LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬೋಲ್ಡ್ ಬ್ಯುಟಿ ರಿಚಾ ಚಡ್ಡಾ ಹೊಟ್ಟೆ ಮೇಲೆ ರೇಖಾ ಚಿತ್ರ ಬಿಡಿಸಿಕೊಂಡ ಫೋಟೋ ವೈರಲ್

ಇತ್ತೀಚೆಗೆ ಗರ್ಭಿಣಿ ನಟಿಯರು ತಮ್ಮದೇ ಆದ ಥೀಮ್‌ನಲ್ಲಿ ಬೇಬಿ ಬಂಪ್ ಪ್ರದರ್ಶಿಸುವುದು ಸಾಮಾನ್ಯ. ಕೆಲ ನಟಿಯರು ಇನ್ನೂ ಮುಂದಕ್ಕೆ ಹೋಗಿ ಕ್ರಿಯೇಟಿವ್ ಆಗಿ ಫೋಟೋಶೂಟ್ ಮಾಡಿಸುತ್ತಾರೆ. ಇದೀಗ ರಿಚಾ ಚಡ್ಡಾ ಇಂಥದ್ದೇ ಒಂದು ವಿಭಿನ್ನ ಪ್ರಯೋಗ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಹುಟ್ಟಿಸಿದ್ದಾರೆ. ತುಂಬು ಗರ್ಭಿಣಿಯಾಗಿದ್ದಾಗ ರಿಚಾ ಚಡ್ಡಾ ಹೊಟ್ಟೆ ಮೇಲೆ ಚಿತ್ತಾರ ಬಿಡಿಸಿಕೊಂಡು ಬೇಬಿ ಬಂಪ್ ಪ್ರದರ್ಶಿಸಿದ್ದಾರೆ. ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿರುವ ರಿಚಾ ಚಡ್ಡಾ 9 ತಿಂಗಳ ಗರ್ಭಿಣಿಯಾಗಿದ್ದಾಗ ತಮ್ಮ ಎದೆಯಿಂದ ಹೊಟ್ಟೆಯವರೆಗೆ ವಿಭಿನ್ನ ಚಿತ್ರ ಬಿಡಿಸಿಕೊಂಡಿದ್ದಾರೆ.

ಈ ಫೋಟೋಗಳನ್ನ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ ರಿಚಾ ಚಡ್ಡಾ ತಾವು ಬಿಡಿಸಿಕೊಂಡ ಚಿತ್ರದ ವಿಶೇಷತೆಗಳನ್ನ ಹೇಳಿಕೊಂಡಿದ್ದಾರೆ. ಈ ರೇಖಾ ಚಿತ್ರವು ದೈವಿಕ ಸ್ತ್ರೀಲಿಂಗದ ಸಂಕೇತದ ಥೀಮ್‌ನಿಂದ ಚಿತ್ರಿಸಲಾಗಿದೆ ಎಂದಿದ್ದಾರೆ. ಜೊತೆಗೆ ತನ್ನ ಎಳೆ ಮಗುವಿಗೆ ವಿಭಿನ್ನವಾಗಿ ವಿಶ್ ಮಾಡಿದ್ದಾರೆ. ಹ್ಯಾಪಿ ಡಾಟರ್ಸ್‌ ಡೇ ಮಗಳೇ ಒಂದಿನ ನಾವಿಬ್ಬರೂ ಒಟ್ಟಿಗೆ ಕುಳಿತು ಈ ಚಿತ್ರವನ್ನ ನೋಡುತ್ತೇವೆ ಎಂದು ಗೊತ್ತಿತ್ತು. ಆಗ ನೀನು ಹೊಟ್ಟೆಯೊಳಗೆ ಪೋಸ್ ನೀಡುತ್ತಿದ್ದರೆ ನಾನು ಹೊರಗಿನಿಂದ ಪ್ರಜ್ವಲಿಸುತ್ತಿದ್ದೆ, ಇದನ್ನು ಹೊರಗಿನವರು ನೋಡಬಹುದು ಆದರೆ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿ ಕಾಮೆಂಟ್ಸ್ ಆಫ್ ಮಾಡಿದ್ದಾರೆ. ಅಂದಹಾಗೆ, ರಿಚಾ ಚಡ್ಡಾ 2022ರಲ್ಲಿ ಅಲಿ ಫಜಲ್ ಎಂಬುವರನ್ನ ಮದುವೆಯಾಗಿದರು. ತನ್ನ ನೇರಮಾತು, ಬೋಲ್ಡ್ ಅಭಿನಯದಿಂದ ರಿಚಾ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ, ಇದೀಗ ವಿಭಿನ್ನವಾಗಿ ಬೇಬಿ ಬಂಪ್ ಪ್ರದರ್ಶಿಸಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಕುತೂಹಲ ಹುಟ್ಟಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ನೆಹರೂ ಹಾಕಿದ ಅಡಿಪಾಯಗಳಿಂದ ಭಾರತ ವಿಶ್ವದ ಐದನೇ ದೊಡ್ಡ ಆರ್ಥಿಕ ಶಕ್ತಿಯಾಗಿದೆ'- ಸಿ.ಎಂಬಿಜೆಪಿಯಿಂದ ಎಸ್‌ಟಿ ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಉಚ್ಚಾಟನೆನಕಲ್‌ ಕರ್ನೆ ಲಿಯೆ ಅಕಲ್‌ ಚಾಹಿಯೆ : ವಿದೇಶಿ ನೆಲದಲ್ಲಿ ಪಾಕಿಸ್ತಾನವನ್ನು ಲೇವಡಿ ಮಾಡಿದ ಓವೈಸಿಪ್ರಜ್ವಲ್‌ ರೇವಣ್ಣ ಮೊಬೈಲ್‌ನಲ್ಲಿತ್ತಂತೆ 2 ಸಾವಿರ ಅಶ್ಲೀಲ ಫೋಟೊ, 50 ವಿಡಿಯೋಬಾಂಬ್ ಇಡಲು ಯತ್ನಿಸುತ್ತಿರುವಾಗ ಸ್ಫೋಟ - ವ್ಯಕ್ತಿ ಸಾವುಕಾರಿನಲ್ಲಿ ಒಂದೇ ಕುಟುಂಬದ 7 ಮಂದಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣುಜವಾಹರಲಾಲ್ ನೆಹರು ಪುಣ್ಯತಿಥಿ - ಪ್ರಧಾನಿ ಮೋದಿಯಿಂದ ಗೌರವ ನಮನಸರಕಾರ ಹೈ ಅಲರ್ಟ್‌, ಆಸ್ಪತ್ರೆಗಳಲ್ಲಿ ಕೋವಿಡ್‌ ಬೆಡ್‌ ಹೆಚ್ಚಳ, ಆರೋಗ್ಯ ಸಿಬ್ಬಂದಿ ರಜೆ ರದ್ದುಮಡೆನೂರು ಮನುಗೆ 14 ದಿನ ನ್ಯಾಯಾಂಗ ಬಂಧನ: ಪರಪ್ಪನ ಅಗ್ರಹಾರಕ್ಕೆ ಶಿಫ್ಟ್!ಮಂಗಳೂರು: ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದ ಬೃಹತ್ ಮರ..!