LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮಹಿಳೆಯರಿಬ್ಬರ ಬೆತ್ತಲೆ ಮೆರವಣಿಗೆ ವಿಡಿಯೊ ಬಿಡುಗಡೆ: ಮಣಿಪುರ ಉದ್ವಿಗ್ನ

ಗುವಾಹಟಿ: ಮಣಿಪುರ ಪರಿಸ್ಥಿತಿ ದಿನದಿನಕ್ಕೆ ಉದ್ವಿಗ್ನಕ್ಕೆ ಸಾಗುತ್ತಿದ್ದು, ಮಾನವೀಯತೆ ಎಲ್ಲೆ ಮೀರಿ ಕ್ರೌರ್ಯ ನಡೆಯುತ್ತಿವೆ. ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಮೇ 4ರಂದು ನಡೆದಿದ್ದ ಹಿಂಸಾಚಾರದ ವೇಳೆ ಕುಕಿ-ಜೋಮಿ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಗಿದೆ. ‘ದೇಶೀಯ ಬುಡಕಟ್ಟು ನಾಯಕರ ವೇದಿಕೆ’ (ಐಟಿಎಲ್‌ಎಫ್) ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯ ಮುನ್ನಾದಿನವೇ (ಬುಧವಾರ) ವಿಡಿಯೋ ಬಿಡುಗಡೆ ಮಾಡಲಾಗಿದೆ. ಇಬ್ಬರು ಮಹಿಳೆಯರನ್ನು ಭತ್ತದ ಗದ್ದೆಗೆ ಕರೆದೊಯ್ಯುವ ದುಷ್ಕರ್ಮಿಗಳ ಗುಂಪು ಮಹಿಳೆಯರ ಗುಪ್ತಾಂಗವನ್ನು ಅಸಭ್ಯವಾಗಿ ಮುಟ್ಟಿ ಹಿಂಸಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಬಲಿಪಶುಗಳ ಮೇಲೆ ಮೊದಲು ಪುರುಷರಿಂದ ಸಾಮೂಹಿಕವಾಗಿ ಅತ್ಯಾಚಾರವೆಸಗಲಾಯಿತು. ನಂತರ ವಿವಸ್ತ್ರಗೊಳಿಸಿ ಸಾರ್ವಜನಿಕವಾಗಿ ಅಡ್ಡಾಡುವಂತೆ ಒತ್ತಾಯಿಸಲಾಯಿತು ಎಂದು ಮಂಗಳವಾರ ತಡವಾಗಿ ದೃಢಪಡಿಸಲಾಗಿದೆ. ಮೇ 4ರಂದು ಈ ವಿದ್ರಾವಕ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರು ಏರ್ ಪೋರ್ಟ್ ಟರ್ಮಿನಲ್ - 2ರಲ್ಲಿ ಹೈಟೆಕ್ ಬಸ್ ನಿಲ್ದಾಣಕ್ಕೆ ಚಾಲನೆಐಫೋನ್ ಹ್ಯಾಕ್ ಆರೋಪವನ್ನು ನಿರಾಕರಿಸಿದ ಸಚಿವ ರಾಜೀವ್ ಚಂದ್ರಶೇಖರ್ಜೆಡಿಯು ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತೀಶ್ ಕುಮಾರ್ ನೇಮಕಪರೀಕ್ಷಾರ್ಥವಾಗಿ ಸಂಚರಿಸುತ್ತಿದ್ದ ರೈಲಿಗೆ ಸಿಲುಕಿ ವಿದ್ಯಾರ್ಥಿನಿಯರು ಮೃತ್ಯುಎಸ್‌ಯುವಿ ರೂಫ್ ನಲ್ಲಿ ಮಕ್ಕಳನ್ನು ಮಲಗಿಸಿ ಕಾರು ಚಾಲನೆ: ಪ್ರಕರಣ ದಾಖಲುನಾಳೆಯಿಂದ ಮಂಗಳೂರು - ಮಡಗಾಂವ್ ವಂದೇ ಭಾರತ್‌ ರೈಲು ಆರಂಭಪಾಕಿಸ್ತಾನದಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ನಿಷೇಧ: ಪ್ರಧಾನಿ ಘೋಷಣೆಐಪಿಎಲ್‌ ಆಟಗಾರ, ಐಪಿಎಸ್‌ ಅಧಿಕಾರಿ ಎಂಬ ಸೋಗಿನಲ್ಲಿ ವಂಚನೆ : ಆರೋಪಿ ಬಂಧನಅನ್ಯಾಯಕ್ಕೆ ಹೆಸರಾದವರು ನ್ಯಾಯ ಕೊಡಿಸುವಂತೆ ನಟಿಸುತ್ತಿದ್ದಾರೆ: ಸ್ಮೃತಿ ಇರಾನಿ ಲೇವಡಿಗೂಢಾಚಾರ ಆರೋಪ: ಮಾಜಿ ಭಾರತೀಯ ನೌಕಾಪಡೆ ಅಧಿಕಾರಿಗಳಿಗೆ ಗಲ್ಲುಶಿಕ್ಷೆ ರದ್ದುಗೊಳಿಸಿದ ಕತಾರ್ ಕೋರ್ಟ್