LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮಂಡ್ಯದಲ್ಲಿ ಯುವಕನ ಜೀವ ತೆಗೆದ ಕ್ಷುಲ್ಲಕ ಜಗಳ..!

ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯಕಂಡ ಘಟನೆ ಮಂಡ್ಯದ ಕೆಆರ್ ಪೇಟೆ ತಾಲೂಕಿನ ಮಲ್ಕೋನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಂಡ್ಯ: ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯಕಂಡ ಘಟನೆ ಮಂಡ್ಯ ದ ಕೆಆರ್ ಪೇಟೆ ತಾಲೂಕಿನ ಮಲ್ಕೋನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಯೋಗೇಶ್ (32) ಕೊಲೆಯಾದ ದುರ್ದೈವಿಯಾಗಿದ್ದರೆ ಪ್ರದೀಪ್ (31) ಹತ್ಯೆಗೈದ ದುಷ್ಕರ್ಮಿಯಾಗಿದ್ದಾನೆ.

ಕೊಲೆಯಾದ ಯೋಗೇಶ್ ಹಾಗೂ ಆತನ ತಾಯಿ ಭಾಗ್ಯಮ್ಮ ಜೊತೆ ಪ್ರದೀಪ್ ಪದೇ ಪದೇ ಜಗಳ ಮಾಡುತ್ತಿದ್ದ.

ಮಂಗಳವಾರ ಸಂಜೆಯೂ ಇದೇ ರೀತಿ ಜಗಳ ಶುರುವಾಗಿದ್ದು, ಕೋಪ ವಿಕೋಪಕ್ಕೆ ತಿರುಗಿದೆ.

ಕೋಪದ ಭರದಲ್ಲಿ ಯೋಗೇಶ್ ತನ್ನ ಮನೆಯಲ್ಲಿದ್ದ ಚಾಕು ತಂದು ಯೋಗೇಶ್‌ಗೆ ಇರಿದಿದ್ದಾನೆ.

ಚಾಕು ಇರಿತಕ್ಕೊಳಗಾದ ಯೋಗೇಶ್‌ನನ್ನು ತಕ್ಷಣವೇ ಸ್ಥಳಿಯರು ಆಸ್ಪತ್ರೆಗೆ ರವಾನಿಸಿದ್ದಾರೆ.

ಆದರೆ ತೀವ್ರ ರಕ್ತಸ್ರಾವ ಉಂಟಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಯೋಗೇಶ್ ಮೃತಪಟ್ಟಿದ್ದಾನೆ.

ಸದ್ಯ ಕೊಲೆಗೈದ ಆರೋಪಿ ಪ್ರದೀಪ್ ಪರಾರಿಯಾಗಿದ್ದು, ತಲೆಮರೆಸಿಕೊಂಡಿರುವ ಪ್ರದೀಪ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಘಟನೆಯ ಕುರಿತು ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಳಿಗಾಲದಲ್ಲಿ ಈ ಆಹಾರಗಳ ಸೇವನೆಯನ್ನು ಮಾತ್ರ ಎಂದಿಗೂ ಮರೆಯಬಾರದು..!ಹೆತ್ತ ತಾಯಿಯನ್ನೇ ಹಿಗ್ಗಾಮುಗ್ಗಾ ಥಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿದ ಪಾಪಿ ಪುತ್ರಮನೆಯ ಉತ್ತರ ದಿಕ್ಕಿನಲ್ಲಿ ಈ ವಸ್ತುಗಳನ್ನು ಇಟ್ಟರೆ ಧನ ಸಂಪತ್ತು ವೃದ್ಧಿಯಾಗಿ ಶ್ರೀಮಂತರಾಗುವ ಯೋಗ ಬರುತ್ತದೆ!ಸರ್ಕಾರ ಜಾತಿ ಗಣತಿಯ ಅಂಕಿ-ಅಂಶ ಬಿಡುಗಡೆ ಮಾಡಬಾರದು: ಶಾಮನೂರು ಶಿವಶಂಕರಪ್ಪ.!ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ : ಜಗದೀಶ್ ಶೆಟ್ಟರ್.!ರಾಜ್ಯಾಧ್ಯಂತ ಮುಂದಿನ ಎರಡು ದಿನಗಳಲ್ಲಿ ಭಯಂಕರ ಚಳಿ: ಹವಾಮಾನ ಇಲಾಖೆ.!ಕ್ರಿಸ್​ಮಸ್ ಹಬ್ಬ ಹಿನ್ನೆಲೆ: ಈ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ.!ಒನಕೆ ಓಬವ್ವ ವೃತ್ತದಲ್ಲಿ ಬಸವಣ್ಣನವರ ಪ್ರತಿಮೆ: ಪ್ರತಿಭಟನೆ.!-ರಕ್ಕಸಬೊಮ್ಮಿತಂದೆ / ರಕ್ಕಸ ಬ್ರಹ್ಮಯ್ಯ ಅವರ ವಚನ …!ಯುವಕರು, ಬಡವರು, ಮಹಿಳೆಯರು ಮತ್ತು ರೈತರ ಮೇಲೆ ಕೇಂದ್ರೀಕರಿಸಲು ಬಿಜೆಪಿ ಅಭಿಯಾನ : ಪ್ರಧಾನಿ ಮೋದಿ