LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮಣಿಪುರ: ಗಡಿಯಲ್ಲಿ ಮತ್ತೆರಡು ಮೃತದೇಹ ಪತ್ತೆ..!

ಗುವಾಹತಿ: ಗೋಣಿಚೀಲದಲ್ಲಿ ಕಟ್ಟಿದ್ದ ವಿವಸ್ತ್ರ ಮಹಿಳೆ ಮತ್ತು ಹೆಣ್ಣುಮಗುವಿನ ಶವ ದಕ್ಷಿಣ ಅಸ್ಸಾಂನ ಬರಾಕ್ ನದಿಯಲ್ಲಿ ಭಾನುವಾರ ಪತ್ತೆಯಾಗಿದೆ.

ನೆರೆಯ ಮಣಿಪುರದಲ್ಲಿ ಆರು ಶವಗಳು ಪತ್ತೆಯಾದ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರದ ನಡುವೆಯೇ ಈ ಘಟನೆ ವರದಿಯಾಗಿದೆ.

ಜಿರಿಬಾಮ್ ನ ಪರಿಹಾರ ಶಿಬಿರದಿಂದ ನಾಪತ್ತೆಯಾದ ಮೂವರು ಮಹಿಳೆಯರು ಮತ್ತು ಮಕ್ಕಳ ಶವ ಮೊನ್ನೆ ಪತ್ತೆಯಾಗಿತ್ತು.ಅಸ್ನಾನ ಕಚಾರ್ ನಲ್ಲಿರುವ ಚಿರಿಘಾಟ್ ನಲ್ಲಿ ಒಂದು ದೇಹ ಪತ್ತೆಯಾಗಿದ್ದರೆ, ಇದೇ ಜಿಲ್ಲೆಯ ಸಿಂಗರ್ಬಂದ್ ನಲ್ಲಿ ಮತ್ತೊಂದು ಶವ ಪತ್ತೆಯಾಗಿದೆ.

ಇಂಪಾಲ ಕಣಿವೆಯಲ್ಲಿ ಒಂಬತ್ತು ಮಂದಿ ಬಿಜೆಪಿ ಶಾಸಕರು ಸೇರಿದಂತೆ 13 ಶಾಸಕರ ಮನೆಗಳ ಮೇಲೆ ಉದ್ರಿಕ್ತರ ಗುಂಪು ದಾಳಿ ನಡೆಸಿದ ಮರುದಿನವೇ ಈ ಘಟನೆ ವರದಿಯಾಗಿದೆ. ಪಶ್ಚಿಮ ಇಂಫಾಲದಲ್ಲಿರುವ ಬಿಜೆಪಿ ಶಾಸಕ ರಬೀಂದ್ರೋ ಅವರನ್ನು ಭೇಟಿ ಮಾಡಲು ಬಯಸಿದ ಪ್ರತಿಭಟನಾಕಾರರು, ಅವರ ನಿವಾಸವನ್ನು ರವಿವಾರ ಸಂಜೆ ಧ್ವಂಸಗೊಳಿಸಿದರು.ಶನಿವಾರ ಮತ್ತೊಬ್ಬ ಶಾಸಕರ ಮನೆ ಮೇಲೆ ದಾಳಿ ನಡೆದಿತ್ತು.

ಲೋಕೋಪಯೋಗಿ ಸಚಿವ ಗೋವಿಂದ ಕೊಂತುಜಾಮ್, ಬಿಜೆಪಿ ಶಾಸಕರಾದ ರಾಧೇಶ್ಯಾಂ ಮತ್ತು ಪಾವನಂ ಬ್ರಿಜೋನ್ ಅವರ ನಿವಾಸ, ಕಾಂಗ್ರೆಸ್ ಶಾಸಕ ಟಿಎಚ್ ಲೋಕೇಶ್ವರ ಅವರ ನಿವಾಸಗಳನ್ನು ಕೂಡಾ ಸುಟ್ಟುಹಾಕಲಾಗಿದೆ.ಪ್ರತಿಭಟನಾಕಾರರ ಒಂದು ಗುಂಪು ಎನ್ ಪಿಪಿಎ ಕಕ್ಟಿಂಗ್ ಶಾಸಕ ಮಾಯಾಂಗಲಮ್ಬಮ್ ರಾಮೇಶ್ವ ಸಿಂಗ್‌ ಅವರ ಮೇಲೆ ಹಲ್ಲೆ ನಡೆಸಿದೆ ಎಂದು ತಿಳಿದು ಬಂದಿದೆ.ಈ ಮಧ್ಯೆ ಪೊಲೀಸರು ಹಿಂಸಾಚಾರಕ್ಕೆ ಸಂಬಂಧಿಸಿದಂತೆ 23 ಮಂದಿಯನ್ನು ಬಂಧಿಸಿದ್ದಾರೆ ಹಾಗೂ ಅನಿರ್ದಿಷ್ಟ ಅವಧಿಯ ಕರ್ಪ್ಯೂ ವಿಧಿಸಲಾಗಿದೆ. ಪೂರ್ವ ಇಂಫಾಲ್, ಪಶ್ಚಿಮ ಇಂಫಾಲ ಮತ್ತು ಬಿಷ್ಣುಪುರ ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರ್ನಾಟಕ ಸಾರಿಗೆ ನಿಗಮದ ಚಾಲಕ ಕಂ-ನಿರ್ವಾಹಕ ಹುದ್ದೆಗಳ ಭರ್ತಿ ರೆಡಿ.!ಬಳ್ಳಾರಿ: ಕಿತ್ತೂರುರಾಣಿ ಚೆನ್ನಮ್ಮ ಪದವಿಪೂರ್ವ ಕಾಲೇಜಿಗೆ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ.!12-08-2025 ದಿನದ ಮಂಡಕ್ಕಿ ಒಗ್ಗರಣೆ-ಮಿರ್ಚಿ..!ವಚನ: -ಸಿದ್ಧರಾಮೇಶ್ವರ .!ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡನೇ ಅಂಬೇಡ್ಕರ್.! ಹೆಚ್. ಆಂಜನೇಯಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳು ಸೇರಿ ಒಟ್ಟು 257 ಹುದ್ದೆಗಳಿಗೆ ಅರ್ಜಿ ಆಹ್ವಾನ.!ಅರಣ್ಯ ಭೂಮಿಗಳ ಕ್ರೂಢೀಕೃತ ದಾಖಲೆ: ಜಂಟಿ ಮೋಜಿಣಿ ನಡೆಸಿ ಗಡಿ ಗುರುತಿಸಿ; ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆಧರ್ಮಸ್ಥಳದಲ್ಲಿ ತನಿಖೆ; ಧರ್ಮ ದ್ರೋಹಿ ಚಟುವಟಿಕೆ.! ಎಸ್ ಲಿಂಗಮೂರ್ತಿಸರ್ಕಾರ ನಿವೃತ್ತ ನೌಕರರಿಗೆ ಸಂಧ್ಯಾ ಕಿರಣ ಯೋಜನೆ ಜಾರಿ ಮಾಡಲಿ : ಡಾ.ಎಲ್ ಬೈರಪ್ಪಬಂಡೀಪುರದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋದ ಪ್ರವಾಸಿಗನ ಮೇಲೆ ಕಾಡಾನೆ ದಾಳಿ