LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬ್ಯೂಟಿ ಪಾರ್ಲರ್​ಗೆ ಹೋಗಿ ಸಿಕ್ಕಾಕಿಕೊಂಡ ನಕಲಿ‌ ಲೇಡಿ SI.!

ಕನ್ಯಾಕುಮಾರಿ: ನಾನು ಎಸ್ಐ ಅಂತ ಹೇಳಿಕೊಂಡು ಪೊಲೀಸ್ ಸಮವಸ್ತ್ರದಲ್ಲಿ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್​ಗೆ ಬಂದಿದ್ದ ಯುವತಿಯನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಯುವತಿ ಅಭಿಪ್ರಭಾ (34) ಎಂದು ವರದಿಯಿಂದ ತಿಳಿದು ಬಂದಿದೆ. ಥೇನಿ ಪೆರಿಯಕುಲಂ ಮೂಲದ ನಿವಾಸಿಯಾಗಿರುವ ಈಕೆ ಪೊಲೀಸರ ಹೆಸರಿನಲ್ಲಿ ಹಲವರಿಗೆ ವಂಚಿಸಿದ್ದಾಳೆ.

ಪಾರ್ವತಿಪುರಂ ನಿವಾಸಿಯಾಗಿರುವ ವೆಂಕಟೇಶ್ ಎಂಬುವವರು ನೀಡಿದ ದೂರಿನ ಮೇರೆಗೆ ವಡಸೇರಿ ಪೊಲೀಸರು ಅಭಿಪ್ರಭಾಳನ್ನು ಅರೆಸ್ಟ್ ಮಾಡಿದ್ದಾರೆ. ಪೊಲೀಸರ ವೇಷದಲ್ಲಿ ವಂಚನೆ ಆರೋಪದ ಮೇಲೆ ಯುವತಿಯನ್ನು ಬಂಧಿಸಲಾಗಿದೆ.

ವಡಸೇರಿಯಲ್ಲಿರುವ ದೂರುದಾರ ವೆಂಕಟೇಶ್​ ಪತ್ನಿಯ ಬ್ಯೂಟಿ ಪಾರ್ಲರ್​ಗೆ ಆರೋಪಿ ಅಭಿಪ್ರಭಾ ತೆರಳಿದ್ದಳು. ಬಳಿಕ ಅಲ್ಲಿ ಫೇಶಿಯಲ್​ ಮಾಡಿಸಿಕೊಂಡು ದುಡ್ಡು ಕೊಡದೇ ಅಲ್ಲಿಂದ ಹೋಗಿದ್ದಳು. ದುಡ್ಡು ಕೊಡಿ ಎಂದು ಕೇಳಿದ್ದಕ್ಕೆ ನಾನು ವಡಸೇರಿ ಪೊಲೀಸ್​ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ಎಂದು ಗದರಿಸಿದ್ದಳು. ವೆಂಕಟೇಶ್ ಆಕೆಯ ವರ್ತನೆಯಿಂದ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದರು.

ಇನ್ನೂ ಪೊಲೀಸರ ವಿಚಾರಣೆ ವೇಳೆ ಪೊಲೀಸ್​ ವೇಷ ಧರಿಸಿ ಸಾಕಷ್ಟು ಜನರಿಗೆ ವಂಚಿಸಿರುವುದಾಗಿ ಅಭಿಪ್ರಭಾ ಬಾಯ್ಬಿಟ್ಟಿದ್ದಾಳೆ.

ಮಹಿಳಾ ಎಸ್‌ಐ ವೇಷದಲ್ಲಿ ಚೆನ್ನೈ, ತಿರುನಲ್ವೇಲಿ ಸೇರಿದಂತೆ ಅನೇಕ ನಗರಗಳಲ್ಲಿ ಅಭಿಪ್ರಭಾ ಸುತ್ತಾಡಿದ್ದಾಳೆ. ಈ ವೇಳೆ ಸಾಕಷ್ಟು ಮಂದಿಗೆ ವಂಚನೆ ಮಾಡಿರುವುದು ಗೊತ್ತಾಗಿದೆ
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಸವ ನಾಡಿನಲ್ಲಿ ಬುದ್ದ ಸ್ಮರಣೆ: ಟಿಬೆಟ್ ಯನ್ನರ ಪಾದಾಯಾತ್ರೆ.!ವಂದೇ ಭಾರತ್ ಎಕ್ಸ್‍ಪ್ರೆಸ್‍ನಿಂದ ಶಿಕ್ಷಣ, ಅರೋಗ್ಯ, ವ್ಯಾಪಾರ ವಹಿವಾಟಿಗೆ ಅನುಕೂಲ; ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್ಮೆಟ್ರೋ ಯೋಜನೆಯಲ್ಲಿ ರಾಜ್ಯ ಸರ್ಕಾರದ್ದೂ ಪಾಲಿದೆ: ಸಚಿವ ಎಂ ಬಿ ಪಾಟೀಲ್.!ಕೇಂದ್ರ ಎನ್ಡಿಎ ಸರ್ಕಾರದಿಂದ ದೇಶದ ಸಾಧನೆ ಆಗಿಲ್ಲ : ಸಂತೋಷ್ ಲಾಡ್.!ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ತತ್ವ ಆದರ್ಶಗಳೇ ಜೀವನಕ್ಕೆ ಬುನಾದಿ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿಅಂಬೇಡ್ಕರ್ ವಸತಿ ಶಾಲೆಯಲ್ಲಿ ಕಲುಷಿತ ಆಹಾರ ಸೇವಿಸಿ 25 ವಿದ್ಯಾರ್ಥಿಗಳು ಅಸ್ವಸ್ಥ.!ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಇರುವಂತೆ ಸಹಕಾರಿ ಸಂಸ್ಥೆಗಳ ಅಧ್ಯಕ್ಷ ಸ್ಥಾನಕ್ಕೂ ಮೀಸಲಾತಿ.!ಹೃದಯಘಾತದಿಂದ 15 ವರ್ಷ ಬಾಲಕ ಸಾವು.!ಆಗಸ್ಟ್ 15 ರಿಂದ ಮತ್ತೆ ಮಳೆಯ ಅಬ್ಬರ: ಹವಾಮಾನ ಇಲಾಖೆ.!ಶಿಕ್ಷಕರಿಗೆ ಮಾಹಿತಿ.! ಸರ್ಕಾರಿ ಶಾಲೆ ಶಿಕ್ಷಕರ ವರ್ಗಾವಣೆ ಪರಿಷ್ಕೃತ ವೇಳಾಪಟ್ಟಿ.!