LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬೆಂಗಳೂರು: ಕೊಲೆಮಾಡಿ 1550 ಕಿ.ಮೀ ಬೈಕ್ ರೈಡ್ ಮಾಡಿಕೊಂಡು ಎಸ್ಕೇಪ್ ಆಗಿದ್ದ ಆರೋಪಿ ಮುಕ್ತಿ

ಬೆಂಗಳೂರು: ವೈಯ್ಯಾಲಿಕಾವಲ್ ಮಹಾಲಕ್ಷ್ಮಿ ಭೀಕರ ಹತ್ಯೆ ಕೇಸ್ ಆರೋಪಿ ಮುಕ್ತಿ ರಂಜನ್ ರಾಯ್ ಕೊಲೆಯ ನಂತರ ಬೈಕ್‌ನಲ್ಲಿ ಬೆಂಗಳೂರಿನಿಂದ ಒಡಿಶಾಗೆ ಆರೋಪಿ ಎಸ್ಕೇಪ್ ಆಗಿದ್ನಂತೆ. ಬೆಂಗಳೂರು ಆಂಧ್ರಪ್ರದೇಶ ಪಶ್ಚಿಮಬಂಗಾಳ ಮಾರ್ಗವಾಗಿ ಒಡಿಶಾದ ಭದ್ರಕ್ ಬಳಿಯ ಬೋನಿಪುರ ಹುಟ್ಟೂರಿಗೆ ಹೋಗಿದ್ದನಂತೆ. ಬಸ್, ರೈಲು ಅಥವಾ ಪ್ಲೈಟ್‌ನಲ್ಲಿ ಹೋದರೆ ಪೊಲೀಸರು ಪತ್ತೆ ಮಾಡಬಹುದು ಅನ್ನೋ ಹಿನ್ನೆಲೆಯಲ್ಲಿ ಮುಕ್ತಿ ತನ್ನ ಬಜಾಜ್ ಪ್ಲಾಟಿಮ ಬೈಕ್ ನಲ್ಲೆ ಕೊಲೆಯ ನಂತರ ಬೆಂಗಳೂರಿನಿಂದ 1550 ಕಿಲೋ ಮೀಟರ್ ಸಂಚಾರ ಮಾಡಿದ್ದಾನೆ. ಬೆಂಗಳೂರಿನಿಂದ ಎರಡೂವರೆ ದಿನ ಬೈಕ್ ಓಡಿಸಿ ಹುಟ್ಟೂರಿಗೆ ಹೋಗಿದ್ದಾನೆ. ಮಹಾಲಕ್ಷ್ಮಿ ಹತ್ಯೆಯ ಬಗ್ಗೆ ಆರೋಪಿ ತನ್ನ ಸಹೋದರ ಶಕ್ತಿರಂಜನ್ ರಾಯ್ ಹಾಗೂ ತಾಯಿಗೆ ಮಾಹಿತಿ ನೀಡಿದ್ದ. ಮೃತ ಮಹಾಲಕ್ಷ್ಮಿ ವಿರುದ್ಧ ಆರೋಪಿ ಮುಕ್ತಿರಂಜನ್ ಸಹೋದರ ಶಕ್ತಿರಂಜನ್ ಸುಲಿಗೆ ಆರೋಪ ಮಾಡಿದ್ದು, ಮಹಾಲಕ್ಷ್ಮಿಯಿಂದಾಗಿ ಮುಕ್ತಿರಂಜನ್ ಮನೆಗೆ ಹಣ ಕಳಿಸೋದನ್ನೆ ನಿಲ್ಲಿಸಿದ್ದ. ಮಹಾಲಕ್ಷ್ಮಿ ನನ್ನ ಸಹೋದರನನ್ನ ಬೆದರಿಸಿ ಹಣಕ್ಕೆ ಡಿಮ್ಯಾಂಡ್ ಮಾಡ್ತಿದ್ಲು. ಮಹಾಲಕ್ಷ್ಮಿ, ಮುಕ್ತಿರಂಜನ್ ರಾಯ್‌ನಿಂದ ಚಿನ್ನದಸರ, ಮೂರು ಉಂಗುರ, ದುಬಾರಿ ಮೊಬೈಲ್ ಪಡೆದಿದ್ದಳು. ಕೊಲೆಯ ನಂತರ ಮುಕ್ತಿರಂಜನ್ ರಾಯ್ ಮೂರು ದಿನ ನನ್ನೊಟ್ಟಿಗೆ ಬೆರ್ಹಾಪುರಂ ನಲ್ಲಿ ವಾಸವಿದ್ದ. ಎಲ್ಲ ವಿಚಾರವನ್ನು ನನ್ನೊಟ್ಟಿಗೆ ಹಾಗೂ ತಾಯಿಗೆ ತಿಳಿಸಿದ್ದ ಎಂದು ಆರೋಪಿ ಸಹೋದರ ಶಕ್ತಿರಂಜನ್ ಪೊಲೀಸರ ಮುಂದೆ ಹೇಳಿದ್ದಾನೆ. ಮಹಾಲಕ್ಷ್ಮಿ ಕೊಲೆಯ ನಂತರ ಕೊಲೆ ವಿಚಾರವನ್ನು ಇಬ್ಬರು ಸಹೋದರರು ಹಾಗೂ ತಾಯಿಗೆ ತಿಳಿಸಿದ್ದಾನೆ. ಮುಕ್ತಿರಂಜನ್ ತಂದೆ ತಾಯಿಯನ್ನ ಭೇಟಿಯಾದ ಬಳಿಕ ಮುಂಜಾನೆ ನೇಣಿಗೆ ಶರಣಾಗಿದ್ದಾನೆ. ಮಹಾಲಕ್ಷ್ಮಿ ಕೊಲೆ ವಿಚಾರವನ್ನು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿರೋ ಮುಕ್ತಿ ಸೆಪ್ಟೆಂಬರ್ 2ರಂದು ನನಗೂ ಮಹಾಲಕ್ಷ್ಮಿಗೂ ಗಲಾಟೆಯಾಯಿತು. ಮಹಾಲಕ್ಷ್ಮಿ ನನ್ನ ಮೇಲೆ ಹಲ್ಲೆ ಮಾಡಿದಳು. ನಾನು‌ ಮಹಾಲಕ್ಷ್ಮಿ ಕಪಾಳಕ್ಕೆ ಹೊಡೆದೆ ಈ ವೇಳೆ ಕುಸಿದುಬಿದ್ದು ಮೃತಪಟ್ಟಳು. ಬಳಿಕ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿ ತುಂಬಿ ಒಡಿಶಾಗೆ ಬಂದೆ ಎಂದು ಮುಕ್ತಿರಂಜನ್ ರಾಯ್ ಡೆತ್ ನೋಟ್ ನಲ್ಲಿ ಬರೆದಿದ್ದಾನಂತೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರನ್ಯಾ ಚಿನ್ನ ಸಾಗಣೆ ಪ್ರಕರಣ: ಡಿಜಿಪಿ ರಾಮಚಂದ್ರ ರಾವ್ ವಿರುದ್ಧ ತನಿಖೆಗೆ ಆದೇಶಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಭೇಟಿಚಾಲಕ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದರೂ ಇನ್ಸೂರೆನ್ಸ್ ಕಂಪನಿ ವಿಮೆ ಪಾವತಿಸಬೇಕು - ಹೈಕೋರ್ಟ್ ಮಹತ್ವದ ತೀರ್ಪುಹೆಚ್‌ಡಿಕೆಗೆ ಅನಾರೋಗ್ಯ-ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ'ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್ ಎಂದು ಬರೆಸುವಂತಿಲ್ಲ'- ಪರಮೇಶ್ವರ್‌ಈ ತಿಂಗಳಲ್ಲಿ ಸಂಭವಿಸಲಿದೆ ಎರಡು ಗ್ರಹಣಮತ್ತೊಂದು ಪ್ರಶಸ್ತಿ ಮುಡಿಗೇರಿಸಿಕೊಂಡ ಮಂಗಳೂರು ವಿಮಾನ ನಿಲ್ದಾಣಮಾರಿಷಸ್‌ಗೆ ತೆರಳಿದ ಪ್ರಧಾನಿ ಮೋದಿ: ಪ್ರಮುಖ ಒಪ್ಪಂದಗಳಿಗೆ ಸಹಿ ನಿರೀಕ್ಷೆಅನರ್ಹ ಬಿಪಿಎಲ್ ಫಲಾನುಭವಿಗಳ ಪತ್ತೆಗೆ ಮನೆ ಮನೆ ಪರಿಶೀಲನೆಗೆ ಸರ್ಕಾರ ನಿರ್ಧಾರ: ಸಚಿವ ಮುನಿಯಪ್ಪ‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ ಅಂಗೀಕಾರ….!