ಮಹರ್ಷಿ ವಾಲ್ಮೀಕಿ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ
ಹೊಸಪೇಟೆ: ಪರಿಶಿಷ್ಟ ವರ್ಗ (ಎಸ್‌ಟಿ) ಸಮುದಾಯದ ಏಳಿಗೆಗಾಗಿ ಶ್ರಮಿಸಿದ ಅರ್ಹರಿಗೆ 2023-24ನೇ ಸಾಲಿನ ರಾಜ್ಯ ಮಟ್ಟದ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಾಶು ಅವರು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವ ಅರ್ಹ ಸಾಧಕರು ಕನಿಷ್ಟ 35ವರ್ಷದೊಳಗೆ ಇರಬೇಕು, ಮರಣೋತ್ತರ ಪ್ರಶಸ್ತಿ ಪ್ರಧಾನ ಇರುವುದಿಲ್ಲ, ಅಪರಾಧ ಹಿನ್ನಲೆ ಇದ್ದವರನ್ನು ಪರಿಗಣಿಸುವುದಿಲ್ಲ, ಆಯ್ಕೆಯಾದ ಸಾಧಕರಿಗೆ 5 ಲಕ್ಷ ರೂ. ನಗದು, 20 ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತದೆ.
ಆಸಕ್ತ ಮತ್ತು ಅರ್ಹರು ತಮ್ಮ ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಹಾಗೂ ಎರಡು ಭಾವಚಿತ್ರ ಜೊತೆ ಅರ್ಜಿ ನಮೂನೆ ಭರ್ತಿ ಮಾಡಿ ಸಮಾಜಿಕ, ಆರ್ಥಿಕ, ಸಾಹಿತ್ಯ ಅಥವಾ ಇತರೆ ಕ್ಷೇತ್ರಗಳ ಸಾಧನೆಯ ಭಾವಚಿತ್ರ ಮತ್ತು ದಾಖಲೆಯನ್ನು ಸೆ.30ರೊಳಗಾಗಿ ಹೊಸಪೇಟೆ ತಾಲ್ಲೂಕಿನ ಸಂಡೂರು ರಸ್ತೆಯಲ್ಲಿರುವ ವಿವೇಕಾನಂದ ನಗರದಲ್ಲಿರುವ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಗೆ ಸಲ್ಲಿಸಬೇಕು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.