ಸುರತ್ಕಲ್: ಇಲ್ಲಿನ ಕೃಷ್ಣಾಪುರ 8 ಎ ಬ್ಲಾಕ್ ನಲ್ಲಿ ಯುವಕ ಫರಾಜ್ ಬೈಕ್ ನಲ್ಲಿ ಬಂದು ಹಿಂದೂ ಯುವತಿಯನ್ನು ರಸ್ತೆ ಮಧ್ಯೆ ಚುಡಾಯಿಸಿ ಕಿರುಕುಳ ನೀಡಿ, ಹಣದ ಆಮಿಷ ತೋರಿಸಿ ನನ್ನ ಜತೆ ಬಾ ಎಂದು ಹೇಳಿ ಅನುಚಿತವಾಗಿ ವರ್ತಿಸಿದ ಘಟನೆ ಬೆಳಕಿಗೆ ಬಂದಿದೆ.
ಇದರಿಂದ ಭಯಭೀತಳಾದ ಯುವತಿಯೂ ಕಿರುಚಿದಾಗ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದರು. ಸ್ಥಳೀಯರನ್ನು ಕಂಡ ಯುವಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಬೈಕಿನ ಕೀಲಿಕೈಯನ್ನು ಸ್ಥಳದಲ್ಲೇ ಬಿಟ್ಟಿದ್ದು ಬೈಕನ್ನು ತಳ್ಳಿಕೊಂಡು ಹೋಗಿರುತ್ತಾನೆ.
https://bcsuddi.com/%e0%b2%87%e0%b2%82%e0%b2%a6%e0%b2%bf%e0%b2%a8%e0%b2%bf%e0%b2%82%e0%b2%a6-%e0%b2%b5%e0%b2%bf%e0%b2%a7%e0%b2%be%e0%b2%a8%e0%b2%ae%e0%b2%82%e0%b2%a1%e0%b2%b2-%e0%b2%85%e0%b2%a7%e0%b2%bf%e0%b2%b5%e0%b3%87/
ಯುವತಿಯ ಮನೆಯವರು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುರತ್ಕಲ್ ಪೊಲೀಸರು ಯುವಕನನ್ನು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.