ಮಗನಿಗೆ ಬೈಕ್ ಕೊಟ್ಟ ತಂದೆಗೆ 1 ದಿನ ಜೈಲು!!
ಬೈಕ್ ಚಾಲನೆಗೆ ಅಪ್ರಾಪ್ತನಿಗೆ ಅವಕಾಶ ನೀಡಿದ ಕಾರಣಕ್ಕೆ ಬಾಲಕನ ತಂದೆಗೆ ನ್ಯಾಯಾಲಯ 25 ಸಾವಿರ ರೂ. ದಂಡ ಮತ್ತು ಒಂದು ದಿನದ ಜೈಲು ಶಿಕ್ಷೆ ವಿಧಿಸಿದೆ. ತೀರ್ಥಹಳ್ಳಿ ಪಟ್ಟಣದ ದೊಡ್ಡನೆಕೇರಿ ಬಳಿ 17 ವರ್ಷದ ಬಾಲಕ ಜೂ.19ರಂದು ಆಗುಂಬೆ ಕಡೆಯಿಂದ ಬೈಕ್ ಏರಿ ಬಂದು ಮತ್ತೊಂದು ಬೈಕ್‌ಗೆ ಡಿಕ್ಕಿ ಹೊಡೆಸಿದ್ದ. ಬಾಲಕನ ಮೇಲೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಜೆಎಂಎಎಫ್‌ಸಿ ನ್ಯಾಯಾಧೀಶರು, ಅಪ್ರಾಪ್ತ ಬಾಲಕನ ತಂದೆಗೆ 25 ಸಾವಿರ ರೂ. ದಂಡ ಹಾಗೂ ಒಂದು ದಿನದ ಜೈಲು ಶಿಕ್ಷೆ ವಿಧಿಸಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.