LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮಲಗಿದ್ದಲ್ಲೇ ಪುತ್ರ ಸಾವು, ಅರಿವೇ ಇಲ್ಲದೆ ಮೃತದೇಹ ಜೊತೆ 4 ದಿನ ಕಳೆದ ಅಂಧ ಪೋಷಕರು..!

ಹೈದರಾಬಾದ್: ಪೋಷಕರು ವಯಸ್ಸು 60 ದಾಟಿದೆ. ಇಬ್ಬರೂ ಅಂಧರು. ಹೀಗಾಗಿ 30 ವರ್ಷದ ಮಗ ಈ ಪೋಷಕರ ನೋಡಿಕೊಳ್ಳುತ್ತಿದ್ದ. ಪೋಷಕರಿಗೆ ಸಮಯಕ್ಕೆ ತಕ್ಕಂತೆ ಅನ್ನ ನೀರು ನೀಡಿ, ಆರೈಕೆ ಮಾಡುತ್ತಿದ್ದ. ಔಷಧಿಗಳನ್ನು ಚಾಚೂ ತಪ್ಪದೆ ನೀಡುತ್ತಿದ್ದ. ಬಡತನವಿದ್ದರೂ ಪೋಷಕರಲ್ಲಿ ನೆಮ್ಮದಿ ಇತ್ತು.

ಇತ್ತ ಪೋಷಕರನ್ನು ಐಷಾರಾಮಿ ಅಲ್ಲದಿದ್ದರೂ ಅವರ ಸಂತೋಷಕ್ಕೆ ತಕ್ಕಂತೆ ನೋಡಿಕೊಳ್ಳುತ್ತಿದ್ದೇನೆ ಅನ್ನೋ ತೃಪ್ತಿ ಮಗನಲ್ಲೂ ಇತ್ತು. ಆದರೆ ಈ ಸುಂದರ ಕುಟುಂಬಕ್ಕೆ ಅತೀ ದೊಡ್ಡ ಆಘಾತ ಎದುರಾಗಿದೆ. ಮಲಗಿದ್ದ ಮಗ ಏಳಲೇ ಇಲ್ಲ. ಮಗ ಮೃತಪಟ್ಟಿರುವುದು ಗೊತ್ತಿಲ್ಲದೆ ನಾಲ್ಕು ದಿನ ಮೃತದೇಹ ಜೊತೆ ಕಳೆದಿದ್ದಾರೆ. ಈ ದಾರುಣ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಅಂಧ ಪೋಷಕರು ಅನಾಥರಾಗಿದ್ದಾರೆ. ಎಂದಿನಂತೆ ಪೋಷಕರಿಗೆ ಆಹಾರ ನೀರು ನೀಡಿದ್ದಾನೆ. ಬಳಿಕ ಔಷಧಿಗಳನ್ನು ಕೊಟ್ಟಿದ್ದಾನೆ. ವಯೋಸಹಜ ಅನಾರೋಗ್ಯ ಪೋಷಕರಿಗಿತ್ತು. ಪೋಷಕರ ಮಲಗಿಸಿದ 30 ವರ್ಷದ ಪುತ್ರ ತಾನೂ ಮಲಗಿದ್ದಾನೆ. ಆದರೆ ರಾತ್ರಿ ಮಲಗಿದ ಪುತ್ರ ಬೆಳಗ್ಗೆ ಏಳಲೇ ಇಲ್ಲ. ಇತ್ತ ಅಂಧ ಪೋಷಕರು ಎದ್ದ ಮಗನ ಕೂಗಿದ್ದಾರೆ. ಆದರೆ ಸುಳಿವಿಲ್ಲ. ಮಗ ಬೇಗನೆ ಎದ್ದು ಕೆಲಸಕ್ಕೆ ಹೋಗಿರಬೇಕು. ಅಥವಾ ಬೇರೆ ಕೆಲಸದ ನಿಮಿತ್ತ ತೆರಳಿರಬೇಕು ಎಂದುಕೊಂಡು ಇಬ್ಬರೂ ಮಗನ ಬರುವಿಕೆಗಾಗಿ ಕಾದು ಕುಳಿತಿದ್ದಾರೆ.

ಎಷ್ಟು ಹೊತ್ತಾದರು ಮಗ ಬರಲಿಲ್ಲ. ಇತ್ತ ಪೋಷಕರಿಗೆ ಹಸಿವು ಹೆಚ್ಚಾಗಿದೆ. ಮಗನ ಕೂಗಿದ್ದಾರೆ. ಆದರೆ ಸುಳಿವಿಲ್ಲ. ಹಸಿವಿನಿಂದ ಇಬ್ಬರು ಹಾಗೇ ನಿದ್ದೆಗೆ ಜಾರಿದ್ದಾರೆ. ಬಳಿಕ ಎದ್ದು ಮತ್ತೆ ಮಗನಿಗಾಗಿ ಕೂಗಿದ್ದಾರೆ. ಮನೆ ಹುಡುಕಾಡಿದಾಗ ಮಗ ಮಲಗಿರುವ ಸ್ಥಳಕ್ಕೆ ಬಂದಿದ್ದಾರೆ. ಮಗನ ದೇಹ ಮುಟ್ಟಿ ಸಮಾಧಾನ ಪಟ್ಟಿದ್ದಾರೆ. ಆದರೆ ಮಗ ತಮಗೇನು ನೀಡಿಲ್ಲ, ಹಸಿವು ತಾಳಲಾರದೇ ಮಗನ ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಮಗ ಮಾತ್ರ ಏಳಲೇ ಇಲ್ಲ. ಅಷ್ಟು ಹೊತ್ತಿಗೆ ಅಂಧ ಪೋಷಕರ ದೇಹದ ಶಕ್ತಿ ಕುಂದಿದೆ. ಆಯಾಸ, ಬಳಲಿಕೆಗೆ ಹೆಚ್ಚಾಗಿದೆ. ಮಗನ ದೇಹದ ಪಕ್ಕದಲ್ಲೇ ಅಸ್ವಸ್ಥರಾಗಿ ನೆಲದ ಮೇಲೆ ಮಲಗಿದ್ದಾರೆ.

