LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮದ್ಯ ಖರೀದಿಗೆ ಹಣಕ್ಕಾಗಿ ಮಗುವನ್ನೇ ಮಾರಾಟ ಮಾಡಿದ ದಂಪತಿ

ಪ.ಬಂಗಾಳ; ಪಾನಿಹಟಿಯಲ್ಲಿ ಮದ್ಯ ಖರೀದಿಗೆ ಬೇಕಾದ ಹಣಕ್ಕಾಗಿ ತಮ್ಮ ಆರು ತಿಂಗಳ ಮಗುವನ್ನೇ ಮಾರಾಟ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಮಕ್ಕಳ ಮಾರಾಟ ಜಾಲವು ಶಾಮೀಲಾಗಿರುವ ಸಾಧ್ಯತೆಯನ್ನು ಪೊಲೀಸರು ತಿಳಿಸಿದ್ದಾರೆ. ಆದರೆ ಮಾರಾಟ ಮಾಡಿರುವ ಮಗು ಇನ್ನೂ ಕೂಡಾ ಪತ್ತೆಯಾಗಿಲ್ಲವೆಂದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿ ಮಗುವಿನ ತಂದೆ ಜೈದೇವ್ ಚೌಧುರಿ ತಾಯಿ ಸತಿ ಚೌಧುರಿ ಹಾಗೂ ತಾತ ಕನಾಯಿ ಚೌಧುರಿ ಎಂಬವರ ಬಂಧನ ನಡೆದಿದೆ.

ಮಗುವನ್ನು ಯಾರಿಗೆ ಮಾರಾಟ ಮಾಡಿದ್ದಾರೆಂಬ ಬಗ್ಗೆ ಅವರನ್ನು ಪ್ರಶ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಕೆಲವು ಸಮಯದಿಂದ ದಂಪತಿಯ ಮಗುವು ನಾಪತ್ತೆಯಾಗಿರುವುದನ್ನು ಗಮನಿಸಿದ ಸ್ಥಳೀಯರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರು. ಮಗುವಿನ ಬಗ್ಗೆ ಸ್ಥಳೀಯರು ವಿಚಾರಿಸಿದಾಗಲೆಲ್ಲಾ ಅದನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟುಬಂದಿರುವುದಾಗಿ ದಂಪತಿ ಹೇಳಿಕೊಳ್ಳುತ್ತಿದ್ದರು.ಸಂಶಯಗೊಂಡ ನೆರೆಹೊರೆಯವರು ಸ್ಥಳೀಯ ನಗರಸಭಾ ಸದಸ್ಯನಿಗೆ ಈ ವಿಷಯ ತಿಳಿಸಿದ್ದು, ಆತ ಅದನ್ನು ಪೊಲೀಸರ ಗಮನಕ್ಕೆ ತಂದಾಗ ಅಸಲಿಯತ್ತು ಬಯಲಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ರಾಮ ಕೇವಲ ಹಿಂದೂಗಳಿಗೆ ಮಾತ್ರವಲ್ಲ ಇಡೀ ಜಗತ್ತಿಗೆ ಸೇರಿದ್ದಾನೆ' - ಫಾರೂಕ್ ಅಬ್ದುಲ್ಲಾಕಣ್ಣೂರಿನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಗಾಯಗೊಂಡ ಯುವತಿ ಮೃತ್ಯು: ನಕ್ಸಲ್‌ರಿಂದ ಪ್ರತೀಕಾರದ ಪೋಸ್ಟರ್ಭಯೋತ್ಪಾದಕ ಪಟ್ಟಿಗೆ ಕೆನಡಾದ ಲಖ್‍ಬೀರ್ ಸಿಂಗ್ ಲಾಂಡಾ ಸೇರ್ಪಡೆಅಪಾರ್ಟ್‍ಮೆಂಟ್‍ನ 33ನೇ ಫ್ಲೋರ್‌ನಿಂದ ಬಿದ್ದು ಯುವಕ ಮೃತ್ಯುಉದ್ಯೋಗ ಮೇಳ ಸಿದ್ಧತೆಗೆ ಸಚಿವರ ತಂಡ ರಚನೆ : ಸಿಎಂ ಸಿದ್ದರಾಮಯ್ಯಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ದಿಗೆ 1 ಸಾವಿರ ಕೋಟಿ ರೂ. ಅನುದಾನ -ಸಿದ್ದರಾಮಯ್ಯಸುಕನ್ಯಾ ಸಮೃದ್ಧಿ, ಅಂಚೆ ಎಫ್‌ಡಿ ಬಡ್ಡಿದರ ಏರಿಕೆಪುಸ್ತಕಗಳ ಆಯ್ಕೆಗಾಗಿ ಅರ್ಜಿ ಆಹ್ವಾನ.!ಪಿಎಂ ಆವಾಸ್ ಯೋಜನೆಯಡಿ 4 ಕೋಟಿಗೂ ಅಧಿಕ ಮನೆಗಳ ನಿರ್ಮಾಣ: ಪ್ರಹ್ಲಾದ್ ಜೋಶಿಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ ಅಂದರೆ ಈ ಸಣ್ಣ ಉಪಾಯ ಮಾಡಿ ದೇವರೇ ದಾರಿ ತೋರಿಸುತ್ತಾನೆ.