LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮಹಿಳಾ ವಿದ್ಯಾರ್ಥಿಗಳಿಗೆ ಪತ್ರಿಕಾಲಯಗಳಲ್ಲಿ ತರಬೇತಿಗೆ ಅರ್ಜಿ ಆಹ್ವಾನ

 

ಚಿತ್ರದುರ್ಗ:  ಕರ್ನಾಟಕ ಮಾಧ್ಯಮ ಅಕಾಡೆಮಿಯು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಪದವಿ ಪಡೆದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಪತ್ರಿಕಾಲಯದಲ್ಲಿ ತರಬೇತಿ ಪಡೆಯಲು ಅರ್ಜಿ ಆಹ್ವಾನಿಸಿದೆ.

ಪ್ರಸಕ್ತ ಸಾಲಿನಲ್ಲಿ 5 ಮಂದಿ ಮಹಿಳಾ ವಿದ್ಯಾರ್ಥಿಗಳಿಗೆ ಪ್ರಮುಖ ದಿನಪತ್ರಿಕೆಗಳ ಕಾರ್ಯಾಲಯಗಳಲ್ಲಿ 2 ತಿಂಗಳ ಕಾಲ ತರಬೇತಿ ಪಡೆಯಲು, ಮಾಸಿಕ ತಲಾ 20,000/- ರೂ ಗಳನ್ನು ಶಿಷ್ಯವೇತನ ನೀಡಲಾಗುವುದು.

ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ/ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗಿದೆ.

ಮಹಿಳಾ ವಿದ್ಯಾರ್ಥಿಗಳು ಆಗಸ್ಟ್ 26 ರೊಳಗೆ ತಮ್ಮ ಸ್ವವಿವರ, ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸ, ಆರ್ಥಿಕ ಸ್ಥಿತಿ, ಅಂಕಪಟ್ಟಿಗಳ ಫೋಟೋ ಪ್ರತಿಯನ್ನು ಸ್ಕ್ಯಾನ್ ಮಾಡಿ  [email protected]  ಗೆ ಇಮೇಲ್ ಮೂಲಕ ಕಳುಹಿಸಬಹುದು.

28 ವರ್ಷದೊಳಗಿನ ಮಹಿಳಾ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅಕಾಡೆಮಿಯು ಅರ್ಹತಾ ಪರೀಕ್ಷೆ ನಡೆಸಲಿದೆ. ಈ ಪರೀಕ್ಷೆಯ ದಿನಾಂಕ, ಸ್ಥಳ ಮತ್ತು ಸಮಯವನ್ನು ಸಂದರ್ಶನದ ವೇಳೆ ತಿಳಿಸಲಾಗುವುದು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಕಚೇರಿ ಪ್ರಕಟಣೆ ತಿಳಿಸಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರಿನಲ್ಲಿ ಸುಗಮ ಸಂಚಾರಕ್ಕೆ BDA ಮಾಸ್ಟರ್ ಪ್ಲಾನ್ಇನ್ನು ತಾಲೂಕು ಪಂಚಾಯಿತಿಗಳ ಮೂಲಕ ಗೃಹಲಕ್ಷ್ಮಿ ಹಣ ಪಾವತಿ?ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ NWKRTC ಯಿಂದ ವಿಶೇಷ ಬಸ್ ವ್ಯವಸ್ಥೆ….!ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಯನ್ನ ಹಲವು ಸ್ಪಷ್ಟನೆ ಕೇಳಿ ತಿರಸ್ಕರಿಸಿದ ರಾಜ್ಯಪಾಲರುಕುಂಭಮೇಳದಲ್ಲಿ ಸನಾತನ ಧರ್ಮ ಸ್ವೀಕರಿಸಿದ 200 ಮಂದಿ ವಿದೇಶಿಗರುಕೇಂದ್ರ ಸರ್ಕಾರದಿಂದ ರೈತರ ಖಾತೆಗೆ 10,000 ರೂ. ಜಮೆಪಡಿತರ ಚೀಟಿ ಫಲಾನುಭವಿಗಳಿಗೆ ಬಿಗ್‌ ಶಾಕ್‌..!! ಇನ್ಮುಂದೆ ಇವರಿಗೆ ಉಚಿತ ರೇಷನ್‌ ಸಿಗಲ್ಲ..!10 ಲಕ್ಷ ಲಂಚಕ್ಕೆ ಬೇಡಿಕೆ : ಗ್ರಾಪಂ‌ಅಧ್ಯಕ್ಷೆ ಪತಿ,ಉಪಾಧ್ಯಕ್ಷ ಲೋಕಾಯುಕ್ತ ಬಲೆಗೆಜಮ್ಮು-ಕಾಶ್ಮೀರದ ಗಡಿಯಲ್ಲಿ ಭಾರಿ ಗುಂಡಿನ ಚಕಮಕಿ; ಪಾಕ್‌ನ 7 ಮಂದಿ ನುಸುಳುಕೋರರ ಹತ್ಯೆಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ- ಫೆ.10ರಿಂದ 12ರವರೆಗೆ ಮೂರು ದಿನಗಳ ಕಾಲ ಪವಿತ್ರ ತೀರ್ಥ ಸ್ನಾನ