LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬಿಜೆಪಿ ತೊರೆದ ಶ್ರೀರಾಮುಲು ಸಹೋದರಿ, ಮಾಜಿ ಸಂಸದೆ ಶಾಂತಾ ವೈಎಸ್​ಆರ್ ಸಿಗೆ ಸೇರ್ಪಡೆ

ಬಳ್ಳಾರಿ: ಮಾಜಿ ಸಚಿವ ಶ್ರೀರಾಮುಲು ಸಹೋದರಿ ಮಾಜಿ ಸಂಸದೆ ಜೆ. ಶಾಂತಾ ಅವರು ವೈಎಸ್​ಆರ್ ಕಾಂಗ್ರೆಸ್​​ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.

ಕರ್ನಾಟಕ ಬಿಜೆಪಿ ತೊರೆದು ಆಂಧ್ರ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ಶಾಂತಾ ಅವರು ಆಂಧ್ರ ಸಿಎಂ ಜಗನ್ಮೋಹನರೆಡ್ಡಿ ನೇತೃತ್ವದಲ್ಲಿ ವಿಜಯವಾಡ ತಾಡಿಪಲ್ಲಿ ಸಿಎಂ ಕ್ಯಾಂಪ್ ಆಫೀಸ್ ನಲ್ಲಿ ವೈಎಸ್ಆರ್​​​​​ಪಿ‌ ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಸ್ವತಃ ವೈಎಸ್​ಆರ್ ಕಾಂಗ್ರೆಸ್​ ಪಕ್ಷ ತನ್ನ​ ಸಾಮಾಜಿಕ ಜಾಲತಾಣ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದೆ

ಮುಂದಿನ ಲೋಕಸಭೆಯ ‌ ಚುನಾವಣೆಯಲ್ಲಿ ವೈಎಸ್ಆರ್​​​​ಪಿಯಿಂದ ಹಿಂದುಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಹಿಂದುಪುರ ಕ್ಷೇತ್ರ ಅನಂತಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರಲಿದೆ. ಹಿಂದುಪುರ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯ ನಾಲ್ಕುವರೆ ಲಕ್ಷ ಮತದಾರರಿದ್ದಾರೆ. ರಾಜ್ಯದಲ್ಲಿ ವಾಲ್ಮೀಕಿ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೆ, ಆಂಧ್ರದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದೆ.

ಜೆ.ಶಾಂತಾ 2009ರಲ್ಲಿ ಶ್ರೀರಾಮುಲು ಸಹಕಾರದಿಂದ ಬಳ್ಳಾರಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೇ 20ರವರೆಗೆ ಕೇರಳದ ಕೆಲವು ರಾಜ್ಯಗಳಿಗೆ ರೆಡ್ ಅಲರ್ಟ್‌ ಘೋಷಣೆಮಾಲಿವಾಲ್ ಮೇಲೆ ಹಲ್ಲೆ ಕೇಸ್‌-ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್ 5 ದಿನ ಕಸ್ಟಡಿಗೆಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್ ವಾರಂಟ್ ಜಾರಿಗೊಳಿಸಿದ ಕೋರ್ಟ್ವಾಹನ ಸವಾರರೇ ಗಮನಿಸ - ಜೂನ್ 1ರಿಂದ ಚಾಲನಾ ಪರವಾನಿಗೆ ನಿಯಮ ಬದಲಾವಣೆ'ದೇವರಾಜೇಗೌಡ ಮೋಸ್ಟ್ ಕ್ರಿಮಿನಲ್ ಮ್ಯಾನ್'- ಶಿವರಾಮೇಗೌಡಜಮ್ಮು-ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿ- ಬಿಜೆಪಿಯ ಮಾಜಿ ಸರ್ಪಂಚ್‌ ಬಲಿ, ದಂಪತಿಗೆ ಗಾಯಮಂಗಳೂರು: ಶಬರಿಮಲೆ ಯಾತ್ರಾರ್ಥಿ ಕೇರಳದಲ್ಲಿ ಹೃದಯಾಘಾತದಿಂದ ಸಾವು..!ಪ್ರಧಾನಿ ನರೇಂದ್ರ ಮೋದಿ ಹೊಸ ಬಯೋಪಿಕ್ ​: ಮೋದಿ ಪಾತ್ರದಲ್ಲಿ ಕಟ್ಟಪ್ಪ?ಏರ್ ಇಂಡಿಯಾ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ- ಪ್ರಯಾಣಿಕರು ಅಪಾಯ ಪಾರುಕಿರ್ಗಿಸ್ತಾನ್‌ನಲ್ಲಿ ಭಾರತ, ಪಾಕ್ ವಿದ್ಯಾರ್ಥಿಗಳ ಮೇಲೆ ಹಲ್ಲೆ