ಮಂಗಳೂರು: ಖ್ಯಾತ ವಕೀಲರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ..!
ಮಂಗಳೂರು: ಮಂಗಳೂರು ನಗರದಲ್ಲಿ ಖ್ಯಾತ ನ್ಯಾಯವಾದಿಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಗರದ ವಕೀಲ ಬಿ. ಹರೀಶ್ ಆಚಾರ್ಯ ಅವರ ಮೃತದೇಹ ಭಾಗಶಃ ಕೊಳೆತ ಸ್ಥಿತಿಯಲ್ಲಿ ಮಂಗಳವಾರ ನಗರ ಬಿಜೈ ಬಾರೆಬೈಲ್ ನ ಅವರ ಮನೆಯಲ್ಲಿ ಪತ್ತೆಯಾಗಿದೆ. ಅವರ ಸಂಬಂಧಿಗಳಿದ್ದಲ್ಲಿ (0824-2220822) ಸಂಪರ್ಕ ಸಂಖ್ಯೆಗೆ ಕರೆ ಮಾಡುವಂತೆ ಪೊಲೀಸರು ಕೋರಿದ್ದಾರೆ. ಹರೀಶ್ ಆಚಾರ್ಯ ಅವರು ಶುಕ್ರವಾರ ನ್ಯಾಯಾಲಯ ಕಲಾಪಕ್ಕೆ ಹಾಜರಾಗಿದ್ದರು. ಜು.9ರಿಂದ ಜು.11ರ ನಡುವೆ ಮನೆಯಲ್ಲಿರುವ ವೇಳೆ ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.