LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬಿಜೆಪಿ ದೇಶದಲ್ಲೇ ಅತ್ಯಂತ ಶ್ರೀಮಂತ ಪಕ್ಷ: 8,829.16 ಕೋಟಿ ರೂ. ಆಸ್ತಿ, ಕಾಂಗ್ರೆಸ್ ಬಳಿ 6,046 ಕೋಟಿ ರೂ. ಆಸ್ತಿ

ನವದೆಹಲಿ: ರಾಜಕೀಯ ಪಕ್ಷಗಳು ತಮ್ಮ ಆಸ್ತಿ ವಿವರವನ್ನು ಪ್ರಕಟಿಸಿವೆ. ದೇಶದ ಎಂಟು ರಾಷ್ಟ್ರೀಯ ಪಕ್ಷಗಳು 2021-22ರಲ್ಲಿ ಒಟ್ಟು 8,829.16 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿವೆ. ಈ ಪೈಕಿ ಆಡಳಿತರೂಢ ಬಿಜೆಪಿ ಅತ್ಯಂತ ಶ್ರೀಮಂತ ಪಕ್ಷವಾಗಿದ್ದು, 6,046 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದೆ.

2020-21ರಲ್ಲಿ ಈ ಎಂಟು ರಾಷ್ಟ್ರೀಯ ಪಕ್ಷಗಳ ಒಟ್ಟು ಆಸ್ತಿ 7,297.62 ಕೋಟಿ ರೂ.ಗಳಷ್ಟಿತ್ತು ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ವರದಿ ಮಾಡಿದೆ. ಎಂಟು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಎನ್ಸಿಪಿ, ಬಿಎಸ್ಪಿ, ಸಿಪಿಐ, ಸಿಪಿಐ(ಎಂ), ಎಐಟಿಸಿ ಮತ್ತು ಎನ್ಪಿಇಪಿ ಘೋಷಿಸಿದ 2020-21 ಮತ್ತು 2021-22ನೇ ಸಾಲಿನ ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ಎಡಿಆರ್ ವಿಶ್ಲೇಷಿಸಿದೆ. ಎಡಿಆರ್ ಪ್ರಕಾರ, 2020-21ರ ಆರ್ಥಿಕ ವರ್ಷದಲ್ಲಿ, ಬಿಜೆಪಿಯು 4,990 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿತ್ತು. 2021-22 ರಲ್ಲಿ ಕೇಸರಿ ಪಕ್ಷದ ಆಸ್ತಿ 6,046.81 ಕೋಟಿಗೆ ಅಂದರೆ ಶೇ. 21.17 ರಷ್ಟು ಹೆಚ್ಚಾಗಿದೆ.

2020-21ರಲ್ಲಿ ಕಾಂಗ್ರೆಸ್ ಘೋಷಿತ ಆಸ್ತಿ 691.11 ಕೋಟಿ ರೂ.ಗಳಷ್ಟಿತ್ತು. ಇದು 2021-22ರಲ್ಲಿ ಶೇ.16.58 ರಷ್ಟು ಏರಿಕೆಯಾಗಿ 805.68 ಕೋಟಿ ರೂ.ಗೆ ತಲುಪಿದೆ. ಬಿಎಸ್ಪಿ ತನ್ನ ವಾರ್ಷಿಕ ಘೋಷಿತ ಆಸ್ತಿಯಲ್ಲಿ ಇಳಿಕೆಯನ್ನು ತೋರಿಸಿರುವ ಏಕೈಕ ರಾಷ್ಟ್ರೀಯ ಪಕ್ಷವಾಗಿದೆ ಎಂದು ವರದಿ ಹೇಳಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪೈಪ್ ನಲ್ಲಿ ಅಮೋನಿಯಾ ಗ್ಯಾಸ್‌ ಸೋರಿಕೆ- ಆರು ಮಂದಿ ಅಸ್ವಸ್ಥಜ.1 ಇಸ್ರೋದಿಂದ ಬ್ಲಾಕ್ ಹೋಲ್ ಅಧ್ಯಯನಕ್ಕೆ ಹೊಸ ಉಪಗ್ರಹ ಉಡಾವಣೆಸಿಎಂ ಗೆ ಅವಹೇಳನ ಮಾಡಿದ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‍ಐಆರ್ ದಾಖಲು..!ಹೊಟೇಲ್ ವೇಟರ್ ಆದ ಉರ್ಫಿ ಜಾವೇದ್.!ವಿಜ್ಞಾನ ಕೇಂದ್ರಗಳು, ತಾರಾಲಯಗಳಿಗೆ ಏಕರೂಪದ ವಿನ್ಯಾಸ ರಚನೆ: ಸಚಿವ ಭೋಸರಾಜುಬಹಳ ದಿನಗಳಿಂದ ಕಾಯುತ್ತಿದ್ದರು ಸ್ವಂತ ಮನೆ ಭಾಗ್ಯ ಸಿಗುತ್ತಿಲ್ಲವೇ..? ಇಂತಹ ಯಂತ್ರವನ್ನು ಈ ಸ್ಥಳದಲ್ಲಿ ಇರಿಸಿ!ಆಗ್ರಾ- ಲಖನೌ ಎಕ್ಸ್‌ಪ್ರೆಸ್‌ವೇನಲ್ಲಿ ಸರಣಿ ಅಪಘಾತ- ಓರ್ವ ಸಾವು, ಹಲವು ಮಂದಿಗೆ ಗಾಯದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿಯ ಬಳಿ ಸ್ಫೋಟಗಂಡನೊಂದಿಗೆ ಸಂಸಾರ ಮಾಡಲು ನಿರಾಕರಿಸಿದ ಮಗಳನ್ನ ಸುಟ್ಟುಹಾಕಿದ ತಂದೆಮಾರ್ಚ್‌ 11ರಿಂದ 5, 8 ಮತ್ತು 9ನೇ ತರಗತಿಯ ಪರೀಕ್ಷೆ, ತಾತ್ಕಾಲಿಕ ವೇಳಾಪಟ್ಟಿ ಪ್ರಕಟ