LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮಹಿಳೆಯ ಕಣ್ಣೀರಿಗೆ ಕಾರಣವಾದ ಸಂಜು ಸ್ಯಾಮ್ಸನ್ ಸಿಕ್ಸರ್

ಜೋಹಾನ್ಸ್​ಬರ್ಗ್ : ಸೌತ್ ಆಫ್ರಿಕಾ ಹಾಗೂ ಟೀಂ ಇಂಡಿಯಾ ನಡುವೆ ಜೋಹಾನ್ಸ್​ಬರ್ಗ್​ನ ವಾಂಡರರ್ಸ್ ಮೈದಾನದಲ್ಲಿ ನಡೆದ 4ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಸೆಂಚುರಿ ಸಿಡಿಸಿದ್ದು, ಈ ಪೈಕಿ 9 ಸಿಕ್ಸ್ ಹಾಗೂ 6 ಫೋರ್ ಬಾರಿಸಿದ್ದಾರೆ. ಇದರಲ್ಲಿನ ಒಂದು ಸಿಕ್ಸರ್ ನಿಂದಾಗಿ ಮಹಿಳೆಯೊಬ್ಬರು ಕಣ್ಣೀರು ಹಾಕುವಂತಾಗಿದೆ.

ಈ ಪಂದ್ಯದಲ್ಲಿ ಸ್ಯಾಮ್ಸನ್ ಅವರು 109 ರನ್ ಬಾರಿಸಿದ್ದರು. ಟೀಮ್ ಇನಿಂಗ್ಸ್​ನ 10ನೇ ಓವರ್ ಅನ್ನು ಟ್ರಿಸ್ಟನ್ ಸ್ಟಬ್ಸ್ ಎಸೆದಿದ್ದರು. ಈ ಓವರ್‌ನಲ್ಲಿ ಸ್ಯಾಮ್ಸನ್ ಎರಡು ಸಿಕ್ಸ್ ಸಿಡಿಸಿದ್ದರು. ಅದರಲ್ಲಿ ಒಂದು ಸಿಕ್ಸ್ ಕ್ರೀಡಾಂಗಣದ ರೇಲಿಂಗ್‌ಗೆ ತಗುಲಿ ಪುಟಿಯಿತು. ಪರಿಣಾಮ ಚೆಂಡು ಮಹಿಳೆಯೊಬ್ಬರ ಕೆನ್ನೆಗೆ ಬಡಿದಿದೆ.

ತಾವು ಸಿಡಿಸಿದ ಸಿಕ್ಸರ್ ಮಹಿಳೆಯೊಬ್ಬರ ಮುಖಕ್ಕೆ ತಾಗಿದೆ ಎಂದು ಗೊತ್ತಾಗುತ್ತಿದ್ದಂತೆ ಸಂಜು ಸ್ಯಾಮ್ಸನ್ ಮೈದಾನದಿಂದಲೇ ಕೈ ಎತ್ತಿ ಕ್ಷಮೆ ಯಾಚಿಸಿದ್ದಾರೆ. ಇನ್ನು ಮಹಿಳೆಯ ಕಣ್ಣೀರಿಗೆ ಕಾರಣವಾದ ಸಂಜು ಸ್ಯಾಮ್ಸನ್ ಅವರ ಈ ಸಿಕ್ಸರ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಿಯಾಂಕ್ ಖರ್ಗೆನಿಂತಿದ್ದ ಲಾರಿಗೆ ವ್ಯಾನ್‌ ಡಿಕ್ಕಿ : 7 ಮಕ್ಕಳ ಸಹಿತ 10 ಮಂದಿ ಸಾವುಉಡುಪಿ: ಸ್ನೇಹಿತರೇ ರಾತ್ರೋರಾತ್ರಿ ಮನೆಗೆ ನುಗ್ಗಿ ವ್ಯಕ್ತಿಯ ಬರ್ಬರ ಹತ್ಯೆಚಾರ್ಮಾಡಿ ಘಾಟ್‌ನಲ್ಲಿ ಅಪಘಾತ: ಪ್ರಪಾತಕ್ಕೆ ಬಿದ್ದು ಯುವಕಧರ್ಮಸ್ಥಳದ ವಿರುದ್ಧ ನಿರಂತರ ಅಪಪ್ರಚಾರ: ಆ.17ರಂದು ಬಿಜೆಪಿಯಿಂದ ಧರ್ಮಸ್ಥಳ ಚಲೋನಿಲ್ಲಿಸಿದ್ದ ಶಾಲಾ ಬಸ್ಸಿನ ಒಳಗೆ ಬೆಂಕಿ ಅವಘಡ : ವ್ಯಕ್ತಿ ಸಜೀವ ದಹನಆ.15ರಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ಲಾಸ್ಟಿಕ್ ನಿಷೇಧ!!ಆ.17ರಂದು ಬಿಜೆಪಿಯಿಂದ ಧರ್ಮಸ್ಥಳ ಚಲೋ..!1990ರ ಕಾಶ್ಮೀರಿ ಪಂಡಿತ್ ನರ್ಸ್ ಸರಳಾ ಹತ್ಯೆ ಕೇಸ್; ಶ್ರೀನಗರದ 8 ಸ್ಥಳಗಳ ಮೇಲೆ ಎಸ್‌ಐಎ ದಾಳಿಮೂರನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಆಶ್ನಾ ಚೌಧರಿ