E-PAPER
17 Nov 2026, 12:22:49 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

*ಮಹಾಶರಣೆ ಅಕ್ಕ ಮಹಾದೇವಿ ರವರ ಜೀವನವೇ ಶುದ್ಧ ಭಕ್ತಿಗೆ ಉದಾಹರಣೆ :- ಡಾ. ಸಿದ್ಧಣ್ಣ ವಾಲಿಶೆಟ್ಟಿ*

ಬೆಳಗಾವಿ-15, ಏಪ್ರಿಲ್ 12 ಲಿಂಗಾಯತ ಸಂಘಟನೆ ವತಿಯಿಂದ  ಬೆಳಗಾವಿಯ ಮಹಾಂತೇಶ ನಗರದಲ್ಲಿರುವ ವಚನ ಪಿತಾಮಹ ಡಾ. ಪ.ಗು. ಹಳಕಟ್ಟಿ ಭವನದಲ್ಲಿ “ವೈರಾಗ್ಯ ನಿಧಿ ಅಕ್ಕ ಮಹಾದೇವಿ ಜಯಂತಿ” ಆಚರಣೆ ಅಂಗವಾಗಿ ಅನುಭಾವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ ಡಾ. ಸಿದ್ಧಣ್ಣ ವಾಲಿಶೆಟ್ಟಿ ಸಹಾಯಕ ಪ್ರಾಧ್ಯಾಪಕರು ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯ ಅವರು ಮಾತನಾಡಿ, 12ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಹುಟ್ಟಿದ ಮಹಾನ್ ಸ್ತ್ರೀ ಸಂತೆಯಾದ ಅಕ್ಕ ಮಹಾದೇವಿ ಅವರು ಭಕ್ತಿ, ವೈರಾಗ್ಯ ಮತ್ತು ಆತ್ಮಜ್ಞಾನಕ್ಕೆ ಪ್ರತೀಕವಾಗಿದ್ದಾರೆ ಎಂದು ಹೇಳಿದರು.

ಭೌತಿಕ ಸಂಪತ್ತು ಹಾಗೂ ಆಸೆ-ಆಕಾಂಕ್ಷೆಗಳಿಂದ ದೂರವಿದ್ದು ಆತ್ಮಶಾಂತಿಯನ್ನು ಸಾಧಿಸುವುದೇ ಅಕ್ಕನ ಸಂದೇಶವಾಗಿದ್ದು, ಅವರ ಜೀವನವೇ ಶುದ್ಧ ಭಕ್ತಿಗೆ ಉತ್ತಮ ಉದಾಹರಣೆಯಾಗಿದೆ ಎಂದು ವಿವರಿಸಿದರು.

ದೇವರೊಂದಿಗೆ ನೇರ ಸಂಬಂಧ ಬೆಳೆಸಿಕೊಳ್ಳುವುದು ಮತ್ತು ತನ್ನೊಳಗಿನ ಆತ್ಮವನ್ನು ಅರಿಯುವುದೇ ಜೀವನದ ಗುರಿ ಎಂದು ಅವರು ತಿಳಿಸಿದರು. ಸಮಾಜದಲ್ಲಿ ಲಿಂಗಭೇದ ಹಾಗೂ ವರ್ಣಭೇದಗಳನ್ನು ವಿರೋಧಿಸಿದ ಅಕ್ಕ ಮಹಾದೇವಿಯವರು ಸಮಾನತೆಯ ಸಂದೇಶವನ್ನು ಸಾರಿದ ಮಹಾನ್ ಚಿಂತಕಿ ಎಂದು ಹೇಳಿದರು.

ಇಂದಿನ ಜೀವನದಲ್ಲಿಯೂ ಅವರ ತತ್ವಗಳನ್ನು ಅಳವಡಿಸಿಕೊಂಡರೆ ಶಾಂತಿಯುತ ಮತ್ತು ಅರ್ಥಪೂರ್ಣ ಬದುಕನ್ನು ನಡೆಸಲು ಸಾಧ್ಯವೆಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಿಂಗಾಯತ ಸಂಘಟನೆಯ ಅಧ್ಯಕ್ಷರಾದ ಶರಣ ಈರಣ್ಣ ದೇಯನ್ನವರ ಅವರು ಮಾತನಾಡಿ, ಅಕ್ಕ ಮಹಾದೇವಿಯವರ ಭಕ್ತಿ ಕರ್ತವ್ಯವಲ್ಲ, ಅದು ಪ್ರೀತಿ ಮತ್ತು ಬದುಕಾಗಿದೆ ಎಂದು ಹೇಳಿದರು.

ವೈರಾಗ್ಯ ಎಂದರೆ ಓಡಿಹೋಗುವುದು ಅಲ್ಲ, ಅದು ಒಳಗಿನ ಶಕ್ತಿಯ ಅಭಿವ್ಯಕ್ತಿ ಎಂದು ವಿಶ್ಲೇಷಿಸಿದರು.

ಶರಣ ಸುರೇಶ ನರಗುಂದ ಅವರು ಸಾಮೂಹಿಕ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಶ್ರೀ ವಿ. ಕೆ ., ಪಾಟೀಲ ರವರು ವಚನಗಳನ್ನು ವಿಶ್ಲೇಷಣೆ ಮಾಡಿದರು, ಶ್ರೀಎಂ. ವೈ. ಮೆಣಸಿನಕಾಯಿ ಅವರು ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು ಶರಣೆ ಕಲ್ಪನಾ ಗುತ್ತಿಗೋಳಿ ದಾಸೋಹ ಸಲ್ಲಿಸಿದರು ಆನoದ ಕರಕಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಗುರುಸಿದ್ಧಪ್ಟ ರೇವಣ್ಣವರ, ಸದಾಶಿವ ದೇವರಮನಿ, ಶಶಿಭೂಷಣ ಪಾಟೀಲ,ಬಸವರಾಜ ಕರಡಿಮಠ,ಶಂಕರ ಗುಡಸ,ಬಸವರಾಜ ಬಿಜ್ಜರಗಿ, ಜಯಶ್ರೀ ಚವಲಗಿ, ನoದಾ ಬಗಲಿ, ರುದ್ರಮ್ಮ ಅಕ್ಕನವರ, ಶಿವಲೀಲಾ ಗೌಡರ,ಪ್ರಸಾದ ಹಿರೇಮಠ ಸೇರಿದಂತೆ ಅನೇಕ ಭಕ್ತರು ಮತ್ತು ಸಂಘಟನೆಯ ಸದಸ್ಯರು ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.