LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ

 

  ದಾವಣಗೆರೆ : ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ವತಿಯಿಂದ ರೈತರ ಆರ್ಥಿಕ ಅಭಿವೃದ್ದಿಗೋಸ್ಕರ ಮೆಕ್ಕೆಜೋಳ ಬೆಳೆದ ರೈತರಿಗೆ ನೆರವಾಗಲು, ಕರ್ನಾಟಕ ಹಾಲು ಮಹಾಮಂಡಳಿಯಿಂದ ರೈತರಿಂದ ಮೆಕ್ಕೆಜೋಳವನ್ನು ನೇರವಾಗಿ ಪ್ರತಿ ಕ್ವಿಂಟಾಲ್‍ಗೆ ರೂ.2400/-ರ ಬೆಲೆಯಲ್ಲಿ ಖರೀದಿಸಲು ತೀರ್ಮಾನಿಸಲಾಗಿದೆ.

ಮೆಕ್ಕೆಜೋಳ ಬೆಳೆದಿರುವ ಆಸಕ್ತ ರೈತರು ಸಮೀಪದ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಒಂದು ಕೆ.ಜಿ. ಪ್ರಮಾಣದಷ್ಟು ಮೆಕ್ಕೆಜೋಳದ ಮಾದರಿಯನ್ನು ನೀಡಿ, ಪ್ರೊಟ್ಸ್  ತಂತ್ರಾಂಶದಲ್ಲಿ ನೊಂದಾವಣೆಯಾಗಿರುವ ಸಂಖ್ಯೆಯೊಂದಿಗೆ ನೊಂದಾಯಿಸಿಕೊಳ್ಳಬಹುದು. ನೊಂದಣೆ ಪ್ರಕ್ರಿಯೆಯು ನ.11 ರಿಂದ ಪ್ರಾರಂಭವಾಗುತ್ತಿದ್ದು, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಲಾಗಿರುತ್ತದೆ.

ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಪ್ರಸ್ತುತ ಬಳಕೆ ಮಾಡುತ್ತಿರುವ ಕ್ಷೀರಸಿರಿ ಮತ್ತು ಸರಕಾರದ ಕೃಷಿ ಇಲಾಖೆ ಸಿದ್ಧಪಡಿಸಿರುವ ಪ್ರೋಟ್ಸ್ ತಂತ್ರಾಂಶದ ಮೂಲಕ  ಮಕ್ಕೆಜೋಳ ಖರೀದಿ ಪ್ರಕ್ರಿಯೆಯನ್ನು ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಮೆಕ್ಕೆಜೋಳ ಬೆಳೆದ ಆಸಕ್ತ ರೈತರು, ತಮ್ಮ ಮೆಕ್ಕೆಜೋಳದ ಮಾದರಿಗಳನ್ನು ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ನೀಡಬಹುದು. ಪ್ರತಿ ಒಬ್ಬ ರೈತರಿಂದ ಗರಿಷ್ಠ 500 ಕ್ವಿಂಟಾಲ್ ಮೆಕ್ಕೆಜೋಳ ಸರಬರಾಜಿಗೆ ಸೀಮಿತಗೊಳಿಸಿದ್ದು, ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕಿಗೆ ಸಹಾಯಕ ವ್ಯವಸ್ಥಾಪಕರು (ಪ.ಸಂ)  ದಾ.ಸೂರಜ್, ಮೊ.ಸಂ: 9844346640, ಹೊನ್ನಾಳಿ, ಚನ್ನಗಿರಿ ಹಾಗೂ ನ್ಯಾಮತಿ ಸಹಾಯಕ ವ್ಯವಸ್ಥಾಪಕರು (ಎಫ್&ಎಫ್) ಹರೀಶ್ ಕರೇಗೌಡ ಮೊ.ಸಂ: 7399530405 ಸಂಪರ್ಕಿಸಲು ಶಿಕಾರಿಪುರದ ಪಶು ಆಹಾರ ಘಟಕದ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆ.15ರಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ಲಾಸ್ಟಿಕ್ ನಿಷೇಧ!!ಆ.17ರಂದು ಬಿಜೆಪಿಯಿಂದ ಧರ್ಮಸ್ಥಳ ಚಲೋ..!1990ರ ಕಾಶ್ಮೀರಿ ಪಂಡಿತ್ ನರ್ಸ್ ಸರಳಾ ಹತ್ಯೆ ಕೇಸ್; ಶ್ರೀನಗರದ 8 ಸ್ಥಳಗಳ ಮೇಲೆ ಎಸ್‌ಐಎ ದಾಳಿಮೂರನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಆಶ್ನಾ ಚೌಧರಿಮದುವೆಯಾಗಿ ವರ್ಷ ಗಟ್ಟಲೆ ಸಂತಾನವಿಲ್ಲದೆ ನರಳುತ್ತಿದ್ದರೆ ಹಾಗಾದರೆ ಹೀಗೆ ಮಾಡಿ.! ಸಂತಾನ ಪ್ರಾಪ್ತಿ ಗ್ಯಾರಂಟಿ.!ತಾ.ಪಂ.ಜಿ.ಪಂ ಚುನಾವಣೆ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದು ಇದು.!ಭೀಕರ ರಸ್ತೆ ಅಪಘಾತ 7 ಮಕ್ಕಳು ಸೇರಿ 10 ಜನ ಸಾವು.!ದಿನದ ಮಂಡಕ್ಕಿ ಒಗ್ಗರಣೆ-ಮಿರ್ಚಿ 13-08-2025.!ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಮಹಿಳಾ ಉದ್ಯೋಗ ಕೋಶ ಪ್ರಾರಂಭ.!ಸ್ವಯಂ ಸೇವಾ ಸಂಸ್ಥೆಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ.!