LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬೆಳ್ತಂಗಡಿ: ಟಿಪ್ಪರ್‌ ಢಿಕ್ಕಿಯಾಗಿ 7 ವಾಹನಗಳು ಜಖಂ, ವಿದ್ಯಾರ್ಥಿನಿ ಗಂಭೀರ

ಬೆಳ್ತಂಗಡಿ: ಟಿಪ್ಪರ್ ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಎರಡು ಬಸ್ , ನಾಲ್ಕು ಕಾರುಗಳು, ಒಂದು ಆಟೋ ರಿಕ್ಷಾ ಮತ್ತು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಗೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಭಾರತ್ ಶೋರೂಂ ಬಳಿ ನಡೆದಿದೆ.

ಬಳಂಜ ಗ್ರಾಮದ ಗುಂಡೇರಿ ನಿವಾಸಿ ವೀಕ್ಷಾ (17) ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿನಿ.  ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಜಿರೆಯಿಂದ ಗುರುವಾಯನಕೆರೆ ಕಡೆಗೆ ಟಿಪ್ಪರ್ ಹೋಗುತ್ತಿದ್ದ ಟಿಪ್ಪರ್‌ ಮುಂದೆ ಸಂಚಾರಿಸುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದಿದೆ. ನಂತರ ಇನ್ನೊಂದು ಬಸ್ಸಿನ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಎರಡನೆ ಬಾರಿ ಡಿಕ್ಕಿ ಹೊಡೆದ ರಭಸಕ್ಕೆ ಟಿಪ್ಪರ್ ಏಕಾಏಕಿ ಶೋರೂಂ ಕಡೆಗೆ ತಿರುಗಿ ರಸ್ತೆಯಲ್ಲಿ ಹೋಗುತ್ತಿದ್ದ ವೀಕ್ಷಾ ವಿದ್ಯಾರ್ಥಿನಿಗೆ ಢಿಕ್ಕಿ ಹೊಡೆದು ಶೋರೂಂ ಎದುರು ನಿಲ್ಲಿಸಿದ್ದ ನಾಲ್ಕು ಕಾರು ಹಾಗೂ ಆಟೋ ರಿಕ್ಷಾ ಜಖಂಗೊಂಡಿದೆ.

https://bcsuddi.com/%e0%b2%a8%e0%b3%87%e0%b2%aa%e0%b2%be%e0%b2%b3-%e0%b2%aa%e0%b3%8d%e0%b2%b0%e0%b2%a7%e0%b2%be%e0%b2%a8%e0%b2%bf-%e0%b2%aa%e0%b3%81%e0%b2%b7%e0%b3%8d%e0%b2%aa%e0%b2%be-%e0%b2%95%e0%b2%ae%e0%b2%b2/

ವೀಕ್ಷಾ ವೀಕ್ಷಾ ಲಾಯಿಲಾದಲ್ಲಿ ಕಂಪ್ಯೂಟರ್ ತರಬೇತಿ ತರಗತಿಗೆ ಸೇರಿದ್ದು ತನ್ನ ಸ್ನೇಹಿತೆಯೊಂದಿಗೆ ತರಗತಿಗೆ ಹಾಜರಾಗಲು ನಡೆದುಕೊಂಡು ಹೋಗುತ್ತಿದ್ದಳು. ವೇಣೂರು ಸರಕಾರಿ ಕಾಲೇಜಿನಲ್ಲಿ ಪಿಯು ಓದಿದ್ದಳು. ಮತ್ತೋರ್ವ ಬಾಲಕಿ ಟಿಪ್ಪರ್‌ನ ಚಕ್ರದಡಿ ಸಿಲುಕಿ ಕೂದಲೆಳೆಯಂತರದಲ್ಲಿ ಪಾರಾಗಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದೀಗ ಟಿಪ್ಪರ್ ಚಾಲಕ ಸುರೇಶ್ ವಿರುದ್ಧ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆದಿವಾಸಿ ಜನರ ಕಪ್ಪು ಸದೃಢ ಕೂದಲಿನ ರಹಸ್ಯ..!ದೆಹಲಿಯಲ್ಲಿ ದಟ್ಟ ಮಂಜು- ವಿಮಾನಗಳು ವಿಳಂಬ, ಮಾರ್ಗ ಬದಲಾವಣೆಶೀಘ್ರವೇ 7500 ಶಿಕ್ಷಕರನ್ನು ನೇಮಿಸಿಕೊಳ್ಳಲಿರುವ ಶಿಕ್ಷಣ ಇಲಾಖೆ..!'ಸರ್ಕಾರಕ್ಕೆ ಹಿಜಬ್‌ ವಾಪಸ್‌ ಆದೇಶ ಹೊರಡಿಸಲು ಕೇವಲ 30 ನಿಮಿಷ ಸಾಕು'- ಓವೈಸಿಕ್ರಿಸ್‌ಮಸ್‌ ಸಂಭ್ರಮ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಬೈಕ್ ಅಪಘಾತ; ಇಬ್ಬರು ಯುವಕರ ದುರ್ಮರಣ..!ಕ್ರಿಸ್ಮಸ್ ದಿನವೇ ಮುದ್ದು ಮಗಳು ರಾಹಾಳ ಫೋಟೋ ಹಂಚಿಕೊಂಡ ಆಲಿಯಾ -ರಣಬೀರ್ ದಂಪತಿಮಾನವ ಕಳ್ಳಸಾಗಾಣಿಕೆಯಲ್ಲಿ ಬಂಧಿಯಾಗಿದ್ದ ಶಂಕೆ- ಮುಂಬೈ ತಲುಪಿದ ವಿಮಾನಗ್ಯಾಸ್ ಗೀಜರ್‌ನಿಂದ ಸ್ನಾನ ಮಾಡುವ ಮುನ್ನ ಇರಲಿ ಎಚ್ಚರ..! ಆರೋಗ್ಯ ಸಮಸ್ಯೆಗಳು ಉದ್ಭವವಾಗುತ್ತವೆ ಎನ್ನುತ್ತದೆ ಸಂಶೋಧನೆನಿರ್ಮಾಣ ಹಂತದ ಕಟ್ಟಡ ಕುಸಿತ - ಓರ್ವ ಕಾರ್ಮಿಕ ಸಾವು, ಹಲವರು ಗಂಭೀರ'ರಾಮಮಂದಿರದ ಇಡೀ ವಿಷಯ ಬಿಜೆಪಿಗೆ ಪ್ರದರ್ಶನವಾಗಿದೆ' - ಕಪಿಲ್‌ ಸಿಬಲ್‌