LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮಸೀದಿಯಲ್ಲಿ ಬಾಂಬ್​ ಇದೆ ಎಂದು ಹುಸಿ ಕರೆ - ಆರೋಪಿ ಅರೆಸ್ಟ್

ಬೆಂಗಳೂರು: ಶಿವಾಜಿನಗರದ ಆಜಾಂ ಮಸೀದಿಯಲ್ಲಿ ಬಾಂಬ್​ ಇದೆ ಎಂದು ಹುಸಿ ಕರೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಬಂಧಿತ ಆರೋಪಿಯನ್ನು ಮಹಾರಾಷ್ಟ್ರ ಮೂಲದ ಸೈಯದ್​ ಮಹಮ್ಮದ್ ಅನ್ವರ್​(37) ಎಂದು ಗುರುತಿಸಲಾಗಿದೆ.

ಜುಲೈ 4ರಂದು ಬೆಂಗಳೂರಿಗೆ ಬಂದಿದ್ದ ಸೈಯದ್​ ಮದರಸಾ ಹೆಸರಿನಲ್ಲಿ ಮಸೀದಿಗಳ ಬಳಿ ಚಂದಾ ಕೇಳುತ್ತಿದ್ದನು. ಆಜಾಂ ಮಸೀದಿ ಬಳಿ ಚಂದಾ ಪಡೆದಿದ್ದ ಸೈಯದ್​ ರಾತ್ರಿ ಮಸೀದಿಯಲ್ಲಿ ಮಲಗಲು ಅವಕಾಶ ಕೇಳಿದ್ದಾನೆ. ಆದರೆ ಇದಕ್ಕೆ ಸಿಬ್ಬಂದಿ ಮಸೀದಿಯಲ್ಲಿ ಮಲಗಲು ಅವಕಾಶವಿಲ್ಲ ಎಂದಿದ್ದಾರೆ.

https://bcsuddi.com/%e0%b2%9f%e0%b3%8a%e0%b2%ae%e0%b3%8d%e0%b2%af%e0%b2%be%e0%b2%9f%e0%b3%8b%e0%b2%97%e0%b3%86-%e0%b2%a1%e0%b2%bf%e0%b2%ae%e0%b3%8d%e0%b2%af%e0%b2%be%e0%b2%82%e0%b2%a1%e0%b2%aa%e0%b3%8d%e0%b2%aa%e0%b3%8b/

ಇನ್ನು ಇದರಿಂದ ಬೇಸರಗೊಂಡ ಸೈಯದ್ ಮಸೀದಿಯಲ್ಲಿ ಬಾಂಬ್ ಇಟ್ಟಿದ್ದಾರೆಂದು ಹುಸಿ ಕರೆ ಮಾಡಿದ್ದಾನೆ.

ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದಾಗ ಬಾಂಬ್​ ಇರಲಿಲ್ಲ. ಹುಸಿ ಬಾಂಬ್​ ಕರೆಯೆಂದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
-ರಕ್ಕಸಬೊಮ್ಮಿತಂದೆ / ರಕ್ಕಸ ಬ್ರಹ್ಮಯ್ಯ ಅವರ ವಚನ …!ಯುವಕರು, ಬಡವರು, ಮಹಿಳೆಯರು ಮತ್ತು ರೈತರ ಮೇಲೆ ಕೇಂದ್ರೀಕರಿಸಲು ಬಿಜೆಪಿ ಅಭಿಯಾನ : ಪ್ರಧಾನಿ ಮೋದಿಪ್ರಥಮ ಬಾರಿಗೆ ಹೊರಗುತ್ತಿಗೆಯಲ್ಲಿ ಮೀಸಲಾತಿ ಜಾರಿ : ಸಿದ್ದರಾಮಯ್ಯಮಹಿಳೆಯ ಮೇಲೆ ಕರಡಿಗಳ ದಾಳಿತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ಬೋಂಡಾ ಮಣಿ ನಿಧನನಾಡಿದ್ದು, ಬಿಜೆಪಿ ನೂತನ ರಾಜ್ಯ ಪದಾಧಿಕಾರಿಗಳ ಸಭೆ- ಬಿ.ವೈ.ವಿಜಯೇಂದ್ರಅತಿಯಾಗಿ ತಂಪು ಪಾನೀಯ ಸೇವಿಸುತ್ತೀರಾ..? - ಇನ್ನು ಮುಂದೆ ಇರಲಿ ಎಚ್ಚರ..!ಅತ್ಯಂತ ಕಡಿಮೆ ಬೆಲೆ, ಅತ್ಯಧಿಕ ಮೈಲೇಜ್‌ : ಮಾರುಕಟ್ಟೆಗೆ ಎಂಟ್ರಿ ಕೊಡಲಿಗೆ ಕಿಯಾ ಸೋನೆಟ್ 2024 ಫೇಸ್‌ಲಿಫ್ಟ್ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಚುನಾಯಿತ ಸಂಸ್ಥೆಯನ್ನು ಅಮಾನತುಗೊಳಿಸಿದ ಕ್ರೀಡಾ ಸಚಿವಾಲಯಉಡುಪಿ: ಮಲ್ಪೆಯ ಮೀನುಗಾರರ ಬಲೆಗೆ ಬಿದ್ದ 400 ಕೆ ಜಿ ತೂಕದ ಬೃಹತ್ ಮೀನು