭದಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯಲ್ಲಿ ಯಜಮಾನ ಸ್ಥಾನವಹಿಸಿದ ನರೇಂದ್ರ ಮೋದಿಯವರಿಗೆ ಅಭಿನಂದನಾ ಪತ್ರ ಬರೆದರು

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.