LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮಳೆಯ ಅವಾಂತರದಿಂದ ಜಿಲ್ಲೆಯಲ್ಲಿ 664.91 ಹೆಕ್ಟೇರ್ ಕೃಷಿ ಬೆಳೆ ನಾಶ ಯಾವ ಯಾವ ಧಾನ್ಯಗಳು.?

 

ಚಿತ್ರದುರ್ಗ: ಜಿಲ್ಲೆಯಲ್ಲಿ ಅಕ್ಟೋಬರ್ ಮಾಹೆಯಲ್ಲಿ ಬಿದ್ದಂತಹ ಹೆಚ್ಚಿನ ಮಳೆಯಿಂದಾಗಿ ಬೆಳೆಹಾನಿಯಾಗಿದ್ದು, ಜಿಲ್ಲೆಯಾದ್ಯಂತ 664.91 ಹೆಕ್ಟೇರ್‍ಗಳಷ್ಟು ಪ್ರದೇಶದಲ್ಲಿ ಬೆಳೆಹಾನಿಯಾಗಿರುವುದಾಗಿ ಸರ್ಕಾರಕ್ಕೆ ವರದಿ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಬೆಳೆಗಳಾದ ಮೆಕ್ಕೆಜೋಳ-102397 ಹೆಕ್ಟೇರ್, ಶೇಂಗಾ-107013 ಹೆಕ್ಟೇರ್, ರಾಗಿ-44398 ಹೆಕ್ಟೇರ್, ಸಿರಿಧಾನ್ಯಗಳು-30486 ಹೆಕ್ಟೇರ್, ತೊಗರಿ-21024 ಹೆಕ್ಟೇರ್, ಹತ್ತಿ-8177 ಹೆಕ್ಟೇರ್ ಮತ್ತು ಇನ್ನಿತರೆ ಬೆಳೆಗಳನ್ನೊಳಗೊಂಡಂತೆ ಒಟ್ಟು 3,19,007 ಹೆಕ್ಟೇರ್ ಪ್ರದೇಶಲ್ಲಿ ಕೃಷಿ ಬೆಳೆಗಳ ಬಿತ್ತನೆಯಾಗಿದೆ. ಜಿಲ್ಲೆಯಾದ್ಯಂತ ಹಲವು ದಿನಗಳಿಂದ ಬಿದ್ದಂತಹ ಮಳೆಯಿಂದಾಗಿ ಜಿಲ್ಲೆಯಲ್ಲಿ ಶೇಂಗಾ-237.60 ಹೆಕ್ಟೇರ್, ಮೆಕ್ಕೆಜೋಳ-311.60 ಹೆಕ್ಟೇರ್, ತೊಗರಿ- 77.40 ಹೆಕ್ಟೇರ್, ಹತ್ತಿ-16.80 ಹೆಕ್ಟೇರ್, ರಾಗಿ- 10.40 ಹೆಕ್ಟೇರ್, ಸಜ್ಜೆ- 3.51 ಹೆಕ್ಟೇರ್, ಭತ್ತ - 1.60 ಹೆಕ್ಟೇರ್ ಹಾಗೂ ಇತರೆ ಬೆಳೆಗಳನ್ನೊಳಗೊಂಡಂತೆ ಒಟ್ಟಾರೆ 664.91 ಹೆಕ್ಟೇರ್‍ಗಳಷ್ಟು ಪ್ರದೇಶದಲ್ಲಿ ಬೆಳೆ ಹಾನಿಯಾದ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಖಾಸಗಿ ಕೃಷಿ ಕಾಲೇಜು ಆರಂಭಿಸಲು ಅರ್ಜಿ ಆಹ್ವಾನಐಶ್ವರ್ಯ ಗೌಡ ಕೇಸ್​: ಮಾಜಿ ಸಂಸದ ಡಿಕೆ ಸುರೇಶ್​ಗೆ ಇಡಿ ಸಮನ್ಸ್​'2028ಕ್ಕೆ ಮತ್ತೆ ಪ್ರಮಾಣವಚನ ಸ್ವೀಕಾರ ಮಾಡ್ತೇವೆ'- ಡಿಕೆಶಿಕೊಟ್ಟಿಯೂರು: ಭಾರೀ ಜನಸಂದಣಿ, 10 ನಿಮಿಷದ ಹಾದಿಗೆ 3.30 ತಾಸು!! ಮಗು ಸಾವು; ಹೊಳೆ ನೀರಲ್ಲಿ ಕೊಚ್ಚಿ ಹೋದ ತರುಣರುಮಂಗಳೂರಿನಲ್ಲಿ ಮತ್ತೆ ಮಳೆ ಅನಾಹುತ : ಮನೆ ಮೇಲೆ ಕುಸಿದು ಬಿದ್ದ ಗುಡ್ಡಬಿಇ, ಬಿ.ಸಿ.ಎ, ಬಿ.ಎಸ್ಸಿ ಆದವರಿಗೆ ಬಿಇಎಲ್ ನಲ್ಲಿ ಉದ್ಯೋಗವಕಾಶಸೈಕಲ್ ಜಾಥಾ; ವಿಧಾನಸೌಧದ ಮೆಟ್ಟಿಲ ಮೇಲೆ ಬಿದ್ದುಬಿಟ್ಟ ಡಿಕೆ ಶಿವಕುಮಾರ್!!ಟೆಹ್ರಾನ್‌ ನಗರ ತೊರೆಯಲು ಭಾರತೀಯರಿಗೆ ತುರ್ತು ಸೂಚನೆಯುವತಿಯನ್ನು ಹೊತ್ತೊಯ್ದು ಗೆಳೆಯನ ಮುಂದೆಯೇ ಗ್ಯಾಂಗ್ ರೇಪ್: 8 ಆರೋಪಿಗಳು ಅರೆಸ್ಟ್ಅನರ್ಹ ಪಡಿತರ ಚೀಟಿ ರದ್ದುಪಡಿಸಲು ಹೊಸ ಕ್ರಮ, 44 ಲಕ್ಷ ಪಡಿತರ ಕಾರ್ಡ್‌ಗಳ ಮೇಲೆ ಬಿರುಸು ತನಿಖೆ