ಮಂಗಳೂರು : ಮಂಗಳೂರಿನಲ್ಲಿ ಭೀಕರವಾದ ಕೊಲೆ ನಡೆದಿದ್ದು ಕೇವಲ ಮೊಬೈಲ್ ವಿಚಾರಕ್ಕೆ ಜಗಳ ನಡೆದು ತಮ್ಮ ನಂಬರ್ ಕೊಲೆ ಮಾಡಿದ್ದಾನೆ. ಮಂಗಳೂರಿನ ಬಿಜೈ ಕೊಟ್ಟರ್ ಕ್ರಾಸ್ ಬಳಿ ಈ ಒಂದು ಕೊಲೆ ನಡೆದಿದೆ. ಚಾಕುವಿನಿಂದ ಇರಿದು ಅಡಿವೆಪ್ಪ (40) ನನ್ನ ತಮ್ಮ ರಾಜು ಕೊಲೆಗೈದಿದ್ದಾನೆ.
ಇಬ್ಬರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದ ಸಹೋದರರಾಗಿದ್ದು, ಕೊಟ್ಟಾರ್ ಕ್ರಾಸ್ ನಲ್ಲಿ ಇಬ್ಬರು ಬಾಡಿಗೆ ಮನೆಯಲ್ಲಿ ವಾಸವಿದ್ದರು. ನಿನ್ನೆ ರಾತ್ರಿ ಗಲಾಟೆಯ ಬೇಳೆ ಅಣ್ಣನ್ನು ತಮ್ಮ ರಾಜು ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಮಂಗಳೂರಿನ ಉರ್ವ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.