E-PAPER
17 Nov 2026, 12:22:16 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಮಣ್ಣೂರು ಗ್ರಾಮದ ಗೋಮಾಳ ಜಮೀನು ಉಳಿವಿಗಾಗಿ ಡಿಸಿಗೆ ಗ್ರಾಮಸ್ಥರ ಮನವಿ

ಆಶ್ರಯ ಯೋಜನೆ ಹಾಗೂ ಇಲಾಖೆಗಳ ಜಮೀನು ಹಸ್ತಾಂತರ ಪ್ರಕ್ರಿಯೆ ರದ್ದುಗೊಳಿಸಲು ಆಗ್ರಹ

ಬೆಳಗಾವಿ:16:
ತಾಲೂಕಿನ ಮಣ್ಣೂರು ಗ್ರಾಮದ ಸರ್ವೇ ನಂಬರ್ 5, 101 ಹಾಗೂ 147ರಲ್ಲಿರುವ ಸರ್ಕಾರಿ ಗಾಯರಾಣ (ಗೋಮಾಳ) ಜಮೀನನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳುವುದನ್ನು ತಕ್ಷಣವೇ ಕೈಬಿಡಬೇಕು ಮತ್ತು ಅಲ್ಲಿ ನಡೆಯುತ್ತಿರುವ ಜಮೀನು ಹಸ್ತಾಂತರ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಮಣ್ಣೂರಿನ ‘ದೇವಸ್ಕಿ ಪಂಚ ಕಮಿಟಿ ಮತ್ತು ಗ್ರಾಮ ಸುಧಾರಣಾ ಮಂಡಳ’ ಹಾಗೂ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಗ್ರಾಮದಲ್ಲಿ ಸುಮಾರು ಶೇ. 75 ರಷ್ಟು ಜನರು ಕೃಷಿ ವೃತ್ತಿಯನ್ನೇ ನೆಚ್ಚಿಕೊಂಡಿದ್ದು, ದನಕರುಗಳ ಮೇವಿಗಾಗಿ ಈ ಸರ್ಕಾರಿ ಗಾಯರಾಣ ಜಮೀನು ಅತ್ಯಂತ ಅವಶ್ಯಕವಾಗಿದೆ.

*ಮೈದಾನ ಹಾಗೂ ಕೆರೆಗೆ ಕಂಟಕ:*

ಮನವಿಯಲ್ಲಿ ತಿಳಿಸಿರುವಂತೆ, ಸರ್ವೇ ನಂಬರ್ 101 ರಲ್ಲಿದ್ದ ಒಟ್ಟು 23 ಎಕರೆ 25 ಗುಂಟೆ ಜಮೀನಿನ ಪೈಕಿ ಈಗಾಗಲೇ ಡಯಟ್ ಕಾಲೇಜಿಗೆ 5 ಎಕರೆ ಹಾಗೂ ಸರ್ಕಾರಿ ಶಿಕ್ಷಕರ ಶಿಕ್ಷಣ ಕಾಲೇಜಿಗೆ 5 ಎಕರೆ ಜಮೀನನ್ನು ಹಂಚಿಕೆ ಮಾಡಲಾಗಿದೆ. ಇನ್ನುಳಿದ 13 ಎಕರೆ 25 ಗುಂಟೆ ಜಮೀನಿನಲ್ಲಿ ಈಗಾಗಲೇ ಕನ್ನಡ ಶಾಲೆ, ತಾಲೂಕು ಪಂಚಾಯತಿಯಿಂದ ಜನತಾ ಕಾಲೋನಿ, ಗ್ರಾಮದ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಏಕೈಕ ಆಟದ ಮೈದಾನ ಹಾಗೂ ಕೃಷಿಕರಿಗೆ ನೆರವಾಗುವ ದೊಡ್ಡ ಕೆರೆ ಇದೆ.
*ಆಶ್ರಯ ಯೋಜನೆಗೆ ಗ್ರಾಮಸ್ಥರ ವಿರೋಧ:*

ಸಾಕಷ್ಟು ಜಮೀನು ಈಗಾಗಲೇ ನಾನಾ ಉದ್ದೇಶಗಳಿಗೆ ಬಳಕೆಯಾಗಿದ್ದು, ಉಳಿದಿರುವ ಆಟದ ಮೈದಾನದ ಜಾಗದಲ್ಲಿ ಬೆಳಗಾವಿ ತಾಲೂಕು ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ಆಡಳಿತ ಮಂಡಳಿ ಮುಂದಾಗಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ. ಗ್ರಾಮದ ಏಕೈಕ ಮೈದಾನ ಮತ್ತು ಗೋಮಾಳ ಜಾಗದಲ್ಲಿ ಆಶ್ರಯ ಯೋಜನೆ ಜಾರಿಗೊಳಿಸುವುದನ್ನು ಮಣ್ಣೂರು ಗ್ರಾಮಸ್ಥರು ಖಂಡಿಸಿದ್ದು, ತಕ್ಷಣವೇ ಈ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಸರ್ವೇ ನಂಬರ್ 5, 101 ಮತ್ತು 147ರಲ್ಲಿ ವಿಭಾಗೀಯ ಜಮೀನು ಹಸ್ತಾಂತರಕ್ಕಾಗಿ ನಡೆಸಲಾದ ಎಲ್ಲಾ ಸರ್ವೇ ಕಾರ್ಯಗಳನ್ನು ರದ್ದುಗೊಳಿಸಿ, ಗೋಮಾಳ ಜಮೀನನ್ನು ಮೂಲ ಉದ್ದೇಶಕ್ಕಾಗಿಯೇ ಉಳಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಈ ಮನವಿಯ ಪ್ರತಿಗಳನ್ನು ಬೆಳಗಾವಿ ತಹಶೀಲ್ದಾರ್, ಅಂಬೇವಾಡಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಮಣ್ಣೂರು ಗ್ರಾಮ ಆಡಳಿತಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ದೇವಸ್ಕಿ ಪಂಚ ಕಮಿಟಿಯ ಅಧ್ಯಕ್ಷರು ಹಾಗೂ ಗ್ರಾಮದ ಪ್ರಮುಖರಾದ ವಿನಯ ಕದಮ, ಅರುಣ ಸಾಂಬ್ರೇಕರ, ಮಾರುತಿ ಚೌಗುಲೆ, ಯಲ್ಲಪ್ಪ ಕರಾಟ್ಕರ್, ಸಂದೀಪ್ ಡೊಂಗರಿ ಸೇರಿದಂತೆ ಹಲವು ಗ್ರಾಮಸ್ಥರು ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.