LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬೆಂಗಳೂರು: ಕುಟುಂಬಕ್ಕೆ ಮರಳು ಮಾಫಿಯಾದಿಂದ ಬೆದರಿಕೆ ಹಿನ್ನೆಲೆ ತನಿಖೆ ನಡೆಸಲು ಸಿಎಂ ನಿರ್ದೇಶನ

ಬೆಂಗಳೂರು: ತನ್ನ ಕುಟುಂಬಕ್ಕೆ ಮರಳು ಮಾಫಿಯಾದಿಂದ ಬೆದರಿಕೆ ಇದೆ. ಈ ಹಿನ್ನೆಲೆಯಲ್ಲಿ ರಕ್ಷಣೆ ನೀಡುವಂತೆ ಕೋರಿ ಎನ್‌ಆರ್‌ಐ ಒಬ್ಬರು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

ಸದ್ಯ ಕೆನಡಾದಲ್ಲಿ ನೆಲೆಸಿರುವ ಮಂಜು ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ನಮ್ಮ ಕುಟುಂಬವು ಮರಳು ಮಾಫಿಯಾದಿಂದ ಹಿಂಸೆ ಎದುರಿಸುತ್ತಿದೆ. ವಯಸ್ಸಾದ ತಾಯಿಯ ಮೇಲೆ ಹಲ್ಲೆ ನಡೆಸಲಾಗಿದೆ. ನಾನು ಕೆನಡಾದಲ್ಲಿದ್ದು, ಕರ್ನಾಟಕದ ಸಿಎಂ ನಮಗೆ ಸಹಾಯ ಮಾಡಬೇಕು" ಎಂದು ಮಂಜು ಅವರು ಟ್ವೀಟ್ ಮಾಡಿದ್ದರು.

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳ ಕಚೇರಿ, ''ಮಂಜು ಅವರು ಮಾಡಿರುವ ಮನವಿಯನ್ನು ಸಿಎಂ ಸಿದ್ದರಾಮಯ್ಯ ಮನ್ನಣೆಗೆ ತೆಗೆದುಕೊಂಡಿದ್ದಾರೆ. ದೂರಿನ ಆಧಾರದ ಮೇಲೆ ತಕ್ಷಣವೇ ತನಿಖೆ ನಡೆಸಿ ನ್ಯಾಯ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ" ಎಂದು ಮರು ಟ್ವೀಟ್ ಮಾಡಲಾಗಿದೆ.

ಮಂಜು ಅವರು ತಮ್ಮ ಟ್ವೀಟ್‌ನಲ್ಲಿ ಪತ್ರವನ್ನು ಲಗತ್ತಿಸಿದ್ದು, “ಪ್ರೀತಿಯ ಸಿದ್ದರಾಮಯ್ಯ ಸರ್, ನಮ್ಮ ಮಾನ್ಯ ಸಚಿವ ಮಧು ಬಂಗಾರಪ್ಪ ಅವರ ತವರು ಕುಬಟೂರು ಬಳಿಯ ಲಕ್ಕವಳ್ಳಿ ಗ್ರಾಮದಲ್ಲಿ ನಡೆದ ನೋವಿನ ಘಟನೆಗೆ ಸಂಬಂಧಿಸಿದಂತೆ ನಿಮ್ಮ ತುರ್ತು ಸಹಾಯವನ್ನು ಕೋರಿ ನಾನು ನಿಮಗೆ ತೀವ್ರ ಕಳವಳದಿಂದ ಪತ್ರ ಬರೆಯುತ್ತಿದ್ದೇನೆ

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಖುಷಿ ಸುದ್ದಿ.!ಪದವಿ ವಿದ್ಯಾರ್ಥಿಗಳಿಗೆ ಬಿಗ್ ಶಾಕ್‌!ಶುಲ್ಕ ಹೆಚ್ಚಳ ಇಷ್ಟು.!ರೈಲ್ವೆ ಪ್ರಯಾಣಿಕರಿಗೆ ಮುಖ್ಯವಾದ ಮಾಹಿತಿ.!ಗಿಗ್ ಕಾರ್ಮಿಕರ ವಿಮಾ ಯೋಜನೆ: ನೋಂದಾಯಿಸಲು ಸೂಚನೆಕೇಬಲ್ ಟೆವಿಲಿಷನ್ ಮೇಲ್ವಿಚಾರಣಾ ಸಮಿತಿ ಸಭೆ : ಜಾಹಿರಾತು ಸಂಹಿತೆ ಪಾಲನೆ ಮಾಡುವುದು ಕಡ್ಡಾಯ; ಜಿಲ್ಲಾಧಿಕಾರಿ ಡಾ: ವೆಂಕಟೇಶ್ ಎಂ.ವಿ-----ಬಿಬ್ಬಿ ಬಾಚಯ್ಯ  ಅವರ ವಚನ …!ತ್ರಿಶೂರ್‌ನಲ್ಲಿ ಪ್ರಧಾನಿ ಮೋದಿ ರೋಡ್ ಶೋಕಂಟಕವಾದ ಹೊಸ ಮೊಬೈಲ್‌- ಬ್ಲಾಸ್ಟ್‌ ಆಗಿ ಯುವಕ ಸೇರಿದ ಆಸ್ಪತ್ರೆ!'ನಮ್ಮ ಗ್ಯಾರಂಟಿ ಯೋಜನೆಗಳೇ ಜನರ ಕಷ್ಟ ನಿವಾರಣೆಯ ಮಂತ್ರಾಕ್ಷತೆ, ಅನ್ನಭಾಗ್ಯ ಅಕ್ಕಿಗೆ ಅರಿಶಿನ ಹಚ್ಚಿ "ಮಂತ್ರಾಕ್ಷತೆ" ಮಾಡಿ ಹಂಚುತ್ತಿದ್ದಾರೆ'-ಡಿಸಿಎಂಸೈಬರ್ ವಂಚಕರ ಬಲೆಗೆ ಬಿದ್ದ ನಟಿ ಅಂಜಲಿ ಪಾಟೀಲ್ - 5.79 ಲಕ್ಷ ರೂ. ಪಂಗನಾಮ