Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಮೈಸೂರು ಅರಮನೆಯಲ್ಲಿ ವೈಭವದ ಆಯುಧ ಪೂಜೆ ಸಂಭ್ರಮ: ಚಂಡಿ ಹೋಮದೊಂದಿಗೆ ಧಾರ್ಮಿಕ ವಿಧಿ-ವಿಧಾನ ಆರಂಭ

ಮೈಸೂರು : ನಾಡಿನಾದ್ಯಂತ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿದ್ದು, ಐತಿಹಾಸಿಕ ಮೈಸೂರು ಅರಮನೆಯಲ್ಲಿಯೂ ರಾಜ ಪರಂಪರೆಯಂತೆ ಆಯುಧ ಪೂಜೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಅರಮನೆಯಲ್ಲಿ ಈಗಾಗಲೇ ಚಂಡಿ ಹೋಮ ಆರಂಭಗೊಂಡಿದ್ದು, ರಾಜವಂಶಸ್ಥರ ಸಮ್ಮುಖದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ಭಕ್ತಿ-ಶ್ರದ್ಧೆಯಿಂದ ನೆರವೇರುತ್ತಿವೆ. ಪೂರ್ಣಕುಂಭ ಸ್ವಾಗತದೊಂದಿಗೆ ಮುತ್ತೈದೆಯರು, ರಾಜ ಪರಿವಾರದವರು ಹಾಗೂ ಪಟ್ಟದ ಆನೆ, ಹಸು, ಕುದುರೆ ಮತ್ತು ಒಂಟೆಗಳೊಂದಿಗೆ ಮಂಗಳವಾದ್ಯದ ಮೇಳದಲ್ಲಿ ಬೆಳ್ಳಿ ಪಲ್ಲಕ್ಕಿಯಲ್ಲಿ ಪಟ್ಟದ ಕತ್ತಿಯ ಭವ್ಯ ಮೆರವಣಿಗೆಯು ಕೋಡಿ ಸೋಮೇಶ್ವರ ದೇಗುಲದವರೆಗೆ ಸಾಗಿತು.

ದೇಗುಲದಲ್ಲಿ ಆಯುಧಗಳಿಗೆ ಎಣ್ಣೆ ಪೂಜೆ ನೆರವೇರಿಸಿದ ಬಳಿಕ ಖಾಸಗಿ ಆಯುಧಗಳನ್ನು ಕಲ್ಯಾಣ ಮಂಟಪಕ್ಕೆ ಮರಳಿ ತರಲಾಗಿದ್ದು, ನಿಗದಿತ ಮುಹೂರ್ತದಲ್ಲಿ ಪೂಜಾ ಕೈಂಕರ್ಯಗಳು ಜರುಗಲಿವೆ. ತದನಂತರ ಅರಮನೆಯ ಸವಾರಿ ತೊಟ್ಟಿಯಲ್ಲಿ ಪಟ್ಟದ ಪ್ರಾಣಿಗಳು, ವಾಹನಗಳು ಹಾಗೂ ರಾಜಮನೆತನದ ಕತ್ತಿ, ಈಟಿ, ಗುರಾಣಿ ಸೇರಿದಂತೆ ಇತರೆ ಸಾಂಪ್ರದಾಯಿಕ ಆಯುಧಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಸಾಂಪ್ರದಾಯಿಕ ಆಚರಣೆಯು ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ಕಂಗೊಳಿಸುತ್ತಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆಂಬುಲೆನ್ಸ್‌ ಕೊರತೆ ನೀಗಿಸಲು ಆರೋಗ್ಯ ಇಲಾಖೆ ಪ್ಲ್ಯಾನ್‌ : 100 ಹೊಸ ವಾಹನಗಳ ಖರೀದಿಗೆ ರಾಜ್ಯ ಸರ್ಕಾರ ಸಿದ್ಧತೆSHOCKING : ಬೆಂಗಳೂರಲ್ಲಿ ರ್‍ಯಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ!BREAKING : ಬೆಂಗಳೂರಿನ ವಿಧಾನಸೌಧಕ್ಕೆ ಬಾಂಬ್ ಇಟ್ಟು ಸ್ಪೋಟಿಸಿದ್ದೇನೆ : AI ವಿಡಿಯೋ ಹರಿಬಿಟ್ಟ ಕಿಡಿಗೇಡಿ | Video Viralಆಯುಧ ಪೂಜೆಗೂ ಮುನ್ನ ಮನೆಯ 4 ಮೂಲೆಗಳಲ್ಲಿ ಈ 1 ವಸ್ತು ಇಡಿ: ಮುಂದಿನ ವರ್ಷವಿಡೀ ಯಶಸ್ಸು, ಸಂಪತ್ತು ನಿಮ್ಮದೇ!ವಿಜಯದಶಮಿಯ ಪೌರಾಣಿಕ ಮಹತ್ವ ಸಂಪೂರ್ಣ ಮಾಹಿತಿBIG NEWS : ಕಬ್ಬಿನ ಬೆಲೆ ಏರಿಕೆ, ರೈತರ ಸಾಲ ಮನ್ನಾಗೆ ಆಗ್ರಹಿಸಿ, ಅ.23ಕ್ಕೆ ಮೈಸೂರು ಬೆಂಗಳೂರು ಹೆದ್ದಾರಿ ಬಂದ್!ಕಾರು ಮಕ್ಕಳಾಟದ ವಸ್ತುವಲ್ಲ : 3 ಜನರ ಸಾವಿಗೆ ಕಾರಣನಾಗಿದ್ದ 14ರ ಬಾಲಕನ ಪ್ರಕರಣ ರದ್ದಿಗೆ ಹೈಕೋರ್ಟ್ ನಕಾರತುಮಕೂರು ದಸರಾದಲ್ಲಿ, ನಟಿ ರಚಿತಾ ರಾಮ್ ಹೆಗಲ ಮೇಲೆ ಕೈ ಹಾಕಿ ಎಳೆದಾಡಿದ ಅಭಿಮಾನಿ : ಡಿಂಪಲ್ ಕ್ವೀನ್ ಗರಂ!BREAKING : ಬೆಂಗಳೂರಿಗೆ ಬರುತ್ತಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ : ಪೈಲಟ್ ಸಮಯ ಪ್ರಜ್ಞೆಯಿಂದ ಉಳಿತು 148 ಪ್ರಯಾಣಿಕರ ಜೀವ!ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ರಾಜ್ಯದ 19 ಜಿಲ್ಲೆಗಳಲ್ಲಿ ನಾಳೆಯಿಂದ 3 ದಿನಗಳ ಕಾಲ ಮದ್ಯ ಮಾರಾಟ ನಿಷೇಧ!