LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

"ಬ್ಯೂಟಿ ಕ್ವೀನ್ ಬರ್ಬರ ಹತ್ಯೆ" - ರೆಸ್ಟೋರೆಂಟ್‌ನಲ್ಲಿ ಗುಂಡಿಕ್ಕಿ ಕೊಂದ ಹಂತಕರು

ಈಕ್ವೆಡಾರ್ ; ಈಕೆ 23 ವರ್ಷಕ್ಕೆ ಬ್ಯೂಟಿ ಕ್ವೀನ್ ಕಿರೀಟವನ್ನು ಮುಡಿಗೇರಿಸಿಕೊಂಡವಳು. ಆದರೆ ಸುಂದರಿ ಪಟ್ಟ ಅಲಂಕರಿಸಿದ 2 ವರ್ಷಕ್ಕೆ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದಾಳೆ.

ಹಂತಕರು ಈಕೆಯ ಇನ್‌ಸ್ಟಾಗ್ರಾಮ್‌ ಪೋಸ್ಟ್ ಫಾಲೋ ಮಾಡಿ ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ. ಲ್ಯಾಂಡಿ ಪರ್ರಾಗಾ ಗೊಯ್ಬುರೊ 23 ವರ್ಷಕ್ಕೆ ಮಿಸ್‌ ಈಕ್ವೆಡಾರ್ ಸ್ಪರ್ಧೆಯಲ್ಲಿ ಬ್ಯೂಟಿ ಕ್ವೀನ್ ಆಗಿದ್ದವಳು. ಈಕೆಗೆ ಬಹಳಷ್ಟು ಮಂದಿ ಅಭಿಮಾನಿಗಳಿದ್ದು, ಲ್ಯಾಂಡಿ ಪರ್ರಾಗಾ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದಾರೆ. 2022ರ ಮಿಸ್ ಈಕ್ವೆಡಾರ್‌ ಲ್ಯಾಂಡಿ ಪರ್ರಾಗಾ ಗೊಯ್ಬುರೊ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕಳೆದ ಏಪ್ರಿಲ್ 28ರಂದು ಲ್ಯಾಂಡಿ ಪರ್ರಾಗಾ ಕ್ವೆವೆಡೊ ನಗರದ ರೆಸ್ಟೋರೆಂಟ್‌ಗೆ ತೆರಳಿದ್ದರು. ಈ ವೇಳೆ ಅವಳನ್ನ ಹಿಂಬಾಲಿಸಿಕೊಂಡು ಬಂದಿರುವ ಇಬ್ಬರು ದುಷ್ಕರ್ಮಿಗಳು ಡೆಡ್ಲಿ ಅಟ್ಯಾಕ್ ಮಾಡಿದ್ದಾರೆ. ರೆಸ್ಟೋರೆಂಟ್‌ನಲ್ಲಿದ್ದ ಲ್ಯಾಂಡಿ ಪರ್ರಾಗಾ ಮೇಲೆ ಅಟ್ಯಾಕ್ ಮಾಡಿರುವ ಕೊಲೆಗಾರರು ಎರಡು ಸುತ್ತಿನ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಗೆ ಒಳಗಾದ ಲ್ಯಾಂಡಿ ಪರ್ರಾಗಾ ಸ್ಥಳದಲ್ಲೇ ರಕ್ತ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಪೊಲೀಸರು ನಡೆಸಿದ ತನಿಖೆಯಲ್ಲಿ ಹಂತಕರು ಲ್ಯಾಂಡಿ ಪರ್ರಾಗಾ ಹಾಕಿದ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಅವರಿಗೆ ಸಹಾಯ ಮಾಡಿದೆ ಎನ್ನಲಾಗಿದೆ. ಈಕ್ವೆಡಾರ್‌ನಲ್ಲಿ ನಡೆದ ಭ್ರಷ್ಟಾಚಾರ ಹಗರಣದಲ್ಲಿ ಬ್ಯೂಟಿ ಕ್ವೀನ್‌ ಲ್ಯಾಂಡಿ ಪರ್ರಾಗಾ ಅವರ ಹೆಸರು ಕೇಳಿ ಬಂದಿತ್ತು. ಇಬ್ಬರು ಅಪರಿಚಿತರು ರೆಸ್ಟೋರೆಂಟ್‌ಗೆ ಗುಂಡಿಕ್ಕಿ ಕೊಂದು ಹೋಗಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ…!ಸಂಚಾರಿ ನಿಯಮ ಪಾಲಿಸದವರ ಲೈಸೆನ್ಸ್ ರದ್ದು ಮಾಡಿ': ಸಾರಿಗೆ ಸಚಿವರಿಗೆ ಸಿಎಂ ಸೂಚನೆಶಿರೂರು ಗುಡ್ಡ ಕುಸಿತ; ಮೂರನೇ ಹಂತದ ಕಾರ್ಯಾಚರಣೆ ವೇಳೆ ಸಿಕ್ಕಿತು ಮೂಳೆ..!ಬಾಲಕಿ ಮೆಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ಮೇಲೆ ಮಂಗಗಳ ದಾಳಿ – ಮಗು ಸೇಫ್ಮಿಸ್ ಯೂನಿವರ್ಸ್ ಇಂಡಿಯಾ; 2024 ಕಿರೀಟ ಮುಡಿಗೇರಿಸಿಕೊಂಡ ಗುಜರಾತಿ ಬೆಡಗಿ ರಿಯಾ ಸಿಂಘಾಅಪವಿತ್ರ ಆರೋಪ ನಡುವೆಯೂ ತಿರುಪತಿ ಲಡ್ಡುಗೆ ಬೇಡಿಕೆ – ಒಂದೇ ದಿನ 3 ಲಕ್ಷಕ್ಕೂ ಹೆಚ್ಚು ಲಡ್ಡು ಮಾರಾಟಧರ್ಮಸ್ಥಳ : 26ನೇ ವರ್ಷದ ಭಜನಾ ತರಬೇತಿ ಕಮ್ಮಟ ಉದ್ಘಾಟನೆ537 ಹಾಡು,24 ಸಾವಿರ ಸ್ಟೆಪ್ಸ್ ! ಗಿನ್ನಿಸ್ ದಾಖಲೆ ಬರೆದ ನಟ ಮೆಗಾ ಸ್ಟಾರ್ ಚಿರಂಜೀವಿತಿರುಪತಿ ದೇವಾಲಯದ ಅಕ್ರಮಗಳ ತನಿಖೆಗೆ ವಿಶೇಷ ತಂಡ ರಚಿಸಿದ ಆಂಧ್ರ ಸರ್ಕಾರವಿಟಮಿನ್‌ ಸಿ ಇದೆ ಎಂದು ನಿಂಬೆಹಣ್ಣನ್ನು ಅತಿಯಾಗಿ ಬಳಸಿದ್ರೆ ತೊಂದರೆ ತಪ್ಪಿದ್ದಲ್ಲ