ಇಷ್ಟೊತ್ತಿಗೆ ನಾಲ್ಕು ದಿನಗಳೇ ಉರುಳಿದೆ. ಅಂಧ ಪೋಷಕರು ಅಸ್ವಸ್ಥಗೊಂಡು ಬಿದ್ದಿದ್ದಾರೆ. ಇತ್ತ ಮನೆಯಿಂದ ಕೆಟ್ಟ ವಾಸನೆ ಬರಲು ಆರಂಭಿಸಿದೆ. ಹೀಗಾಗಿ ಅದೇ ಕಾಲೋನಿಯ ಇತರ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳ್ಕಕೆ ಆಗಮಿಸಿದ ಪೊಲೀಸರಿಗೆ ದುಃಖ ಉಮ್ಮಳಿಸಿ ಬಂದಿದೆ. ಪೋಷಕರ ಪರಿಸ್ಥಿತಿ, ಮನೆಯ ಸ್ಥಿತಿ ಕಂಡು ಮರುಗಿದ್ದಾರೆ. ತಕ್ಷಣವೇ ಮಗನ ಮೃತದೇಹ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಸಿದ್ದಾರೆ. ಇತ್ತ ಪೋಷಕರಿಗೆ ವೈದ್ಯಕೀಯ ನೆರವು ನೀಡಿದ್ದಾರೆ.

ಇತ್ತ ಪೊಲೀಸರು ಮತ್ತೊಬ್ಬ ಕಿರಿಯ ಮಗನಿಗೆ ಮಾಹಿತಿ ನೀಡಿದ್ದಾರೆ. ಕಿರಿಯ ಮಗ ಹೈದರಾಬಾದ್‌ನಿಂದ ಕೆಲ ದೂರದಲ್ಲಿ ನೆಲೆಸಿದ್ದ. ಕೂಲಿ ಕೆಲಸದ ಕಾರಣ ಕಿರಿಯ ಮಗ ಕೆಲ ದಿನಗಳಿಂದ ಪೋಷಕರ ನೋಡಲು ಆಗಮಿಸಿರಲಿಲ್ಲ. ಪೊಲೀಸರ ಮಾಹಿತಿಯಿಂದ ಮನೆಗೆ ಆಗಮಿಸಿದ ಕಿರಿಯ ಮಗ ಅಂತ್ಯಸಂಸ್ಕಾರ ನೆರವೇರಿಸಿದ್ದಾನೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಿಮಾಚಲ ಪ್ರದೇಶದ ಹಳ್ಳಿಯಲ್ಲಿ ಪಾಕಿಸ್ತಾನದ ಗುರುತಿರುವ ಬಲೂನ್ ಪತ್ತೆಮೆಸ್ಕಾಂ ಅಧಿಕಾರಿ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌: ಬೃಹತ್ ಪ್ರತಿಭಟನೆಹನಿ ನೀರಾವರಿ ಘಟಕಕ್ಕೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನಥೈಲ್ಯಾಂಡ್‌ನಲ್ಲಿ ಭಾರತೀಯ ಪ್ರವಾಸಿಗನ ಮೇಲೆ ಹುಲಿ ದಾಳಿSSLCಯಲ್ಲಿ‌ ಶೇ 60ಕ್ಕಿಂತ ಕಡಿಮೆ ಫಲಿತಾಂಶ: 'DDPI ಗಳಿಗೆ ನೋಟಿಸ್ ನೀಡಿ, ಕ್ರಮ ಕೈಗೊಳ್ಳಿ'- ಸಿಎಂ ಸೂಚನೆರಾಜ್ಯದಲ್ಲಿ ಕೊರೊನಾ ಹೆಚ್ಚಳ: ಶಾಲೆಗಳಿಗೆ ಆರೋಗ್ಯ ಇಲಾಖೆಯಿಂದ ಗೈಡ್​​ಲೈನ್ಸ್ಮುಂದಿನ 3 ದಿನಗಳ ಕಾಲ ಭಾರೀ ಮಳೆ..! 6 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆಸಾರ್ವಜನಿಕ ಸ್ಥಳದಲ್ಲಿ ಗುಟ್ಕಾ ಉಗುಳುವುದು, ಸಿಗರೇಟು ಸೇದಿದರೆ ದಂಡ - 1,000 ರೂ.ಗೆ ಏರಿಕೆಸೋಷಿಯಲ್ ಮೀಡಿಯಾದಲ್ಲಿ ಕೋಮು ಪ್ರಚೋದನಕಾರಿ ಪೋಸ್ಟ್; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಪ್ರಕರಣ ದಾಖಲು