LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬೈಕ್ ರಿಪೇರಿ ಮತ್ತು ಸೇವೆ ಕುರಿತ ಉಚಿತ ತರಬೇತಿ ಅರ್ಜಿ ಆಹ್ವಾನ

 

ದಾವಣಗೆರೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಹಾಗೂ ರುಡ್‍ಸೆಟ್ ಸಂಸ್ಥೆಯ ವತಿಯಿಂದ ದ್ವಿಚಕ್ರ ವಾಹನ ರಿಪೇರಿ ಮತ್ತು ಸೇವೆ ಕುರಿತ 30 ದಿನಗಳ ಉಚಿತ ತರಬೇತಿಗಾಗಿ ಆಗಸ್ಟ್ 21 ರಿಂದ ಗ್ರಾಮೀಣ  ನಿರುದ್ಯೋಗಿ ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ.

18 ರಿಂದ 45 ವರ್ಷ ವಯೋಮಾನ ಮತ್ತು ಕನ್ನಡ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡ್‍ನ್ನು ಕಡ್ಡಾಯವಾಗಿ ಹೊಂದಿರಬೇಕು.

ತರಬೇತಿ ವಸತಿಯುತವಾಗಿದ್ದು, ಈ ಅವಧಿಯಲ್ಲಿ ಉಚಿತ ಊಟ, ವಸತಿ ನೀಡಲಾಗುವುದು. ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು. ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ರುಡ್‍ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಥವಾ ಮೊಬೈಲ್ ಸಂಖ್ಯೆ: 9740982585, 9380162042 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್‍ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರಾದ ರವಿಕುಮಾರ ತಿಳಿಸಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿಯಲ್ಲಿ ಗೋವಾ ಮಾಜಿ ಶಾಸಕನ ಬರ್ಬರ ಕೊಲೆ; ಆರೋಪಿ ಆಟೋ ಚಾಲಕ ಅರೆಸ್ಟ್'ರಾಜ್ಯ ಸರ್ಕಾರದಿಂದ ವಿವಿಗಳನ್ನು ಮುಚ್ಚುವ ಹೊಸ ಭಾಗ್ಯ'- ಅಶೋಕ್ವಾಟೆಹೊಳೆ ಜಲಪಾತಕ್ಕೆ ಕಾಲುಜಾರಿ ಬಿದ್ದು ಇಬ್ಬರು ಯುವಕರು ಮೃತ್ಯುಈ ತಿಂಗಳ 24 ರಂದು ಪಿಎಂ ಕಿಸಾನ್‌ ಹಣ ರೈತರ ಖಾತೆಗೆ ವರ್ಗಾವಣೆ ಸಾಧ್ಯತೆ..!ಶನಿವಾರ ಭರ್ಜರಿ ಇಳಿಕೆ ಕಂಡ ಚಿನ್ನ: ಆಭರಣ ಪ್ರಿಯರು ಫುಲ್‌ ಖುಷ್‌ನಟ ದರ್ಶನ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ : ನಾಳೆ 'ಡೆವಿಲ್‌' ಚಿತ್ರದ ಟೀಸರ್‌ ರಿಲೀಸ್‌WPL 2025: RCBಗೆ ಭಾರಿ ಆಘಾತ; ಸ್ಟಾರ್ ಸ್ಪಿನ್ನರ್ ಶ್ರೇಯಾಂಕ ಸರಣಿಯಿಂದಲೇ ಔಟ್ಕೇಜ್ರಿವಾಲ್ ಬಂಗಲೆ ‘ಶೀಶ್ ಮಹಲ್’ ನವೀಕರಣ ಹಗರಣದ ತನಿಖೆಗೆ ಕೇಂದ್ರ ಆದೇಶAICC ಪುನರಾಚನೆ: ಮತ್ತೆ ರಾಷ್ಟ್ರರಾಜಕಾರಣಕ್ಕೆ ಬಿ.ಕೆ. ಹರಿಪ್ರಸಾದ್ಮುಂದಿನ ಮುಖ್ಯ ಚುನಾವಣಾ ಆಯುಕ್ತರು ಯಾರು? : ಆಯ್ಕೆ ಸಮಿತಿ ಇನ್ನೆರಡು ದಿನಗಳಲ್ಲಿ ನಿರ್ಧಾರ