ಮದ್ಯದ ಅಮಲಿನಲ್ಲಿ ಸ್ಮಶಾನದಲ್ಲಿ ಅರ್ಧ ಸುಟ್ಟ ಶವವನ್ನು ತಿಂದ ಇಬ್ಬರ ಬಂಧನ
ಭುವನೇಶ್ವರ: ಒಡಿಶಾದ ಮಯೂರ್‌ಭಂಜ್ ಜಿಲ್ಲೆಯಲ್ಲಿ ಅರ್ಧ ಸುಟ್ಟ ಮೃತದೇಹವನ್ನು ತಿನ್ನುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. "ಗ್ರಾಮಸ್ಥರು ಮೃತರ ಶವವನ್ನು ಅಂತ್ಯಕ್ರಿಯೆಗಾಗಿ ಕೊಂಡೊಯ್ದಿದ್ದರು. ಶವಸಂಸ್ಕಾರ ನಡೆಯುತ್ತಿರುವಾಗ, ಇಬ್ಬರೂ ಅರ್ಧ ಸುಟ್ಟ ದೇಹದ ಕೆಲವು ಭಾಗವನ್ನು ತೆಗೆದುಕೊಂಡು ಅದನ್ನು ತಿನ್ನಲು ಪ್ರಾರಂಭಿಸಿದರು. ಇದನ್ನು ಗಮನಿಸಿದ ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳನ್ನು ಬಂಧಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.