LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

 ‘ಭಾರತೀಯ ಸೇನೆ , ಪಾಕಿಸ್ತಾನ ಸೇನೆ’ ಎರಡೂ ಒಂದೇ’ : ವಿವಾದ ಸೃಷ್ಟಿಸಿದ ಸಾಯಿ ಪಲ್ಲವಿ..

ಕಾಲಿವುಡ್​ ಸ್ಟಾರ್​ ನಟ ಶಿವಕಾರ್ತಿಕೇಯನ್​ ನಟನೆಯ ಅಮರನ್​ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಿದ್ದಾರೆ. ಭಾರತೀಯ ಸೇನೆ ಕುರಿತಾದ ಈ ಸಿನಿಮಾ ಇದೇ ಅ.31ರಂದು ಬಿಡುಗಡೆಯಾಗಲಿದ್ದು, ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ.

ಇದರ ನಡುವೆ ಸಾಯಿ ಪಲ್ಲವಿ ಅವರು ಭಾರತೀಯ ಸೇನೆಯ ಬಗ್ಗೆ ಮಾತನಾಡಿದ್ದ ಹಳೆಯ ವಿಡಿಯೋ ಮತ್ತೆ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಸಾಯಿ ಪಲ್ಲವಿ 2020ರಲ್ಲಿ ಮಾಧ್ಯವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಅವರು ಭಾರತೀಯ ಸೇನೆಯ ಬಗ್ಗೆ ಮಾತನಾಡಿದ್ದರು. ನಕ್ಸಲರ ಬಗ್ಗೆ ಆ್ಯಂಕರ್ ಕೇಳಿದ ಪ್ರಶ್ನೆಗೆ ಸಾಯಿ ಪಲ್ಲವಿ ನೀಡಿದ ಉತ್ತರ ವಿವಾದಕ್ಕೀಡಾಗಿತ್ತು. ಅಷ್ಟಕ್ಕೂ ಸಾಯಿ ಪಲ್ಲವಿ ಹೇಳಿದ್ದೇನು ಅಂದರೆ, ಭಾರತೀಯ ಸೇನೆಯು ಪಾಕಿಸ್ತಾನಿ ಜನರನ್ನು ಭಯೋತ್ಪಾದಕರಂತೆ ನೋಡುತ್ತದೆ ಮತ್ತು ಪಾಕಿಸ್ತಾನದ ಜನರು ಕೂಡ ಅದೇ ರೀತಿ ನೋಡುತ್ತಾರೆ.

ಯಾವುದೇ ರೀತಿಯ ದಾಳಿ ಸರಿಯಲ್ಲ ಎಂದು ಹೇಳಿದ್ದರು. ನೆಟ್ಟಿಗರೊಬ್ಬರು ಹಳೆಯ ವಿಡಿಯೋ ತುಣುಕನ್ನು ಮತ್ತೆ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ಈ ಹಿಂದೆ ಕಾಶ್ಮೀರಿ ಫೈಲ್ಸ್​ ಸಿನಿಮಾ ಬಗ್ಗೆ ಮಾತನಾಡಿದ್ದ ಸಾಯಿ ಪಲ್ಲವಿ, ಕಾಶ್ಮೀರಿ ಪಂಡಿತರ ಹತ್ಯಾಕಾಂಡಕ್ಕೂ ಗೋವಿನ ಹೆಸರಿನಲ್ಲಿ ನಡೆಯುವ ಹತ್ಯೆಗಳಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿದ್ದರು. ಇದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗೆ ಗುರಿಯಾಗಿತ್ತು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಖಾಸಗಿ ಕೃಷಿ ಕಾಲೇಜು ಆರಂಭಿಸಲು ಅರ್ಜಿ ಆಹ್ವಾನಐಶ್ವರ್ಯ ಗೌಡ ಕೇಸ್​: ಮಾಜಿ ಸಂಸದ ಡಿಕೆ ಸುರೇಶ್​ಗೆ ಇಡಿ ಸಮನ್ಸ್​'2028ಕ್ಕೆ ಮತ್ತೆ ಪ್ರಮಾಣವಚನ ಸ್ವೀಕಾರ ಮಾಡ್ತೇವೆ'- ಡಿಕೆಶಿಕೊಟ್ಟಿಯೂರು: ಭಾರೀ ಜನಸಂದಣಿ, 10 ನಿಮಿಷದ ಹಾದಿಗೆ 3.30 ತಾಸು!! ಮಗು ಸಾವು; ಹೊಳೆ ನೀರಲ್ಲಿ ಕೊಚ್ಚಿ ಹೋದ ತರುಣರುಮಂಗಳೂರಿನಲ್ಲಿ ಮತ್ತೆ ಮಳೆ ಅನಾಹುತ : ಮನೆ ಮೇಲೆ ಕುಸಿದು ಬಿದ್ದ ಗುಡ್ಡಬಿಇ, ಬಿ.ಸಿ.ಎ, ಬಿ.ಎಸ್ಸಿ ಆದವರಿಗೆ ಬಿಇಎಲ್ ನಲ್ಲಿ ಉದ್ಯೋಗವಕಾಶಸೈಕಲ್ ಜಾಥಾ; ವಿಧಾನಸೌಧದ ಮೆಟ್ಟಿಲ ಮೇಲೆ ಬಿದ್ದುಬಿಟ್ಟ ಡಿಕೆ ಶಿವಕುಮಾರ್!!ಟೆಹ್ರಾನ್‌ ನಗರ ತೊರೆಯಲು ಭಾರತೀಯರಿಗೆ ತುರ್ತು ಸೂಚನೆಯುವತಿಯನ್ನು ಹೊತ್ತೊಯ್ದು ಗೆಳೆಯನ ಮುಂದೆಯೇ ಗ್ಯಾಂಗ್ ರೇಪ್: 8 ಆರೋಪಿಗಳು ಅರೆಸ್ಟ್ಅನರ್ಹ ಪಡಿತರ ಚೀಟಿ ರದ್ದುಪಡಿಸಲು ಹೊಸ ಕ್ರಮ, 44 ಲಕ್ಷ ಪಡಿತರ ಕಾರ್ಡ್‌ಗಳ ಮೇಲೆ ಬಿರುಸು ತನಿಖೆ