LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮಣಿಪುರ ಹಿಂಸಾಚಾರ: ಗುಂಪಿನ ದಾಳಿಯಿಂದ ನೆನಪಿನ ಶಕ್ತಿಯನ್ನೇ ಕಳೆದುಕೊಂಡ ಬಿಜೆಪಿ ಶಾಸಕ

ಮಣಿಪುರದಲ್ಲಿ ಗುಂಪಿನಿಂದ ಹಲ್ಲೆಗೊಳಗಾದ ಬಿಜೆಪಿ ಶಾಸಕ ವುಂಗ್‌ಜಾಗಿನ್ ವಾಲ್ಟೆ ನೆನಪಿನ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ ಎಂದು ಶಾಸಕರ ಪುತ್ರ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ದಾಳಿಕೋರರು ತನ್ನ ತಂದೆಯನ್ನು ಕಟ್ಟಿಹಾಕಿದ್ದರು. ಅಷ್ಟೇ ಅಲ್ಲದೆ ವಿದ್ಯುತ್ ಶಾಕ್ ನೀಡಿದ್ದಾನೆ. ಘಟನೆಯ ನಂತರ ಸರ್ಕಾರದಿಂದ ಯಾವುದೇ ಸಹಾಯವೂ ಸಿಕ್ಕಿಲ್ಲ ಎಂದು ಬಿಜೆಪಿ ಶಾಸಕನ ಪುತ್ರ ಅಳಲು ತೋಡಿಕೊಂಡಿದ್ದಾರೆ. ಫೆರ್ಜಾಲ್ ಜಿಲ್ಲೆಯ ಥಾನ್ಲೋನ್‌ ನಿಂದ ಮೂರು ಬಾರಿ ಶಾಸಕರಾಗಿರುವ ವಾಲ್ಟೆ ಅವರು ಇಂಫಾಲ್‌ನಲ್ಲಿರುವ ತಮ್ಮ ಅಧಿಕೃತ ನಿವಾಸಕ್ಕೆ ತೆರಳುತ್ತಿದ್ದಾಗ ದಾಳಿ ನಡೆದಿತ್ತು. ಶಾಸಕ ಮತ್ತು ಅವರ ಚಾಲಕನ ಮೇಲೆ ಆಕ್ರೋಶಗೊಂಡ ಗುಂಪು ಹಲ್ಲೆ ನಡೆಸಿದ್ದು, ಅವರ ಪಿಎಸ್‌ಒ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶಾಸಕರು ಪ್ರಸ್ತುತ ಗಂಭೀರ ಸ್ಥಿತಿಯಲ್ಲಿದ್ದು, ಇಂಫಾಲ್‌ನ ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್)ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವುಂಗ್‌ಜಾಗಿನ್ ವಾಲ್ಟೆ ಕುಕಿ ಸಮುದಾಯದಿಂದ ಬಂದವರು. ಅವರು ಕಳೆದ ಬಿಜೆಪಿ ಸರ್ಕಾರದಲ್ಲಿ ಮಣಿಪುರದ ಬುಡಕಟ್ಟು ವ್ಯವಹಾರಗಳು ಮತ್ತು ಹಿಲ್ಸ್ ಸಚಿವರಾಗಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯರ ಮಠದಲ್ಲಿ ನಡೀತು ಪವಾಡ, ವೀಲ್ ಚೇರಲ್ಲಿ ಬಂದವಳು, ನಡೆದು ಹೋದಳು.!ಉಕ್ರೇನ್ ಮೇಲೆ 158 ಡ್ರೋನ್‌ ದಾಳಿ ನಡೆಸಿದ ರಷ್ಯಾ ಸೇನೆಒಡೆದ ಹಿಮ್ಮಡಿ ಪಾದ ಸರಿಪಡಿಸಲು ಇಲ್ಲಿದೆ ಮನೆಮದ್ದು...!'ರಾಮ ಕೇವಲ ಹಿಂದೂಗಳಿಗೆ ಮಾತ್ರವಲ್ಲ ಇಡೀ ಜಗತ್ತಿಗೆ ಸೇರಿದ್ದಾನೆ' - ಫಾರೂಕ್ ಅಬ್ದುಲ್ಲಾಕಣ್ಣೂರಿನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಗಾಯಗೊಂಡ ಯುವತಿ ಮೃತ್ಯು: ನಕ್ಸಲ್‌ರಿಂದ ಪ್ರತೀಕಾರದ ಪೋಸ್ಟರ್ಭಯೋತ್ಪಾದಕ ಪಟ್ಟಿಗೆ ಕೆನಡಾದ ಲಖ್‍ಬೀರ್ ಸಿಂಗ್ ಲಾಂಡಾ ಸೇರ್ಪಡೆಅಪಾರ್ಟ್‍ಮೆಂಟ್‍ನ 33ನೇ ಫ್ಲೋರ್‌ನಿಂದ ಬಿದ್ದು ಯುವಕ ಮೃತ್ಯುಉದ್ಯೋಗ ಮೇಳ ಸಿದ್ಧತೆಗೆ ಸಚಿವರ ತಂಡ ರಚನೆ : ಸಿಎಂ ಸಿದ್ದರಾಮಯ್ಯಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ದಿಗೆ 1 ಸಾವಿರ ಕೋಟಿ ರೂ. ಅನುದಾನ -ಸಿದ್ದರಾಮಯ್ಯಸುಕನ್ಯಾ ಸಮೃದ್ಧಿ, ಅಂಚೆ ಎಫ್‌ಡಿ ಬಡ್ಡಿದರ ಏರಿಕೆ