LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬೆಂಗಳೂರು: ತರುಣ್ ಸುಧೀರ್ ಮದುವೆಗೆ ಹೋಗ್ತಾರಾ ದರ್ಶನ್..? ಕಾನೂನು ಏನು ಹೇಳುತ್ತೆ..?

ಬೆಂಗಳೂರು: ಮದುವೆ ಡೇಟ್ ಮಾತ್ರ ಮುಂದಕ್ಕೆ ಹಾಕ್ಬೇಡ ನಾನು ಮದುವೆಗೆ ಬರ್ತಿನಿ ಅಂತ ನಿರ್ದೇಶಕ‌ ತರುಣ್ ಸುಧೀರ್‌ಗೆ ದರ್ಶನ್ ಮಾತು ಕೊಟ್ಟಿದ್ದಾರಂತೆ. ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ತರುಣ್ ಮದುವೆ ಡೇಟ್ ಮುಂದಕ್ಕೆ ಹಾಕ್ತಿನಿ ಅಂದಾಗ ದರ್ಶನ್ ಯಾವುದೇ ಕಾರಣಕ್ಕೂ ಮದುವೆ ಡೇಟ್ ಚೇಂಜ್ ಆಗಬಾರದು. ಫಿಕ್ಸ್ ಆಗಿರೊ ದಿನಾಂಕದಲ್ಲೆ ಮದುವೆ ನಡೆಯಬೇಕು ಅಂತ‌ ಹೇಳಿರೋದಕ್ಕೆ ತರುಣ್ ಮದುವೆ ಡೇಟ್ ಫಿಕ್ಸ್ ಮಾಡಿದ್ದಾರೆ‌.

ಆದ್ರೆ ನಿರ್ದೇಶಕ ತರುಣ್ ಸುಧೀರ್ ಮದುವೆಗೆ ಬರ್ತಾರಾ ದರ್ಶನ್ ಅನ್ನೋದೆ ಪ್ರಶ್ನೆ..!? ಜೈಲು ನಿಯಮಾವಳಿಗಳಲ್ಲಿ ದರ್ಶನ್ ಮದುವೆಗೆ ಬರಲು ಅವಕಾಶ ಇದ್ಯಾ.? ಅಂತ ನೋಡೋದಾದ್ರೆ ಖಂಡಿತವಾಗಿ ಆ ಅವಕಾಶ ಇಲ್ಲ, ನಟ ದರ್ಶನ್ ಈಗ ವಿಚಾರಣಾಧೀನ ಕೈದಿ ಸಜಾ ಕೈದಿಯಾಗಿದ್ರೆ ಪರೋಲ್ ಮೇಲ್ ದರ್ಶನ್ ಮದುವೆಗೆ ಬಂದು ಹೋಗುವ ಅವಕಾಶ ಸಿಗ್ತಿತ್ತು. ಯಾವೂದೇ ಕೈದಿಯ ಮಗ ಅಥವಾ ಮಗಳ ಮದುವೆ ಆಗಿದ್ರೆ ಮಾತ್ರ ಅದಕ್ಕೆ ಅವಕಾಶ ವಿದೆ.

ಸ್ವಂತ ಮಕ್ಕಳ ಮದುವೆಗೆ ಬಿಟ್ಟು, ಸಂಬಂಧಿಕರು ಹಾಗೂ ಸ್ನೇಹಿತರ ಮದುವೆ ಅವಕಾಶವಿಲ್ಲ. ಹೀಗಾಗಿ ದರ್ಶನ್ ಗೆ ಪೆರೋಲ್ ಕೊಡಲು ಬರೋದಿಲ್ಲ. ಅಲ್ಲದೇ ರೇಣುಕಾಸ್ವಾಮಿ ಕೊಲೆ ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ಪೊಲೀಸರು ಇನ್ನೂ ತನಿಖೆ ಪೂರ್ಣಗೊಳಿಸಿಲ್ಲ. ಅಲ್ಲದೇ ನಟ ದರ್ಶನ್ ಇನ್ನು ಜಾಮೀನಿಗೆ ಅರ್ಜಿ ಕೂಡ ಸಲ್ಲಿಸಿಲ್ಲ. ಜಾಮೀನು ಸಿಗದೇ ನಟ ದರ್ಶನ್ ಜೈಲಿನಿಂದ ಹೊರ ಬರೋದಕ್ಕೆ ಸಾಧ್ಯವಿಲ್ಲ. ಇತ್ತ ಪೊಲೀಸರು ತನಿಖೆ ಇನ್ನು ಮುಂದುವರೆಸಿದ್ದು, ಚಾರ್ಜ್ ಶೀಟ್ ಕೂಡ ಸಲ್ಲಿಸಿಲ್ಲ.

ತರುಣ್ ಸುಧೀರ್ ಮದುವೆ ನಿಶ್ಚಯವಾಗಿರೋದು ಆಗಸ್ಟ್ 10-11ಕ್ಕೆ , ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಲು ಸೆಪ್ಟೆಂಬರ್ 8 ರವರೆಗೆ ಕಾಲಾವಕಾಶ ಇದೆ. ಹೀಗಾಗಿ ತರುಣ್ ಸುಧೀರ್ ಮದುವೆಗೆ ದರ್ಶನ್ ಬರೋದು ಬಹುತೇಕ ಅನುಮಾನವಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಹಿಳಾ ಉದ್ಯೋಗಿಗಳಿಗೆ ವರ್ಕ್​ ಫ್ರಂ ಹೋಂ ನಿಯಮ ಜಾರಿಗೆ ಮುಂದಾದ ಆಂದ್ರಪ್ರದೇಶಪ್ರಧಾನಿ ಮೋದಿ ವಿಮಾನದ ಮೇಲೆ ದಾಳಿ ಮಾಡುವುದಾಗಿ ಉಗ್ರರ ಎಚ್ಚರಿಕೆ..!ರೇಷನ್‌ ಕಾರ್ಡ್‌ ನಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಮತ್ತೊಮ್ಮೆ ಅವಕಾಶಪತ್ನಿ ಅನುಮತಿ ಇಲ್ಲದೆ, ಆಕೆಗೆ ಗೊತ್ತಿಲ್ಲದೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧವಲ್ಲ: ಹೈಕೋರ್ಟ್ಮೈಸೂರು ಗಲಭೆ ಹಿಂದೆ RSS ಕೈವಾಡ: ಲಕ್ಷ್ಮಣ್ ಆರೋಪಬೈಕ್ ಚಲಾಯಿಸಿದ ಅಪ್ರಾಪ್ತನ ಪೋಷಕರಿಗೆ 25 ಸಾವಿರ ರೂಪಾಯಿ ದಂಡಬಿಸಿಲಿನ ತಾಪಕ್ಕೆ ಹೊಸ ಗೈಡ್ ಲೈನ್ಸ್ ಬಿಡುಗಡೆ ಮಾಡಿದ ಸರ್ಕಾರಕ್ರಿಕೆಟ್‌ನಲ್ಲಿ ಬಳಸಲಾಗುವ ಕ್ಯಾಮೆರಾಗಳ ಬೆಲೆ ಎಷ್ಟು ಗೊತ್ತಾ?ಅಯೋಧ್ಯೆಯ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ನಿಧನಭಾರತ ತಂಡಕ್ಕೆ ಮೊಹಮ್ಮದ್ ಸಿರಾಜ್ ಮತ್ತೆ ಆಯ್ಕೆ