LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮಗಳ ಮದುವೆಗೆ ಸಾಲ ಮಾಡಿದ ಹಣಕ್ಕೆ ಏಳು ವರ್ಷ ಜೀತದಾಳಾದ ಕತೆ ಇಲ್ಲಿದೆ.!

 

ಬೀದರ್: ಮಗಳ ಮದುವೆಗಾಗಿ ₹1 ಲಕ್ಷ ಸಾಲ ಪಡೆದದ್ದಕ್ಕೆ ಏಳು ವರ್ಷ ಜೀತದಾಳಾಗಿ ನನ್ನನ್ನು ದುಡಿಸಿಕೊಂಡಿದ್ದಾರೆ’ ಎಂದು ತಾಲ್ಲೂಕಿನ ಅಲಿಯಂಬರ್ ವ್ಯಕ್ತಿಯೊಬ್ಬರು ಅದೇ ಗ್ರಾಮದ ಇನ್ನೊಬ್ಬ ವ್ಯಕ್ತಿ ವಿರುದ್ಧ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.

ಗ್ರಾಮದ 60 ವರ್ಷ ವಯಸ್ಸಿನ ಶಂಕರ್ ಹಲಕುಡೆ ಅವರು ವಿಶ್ವನಾಥ ಗಂಗಶೆಟ್ಟಿ ಪಾಟೀಲ ವಿರುದ್ಧ ನೀಡಿರುವ ದೂರಿನ ಮೇರೆಗೆ ತಾಲ್ಲೂಕಿನ ಜನವಾಡ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 10ರಂದು ಪ್ರಕರಣ ದಾಖಲಾಗಿದೆ.

2016ರ ಜೂನ್ 1ರಿಂದ ಸತತ ಏಳು ವರ್ಷ ನನ್ನನ್ನು ವಿಶ್ವನಾಥ ಅವರು ಅವರ ಹೊಲದಲ್ಲಿ  ನಸುಕಿನ ಜಾವ ನಾಲ್ಕು ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಜೀತದಾಳಾಗಿ ಕೆಲಸ ಮಾಡಿಸಿಕೊಂಡಿದ್ದಾರೆ. ವಿಶ್ವನಾಥ ಅವರ ಮಗ ಬಸವರಾಜ ಪಾಟೀಲ ಅವರು ಮಾನಸಿಕವಾಗಿ ಕಿರುಕುಳ ಕೊಟ್ಟಿದ್ದಾರೆ. ಅವಾಚ್ಯ ಶಬ್ದಗಳಿಂದ ನನಗೆ ಹಾಗೂ ನನ್ನ ಕುಟುಂಬದ ಸದಸ್ಯರನ್ನು ನಿಂದಿಸಿ ಸ್ವಂತ ಮನೆ ಮಾರಾಟ ಮಾಡಲು ಒತ್ತಡ ಹೇರಿದ್ದಾರೆ ಎಂದು ಶಂಕರ್ ದೂರಿನಲ್ಲಿ ವಿವರಿಸಿದ್ದಾರೆ.

ಶಂಕರ್ ಹಲಕುಡೆ ಅವರು 2016ರಲ್ಲಿ ವಿಶ್ವನಾಥ ಗಂಗಶೆಟ್ಟಿ ಪಾಟೀಲ ಅವರಿಂದ ಮಗಳ ಮದುವೆಗಾಗಿ ₹1 ಲಕ್ಷ ಸಾಲ ಪಡೆದುಕೊಂಡಿದ್ದರು. ಮೂರು ವರ್ಷಗಳ ನಂತರ ಶಂಕರ್ ಅವರು ಸಾಲ ತೀರಿಸಿದ್ದಾರೆ. ಆದರೆ, ಇದನ್ನು ಒಪ್ಪದ ವಿಶ್ವನಾಥ, ಬಡ್ಡಿ ಸೇರಿ ಒಟ್ಟು ₹7.50 ಲಕ್ಷ ಸಾಲ ಹಿಂತಿರುಗಿಸಬೇಕಿತ್ತು ಎಂಬ ಕಾರಣ ನೀಡಿ ವರ್ಷಕ್ಕೆ ₹65 ಸಾವಿರ ಲೆಕ್ಕದಲ್ಲಿ ಜೀತದಾಳಾಗಿ ಕೆಲಸ ಮಾಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸುದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತರ ಸಾಲಮನ್ನಾ ಯೋಜನೆಯ ಫಲನುಭವಿಗಳ ಪಟ್ಟಿ ಬಿಡುಗಡೆ..!ಮೂಡಿಗೆರೆ ಬಿಇಒ ಕಚೇರಿಯಲ್ಲಿ ಮ್ಯಾನೇಜರ್ ಆತ್ಮಹತ್ಯೆಸೌರ ಮೇಲ್ಛಾವಣಿ ಯೋಜನೆ: ಅರ್ಜಿ ಸಲ್ಲಿಸುವುದು ಹೇಗೆ..!ಹೊಸ ವರ್ಷಕ್ಕೆ ಗ್ರಾಹಕರಿಗೆ ಸಿಹಿ ಸುದ್ದಿ - ಎಲ್​ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆವಿದೇಶದಲ್ಲಿ ಭಾರತೀಯ ರಾಜತಾಂತ್ರಿಕ ಕಚೇರಿಗಳ ಮೇಲೆ ದಾಳಿ: 43 ಶಂಕಿತರ ಗುರುತಿಸಿದ ಎನ್ಐಎಅಕ್ರಮ ಮರ ಕಡಿತ ಪ್ರಕರಣ – ಬಿಜೆಸಿ ಸಂಸದ ಪ್ರತಾಪ್ ಸಿಂಹ ಸಹೋದರನಿಗೆ ಜಾಮೀನು ಮಂಜೂರುರಾಮಜನ್ಮಭೂಮಿ ಮತ ಪಡೆಯುವ ವಿಚಾರವಲ್ಲ, ಇದು ಸಾಂಸ್ಕೃತಿಕ ವಿಷಯವಾಗಿದೆ - ರಾಜನಾಥ್ ಸಿಂಗ್ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಪತ್ನಿ ಹಾಗೂ ಪ್ರಿಯಕರನಿಂದ ಪತಿಯ ಹತ್ಯೆಡಿಸಿಎಂ ಡಿಕೆಶಿ ಹೂಡಿಕೆ ಮಾಡಿದ ಕೇರಳದ ಜೈಹಿಂದ್ ಚಾನಲ್​ಗೆ ಸಿಬಿಐ ನೋಟಿಸ್ಹೊಸ ವರ್ಷಾಚರಣೆ ಸಂಭ್ರಮದಲ್ಲಿ ನೂಕುನುಗ್ಗಲು - ಮಹಿಳೆ ಅಸ್ವಸ್ಥ, ಯುವತಿಗೆ ಕಿರುಕುಳ