LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಭ್ರಷ್ಟಾಚಾರ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಹಣ ಜನರಿಗೆ ಮರಳಿಸಲು ಚಿಂತನೆ - ಪ್ರಧಾನಿ ಮೋದಿ

ರಾಜಾಮಹೇಂದ್ರವರಂ : ಭ್ರಷ್ಟಾಚಾರ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಹಣವನ್ನು ಜನರಿಗೆ ಮರಳಿಸುವ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಆಂಧ್ರಪ್ರದೇಶದ ವೇಮಗಿರಿಯಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ಜಾರಿ ನಿರ್ದೇಶನಾಲಯದ ದಾಳಿಯ ವೇಳೆ ಜಾರ್ಖಂಡ್‌ ಸಚಿವರೊಬ್ಬರ ಕಾರ್ಯದರ್ಶಿಯ ಮನೆಯಲ್ಲಿ ಬೃಹತ್‌ ಪ್ರಮಾಣದಲ್ಲಿ ಹಣ ಪತ್ತೆಯಾಗಿರುವ ಬಗ್ಗೆ ಕಿಡಿಕಾರಿದರು. ಇಂತಹ ವ್ಯಕ್ತಿಗಳು ಕಾಂಗ್ರೆಸ್‌ ಪರಿವಾರಕ್ಕೆ ಆಪ್ತರಾಗಿರುತ್ತಾರೆ. ಕಾಂಗ್ರೆಸ್‌ನವರು ತಮ್ಮ ಪಕ್ಷದ ಕಾರ್ಯಕರ್ತರ ಮನೆಯನ್ನು ಭ್ರಷ್ಟಾಚಾರದ ಗೋದಾಮು ಮಾಡಿದ್ದಾರೆ.

ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಜಪ್ತಿ ಮಾಡಿಕೊಳ್ಳುತ್ತಿರುವುದು ಇದೇ ಮೊದಲಲ್ಲ ಎಂದು ಟೀಕಿಸಿದರು. ಹಣ ಕೊಳ್ಳೆ ಹೊಡೆಯುವವರೆಲ್ಲ ಏಕೆ ಕಾಂಗ್ರೆಸ್‌ನ ಮೊದಲ ಪರಿವಾರಕ್ಕೆ ಆಪ್ತರಾಗಿರುತ್ತಾರೆ? ಕಾಂಗ್ರೆಸ್‌ನ ಮೊದಲ ಪರಿವಾರ ಕಪ್ಪುಹಣದ ಗೋದಾಮನ್ನು ನಿರ್ಮಿಸಿದೆಯೇ? ದೇಶ ಇದನ್ನು ತಿಳಿಯಲು ಬಯಸುತ್ತಿದೆ ಎಂದು ಹೇಳಿದರು. ಇ.ಡಿ ₹1.25 ಲಕ್ಷ ಕೋಟಿ ಆಸ್ತಿಯನ್ನು ಈವರೆಗೆ ಜಪ್ತಿ ಮಾಡಿದೆ.

ಇತರ ತನಿಖಾ ಸಂಸ್ಥೆಗಳು ಜಪ್ತಿ ಮಾಡಿರುವುದನ್ನು ಸೇರಿಸಿದರೆ ಈ ಮೊತ್ತ ಹೆಚ್ಚಾಗುತ್ತದೆ. ಈಗಾಗಲೇ ₹17000 ಕೋಟಿ ಹಣವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಬಡಜನರ ಹಕ್ಕುಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಇದು ಮೋದಿ ಗ್ಯಾರಂಟಿ ಎಂದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಐಎಎಸ್ ನಿತಿನ್ ಶಾಕ್ಯಾ ಅವರ ಯುಪಿಎಸ್‌ಸಿ ಯಶಸ್ಸಿನ ಕಥೆಮುಡಾ ಸೈಟ್ ವಾಪಸಾತಿ, ನನಗೂ ಆಶ್ಚರ್ಯ ಉಂಟು ಮಾಡಿದೆ - ಆದ್ರೆ ನನ್ನ ಪತ್ನಿಯ ನಿರ್ಧಾರ ನಾನು ಗೌರವಿಸುತ್ತೇನೆ : ಸಿಎಂ ಸಿದ್ದರಾಮಯ್ಯಮುಖದ ಚರ್ಮವನ್ನು ತಂಪಾಗಿಸಲು ಮತ್ತು ಮುಖದ ಕಾಂತಿ ಹೆಚ್ಚಿಸಲು ಈ ಮನೆಮದ್ದನ್ನು ಬಳಸಿವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳ.! ಎಷ್ಟು ಗೊತ್ತಾ.?ಮಹಿಳೆಯರಿಗೆ ಎಂಬ್ರಾಯ್ಡರಿ ಹಾಗೂ ಆರಿ ವರ್ಕ್ ಉಚಿತ ತರಬೇತಿಗೆ ಅರ್ಜಿ ಆಹ್ವಾನಗ್ರಾಮಾಂತರ ಕೈಗಾರಿಕಾ ಇಲಾಖೆಯಿಂದ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನಸರ್ಕಾರಿ ಕೆಲಸದಲ್ಲಿ ಪ್ರಾಮಾಣಿಕತೆ, ದಕ್ಷತೆ ಇರಬೇಕು: ಬಿ.ಟಿ.ತಿಪ್ಪೇರುದ್ರಪ್ಪತೋಟಗಾರಿಕೆ ಇಲಾಖೆ : ಸಹಾಯಧನ ಪಡೆಯಲು ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನತಮ್ಮ ಸ್ವಂತ ಕಾಲ ಮೇಲೆ ನಿಲ್ಲಲು ಹೊಲಿಗೆ ಮತ್ತು ವಿಡಿಯೋಗ್ರಫಿ ತರಬೇತಿ.!ಈ ರೈಲುಗಳು ಈ ಭಾಗಗಳಲ್ಲಿ ತಾತ್ಕಾಲಿಕ ನಿಲುಗಡೆ ಮುಂದುವರಿಕೆ