LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬೇಸಿಗೆಯಲ್ಲಿ ಎಳನೀರು ಸೇವನೆ ಅತ್ಯಂತ ಉಪಯುಕ್ತ

ಎಳನೀರು ಪ್ರಕೃತಿ ನೀಡಿರುವಂತಹ ಇದುವರೆಗೂ ಕಲಬೆರಕೆಗೊಳ್ಳದೇ ಇರುವಂತಹ ನ್ಯೂಟ್ರಿಷಿಯಸ್‌ ಡ್ರಿಂಕ್‌. ಇದರಲ್ಲಿ ಮಿನರಲ್ಸ್‌, ವಿಟಮಿನ್ಸ್‌, ಕಾರ್ಬೊಹೈಡ್ರೇಟ್ಸ್‌ ಇನ್ನೂ ಮುಂತಾದ ಅಂಶಗಳು ಪ್ರಕೃತಿದತ್ತವಾಗಿರುವುದರಿಂದ ಬೇಸಿಗೆಯಲ್ಲಿ ಎಳನೀರು ಸೇವನೆ ಅತ್ಯಂತ ಉಪಯುಕ್ತ.

ಎಳನೀರು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ವಿಶೇಷವಾಗಿ ಮೆಗ್ನೀಸಿಯಮ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ನಂತಹ ಪೋಷಕಾಂಶಗಳಿವೆ. ಇವೆಲ್ಲವೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಎಳನೀರು ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ಕೊಬ್ಬನ್ನು ಕಡಿಮೆ ಮಾಡುತ್ತದೆ. ಕೊಲೆಸ್ಟ್ರಾಲ್‌ ಹಾಗೂ ಫ್ಯಾಟ್‌ ಫ್ರೀ ಆಗಿರುವ ಎಳನೀರಿನ ಸೇವನೆ ಹೃದಯಕ್ಕೆ ಅತ್ಯುತ್ತಮವಾದ ಮನೆಮದ್ದಾಗಿದೆ .

ಎಳನೀರಿನೊಂದಿಗೆ ಯಾವುದೇ ಮಿಶ್ರಣವನ್ನು ಮಾಡದೇ ಸೇವಿಸುವುದರಿಂದ ರುಚಿ ಕೂಡ ತುಂಬಾ ಚೆನ್ನಾಗಿರುತ್ತದೆ. ಬೇಸಿಗೆಯಲ್ಲಿ ಎಳನೀರು: ಬೇಸಿಗೆಯಲ್ಲಿ ಎಳನೀರು ಕುಡಿದರೆ ದೇಹ ತೇವಾಂಶದಿಂದ ಕೂಡಿರುತ್ತದೆ. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ತುಂಬಾ ಹೊತ್ತು ಹೊಟ್ಟೆ ತುಂಬಿಸಿರುತ್ತದೆ. ಎಳನೀರು ಸೇವನೆಯಿಂದ ದೇಹದಲ್ಲಿ ಉಂಟಾಗುವ ಅತಿಯಾದ ಉಷ್ಣತೆಯನ್ನು ತಡೆಯುವ ಶಕ್ತಿ ಎಳನೀರಿಗಿದೆ.

ಜೊತೆಗೆ ಆರೋಗ್ಯಕ್ಕೂ ಉತ್ತಮವಾದುದು ಎಳನೀರು ಸೇವನೆ. ಎಳನೀರು ಕುಡಿದರೆ ಅದರಲ್ಲಿರುವ ಪದಾರ್ಥಗಳು ಹೊಟ್ಟೆ ತುಂಬಾ ಹೊತ್ತು ತುಂಬಿರುವಂತೆ ಮಾಡುತ್ತದೆ. ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ ಮತ್ತು ತೂಕ ಇಳಿಕೆಗೆ ಸಹಾಯಕವಾಗಿದೆ. ಎಳನೀರಿಗೆ ಕರುಳಿನ ಕಾರ್ಯವನ್ನು ಸರಾಗವಾಗಿ ನಿರ್ವಹಿಸುವ ಶಕ್ತಿ ಇದೆ. ಆದುದರಿಂದ ಕನಿಷ್ಠ ವಾರಕ್ಕೊಂದು ಎಳನೀರು ಕುಡಿದರೆ ಅನಿಯಮಿತವಾಗಿ ಆಗುವಂತಹ ಮಲಮೂತ್ರ ವಿಸರ್ಜನೆಯು ಸರಾಗವಾಗಿ ಆಗುತ್ತದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಿಂದೂ ಮಹಾ ಗಣಪತಿಯ ಶೋಭಾಯಾತ್ರೆ ಜನ ಸಾಗರವೋ ಸಾಗರ.!ಮಹಾಲಯ ಅಮಾವಾಸ್ಯೆ ಮುಗಿದ ನಂತರ ಈ ರಾಶಿಗಳಿಗೆ ಭಾರಿ ಅದೃಷ್ಟವಚನ:    -- -ಸಿದ್ಧರಾಮೇಶ್ವರ .!ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕರಣಕ್ಕೂ, ಸಿಎಂ ಸಿದ್ದರಾಮಯ್ಯ ಹಗರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ: ಆರ್ ಅಶೋಕ್ಇಸ್ರೇಲ್ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆ.!21 ಮಕ್ಕಳ ಮೇಲೆ ಮೇಲೆ ರೇಪ್ : ಪೋಕ್ಸೋ ಕೇಸ್‌ನಲ್ಲಿ ಹಾಸ್ಟೆಲ್ ವಾರ್ಡನ್‌ಗೆ ದೇಶದಲ್ಲೇ ಮೊದಲ ಗಲ್ಲು ಶಿಕ್ಷೆ..!ಸಚಿವ ಜಮೀರ್ ವಿರುದ್ಧ ಹೈಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಮಂಗಳೂರು: ಹೊತ್ತಿ ಉರಿದ BMW ಕಾರು..!ಮಸೀದಿ ಎದುರು “ಭಾರತ್ ಮಾತಾ ಕೀ ಜೈ” ಘೋಷಣೆ ಅಪರಾಧವಲ್ಲ ಎಂದ ಹೈಕೋರ್ಟ್‌ !! ಹಾಗಾದ್ರೆ ಹೈಕೋರ್ಟ್‌ ಆದೇಶದಲ್ಲಿ ಏನಿದೆ..?ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಬೆಳ್ಳಾರೆ ಕೇಂದ್ರ ಮಸ್ಜಿದ್ ನಲ್ಲಿ ಭಯೋತ್ಪಾದನಾ ಚಟುವಟಿಕೆ- ಹಲವಾರು ಅನುಮಾನಗಳಿಗೆ ಕಾರಣವಾದ ಈ ಒಂದು ಪೊಸ್ಟ್..