ಬೆಂಗಳೂರು : ಝೀಕಾಗಿಂತ ನಿಫಾ ಡೇಂಜರಸ್ ಅಂತೆ
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಒಂದು ಕಡೆ ಡೆಂಗ್ಯೂ ಡಬಲ್ ಆಗಿ ಆರ್ಭಟ ಹೆಚ್ಚಿಸುತ್ತಿದ್ದರೆ ಇನ್ನೊಂದೆಡೆ ನಿಫಾ ಆತಂಕ ಕೂಡ ಶುರುವಾಗಿದೆ. ಖುದ್ದು ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಜನರಿಗೆ ಸಲಹೆ ಕೊಟ್ಟಿದ್ದು ನಿಫಾ ವೈರಸ್ ಸದ್ಯ ನಮ್ಮ ರಾಜ್ಯದಲ್ಲಿ ಕಂಡು ಬಂದಿಲ್ಲ ಹೀಗಾಗಿ ಅನವಶ್ಯ ಆತಂಕ ಪಡೋದು ಬೇಡ ಆದ್ರೆ ಝೀಕಾಗಿಂತ ನಿಫಾ ತುಂಬಾ ಅಪಾಯಕಾರಿಯಾಗಿದೆ. ಕೇರಳದಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ. ಕೇರಳಕ್ಕೆ ಹೋಗದಂತೆ ಈಗಾಗಲೇ ಮಾರ್ಗಸೂಚಿ ಹೊರಡಿಸಿದ್ದೇವೆ ಅಗತ್ಯವಿದ್ರೆ ಮಾತ್ರ ಕೇರಳಕ್ಕೆ ಹೋಗಿ ಸದ್ಯ ರಾಜ್ಯದಲ್ಲಿ ಇದುವರೆಗೆ ಯಾವುದೇ ಪ್ರಕರಣ ಪತ್ತೆಯಿಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ ಅಂತ ತಿಳಿಸಿದ್ರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.