LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮಗಳ ಅಂತ್ಯಸಂಸ್ಕಾರದ ನಂತರ ತಂದೆಗೆ ಶಾಕ್ - ನಾನಿನ್ನೂ ಬದುಕಿದ್ದೇನೆ ಅಪ್ಪಾ ಎಂದು ಕರೆ ಮಾಡಿದ ಪುತ್ರಿ

ಪಾಟ್ನಾ: ಬಿಹಾರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮಗಳ ಅಂತ್ಯಸಂಸ್ಕಾರದ ಬಳಿಕ ಸ್ವತಃ ಮಗಳೇ ವಿಡಿಯೋ ಕಾಲ ಮಾಡಿ 'ಅಪ್ಪಾ ನಾನಿನ್ನೂ ಬದುಕಿದ್ದೇನೆ' ಎಂದು ಹೇಳಿದ್ದಾಳೆ. ಬಿಹಾರದ ಪುರ್ನಿಯಾದ ಅಕ್ಬರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಂಶು ಕುಮಾರಿ ಎಂಬ ಯುವತಿ ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದಳು. ಕುಟುಂಬಸ್ಥರು, ಪೊಲೀಸರು ಎಲ್ಲೆಡೆ ಹುಡುಕಾಡಿದ್ದರೂ ಅಂಶು ಕುಮಾರಿಯ ಪತ್ತೆಯೇ ಇರಲಿಲ್ಲ. ಕೆಲವು ದಿನಗಳ ಹಿಂದೆ ಕಾಲುವೆ ಒಂದರಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಮುಖವು ಗುರುತಿಸಲಾಗದಷ್ಟು ಉಬ್ಬಿಕೊಂಡಿತ್ತು. ಅದು ಕಾಣೆಯಾದ ಅಂಶು ಕುಮಾರಿಯದ್ದೇ ದೇಹ ಎಂದು ಭಾವಿಸಿ ಕುಟುಂಬಸ್ಥರು ಅಂತ್ಯಸಂಸ್ಕಾರ ಮಾಡಿದ್ದರು. ಅಂತ್ಯ ಸಂಸ್ಕಾರದ ಬಳಿಕ ತಕ್ಷಣವೇ ಯುವತಿ ತಂದೆಗೆ ವಿಡಿಯೋ ಕರೆ ಮಾಡಿ, ʼಅಪ್ಪಾ ನಾನಿನ್ನೂ ಬದುಕಿದ್ದೇನೆʼ ಎಂದು ಅಳುತ್ತಾ ತಿಳಿಸಿದ್ದಾಳೆ. ಇದರಿಂದ ವಿಚಲಿತಗೊಂಡ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಂಶು ತನ್ನ ಪ್ರಿಯಕರನೊಂದಿಗೆ ಊರು ಬಿಟ್ಟಿದ್ದು, ಆತನನ್ನೇ ದೇವಸ್ಥಾನವೊಂದರಲ್ಲಿ ಮದುವೆಯಾಗಿ ಅತ್ತೆ ಮನೆಯಲ್ಲಿದ್ದಳು. ಈ ವೃತ್ತಾಂತವನ್ನೆಲ್ಲಾ ತಂದೆಗೆ ತಿಳಿಸಿದ ಅಂಶು, ಬದುಕಿರುವ ಮಾಹಿತಿಯನ್ನು ನೀಡಿ, ಕುಟುಂಬ ದುಃಖಪಡದಂತೆ ತಿಳಿಸಿದ್ದಾಳೆ. ಘಟನೆಯ ಬಗ್ಗೆ ತಿಳಿದ ನಂತರ, ವಾಸ್ತವವನ್ನು ತಿಳಿಯಲು ತಂದೆ ಅಂಶು ಮೊಬೈಲ್ ಫೋನ್‌ಗೆ ವಿಡಿಯೋ ಕರೆ ಮಾಡಿದ್ದಾನೆ. ಅವಳು ತನ್ನ ಅತ್ತೆಯ ಜೊತೆ ಚೆನ್ನಾಗಿಯೇ ಇದ್ದಾಳೆ ಎಂದು ಹೇಳಿದ್ದಾಳೆ. ಇನ್ನು, ಅಂತ್ಯ ಸಂಸ್ಕಾರಕ್ಕೊಳಗಾದ ಯುವತಿಯ ಗುರುತನ್ನು ಈಗಾಗಲೇ ಪತ್ತೆ ಹಚ್ಚಲಾಗಿದ್ದು, ಇದೊಂದು ಮರ್ಯಾದಾ ಹತ್ಯೆ ಘಟನೆ ಆಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಮೃತ ಯುವತಿಯ ಪೋಷಕರು ತಲೆ ಮರೆಸಿಕೊಂಡಿದ್ದಾರೆ ಎಂದು ಠಾಣಾಧಿಕಾರಿ ಹೇಳಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
Coconut Rice Recipe : ಚಿತ್ರಾನ್ನದಷ್ಟೇ ರುಚಿಕರವಾದ ತೆಂಗಿನಕಾಯಿ ರೈಸ್‌ ರೆಸಿಪಿ ಒಮ್ಮೆ ಟ್ರೈ ಮಾಡಿಮಕ್ಕಳಿಂದ ಶೌಚಾಲಯ ಕ್ಲೀನಿಂಗ್ ಪ್ರಕರಣ: ಮುಖ್ಯ ಶಿಕ್ಷಕಿಯ ಬಂಧನಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ವಾಪಸ್- ಬಿಜೆಪಿ ಮುಖಂಡರ ಆಕ್ರೋಶಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ : 3000 ಹುದ್ದೆಗಳಿಗೆ ಅರ್ಜಿ ಆಹ್ವಾನಮಾಂಸಾಹಾರ ಊಟದ ಜೊತೆ ಹಾಲು ಕುಡಿದ್ರೆ ಇಷ್ಟೆಲ್ಲಾ ಸಮಸ್ಯೆ ಆಗುತ್ತಾ..!ಶಾಲಾ ಕಾಲೇಜುಗಳಲ್ಲಿ ಹಿಜಬ್ ನಿಷೇಧ ವಾಪಾಸ್ – ಸಿಎಂ ಸಿದ್ದರಾಮಯ್ಯಹೇರ್ ಡ್ರೈಯರ್‌ನಿಂದ ಬೆಂಕಿ – ಟೆಕ್ಕಿಯ ಕೂದಲಿನ ಜೊತೆ ಬೆಡ್‌ ಸುಟ್ಟು ಹೋಯ್ತು!ದೆಹಲಿ ಮದ್ಯನೀತಿ ಹಗರಣ - ಕೇಜ್ರಿವಾಲ್ ಮೂರನೇ ಬಾರಿ ಇ.ಡಿ ಸಮನ್ಸ್ಜೆಎನ್1 ರೂಪಾಂತರಿಗೂ ಸಿಗಲಿದೆ ಶೀಘ್ರ ಪರಿಣಾಮಕಾರಿ ಲಸಿಕೆಮೂಲಂಗಿ ಸೊಪ್ಪಿನಲ್ಲಿ ಹೇರಳವಾದ ಪೋಷಕಾಂಶಗಳು ಮಹತ್ವದ ಬಗ್ಗೆ ಗೊತ್ತಾದ್ರೆ ಬಿಸಾಕಲ್ಲ.!