LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮಾನವ ಕಳ್ಳಸಾಗಣೆ ಶಂಕೆ- 303 ಮಂದಿ ಭಾರತೀಯರಿದ್ದ ವಿಮಾನ ವಶಕ್ಕೆ ಪಡೆದ ಫ್ರಾನ್ಸ್

ಫ್ರಾನ್ಸ್:ಕೇಂದ್ರ ಅಮೆರಿಕದ ನಿಕರಾಗುವಾಗೆ ತೆರಳುತ್ತಿದ್ದ 303 ಮಂದಿ ಭಾರತೀಯರಿದ್ದ ವಿಮಾನವೊಂದನ್ನು ಫ್ರಾನ್ಸ್ ನ ಅಧಿಕಾರಿಗಳು ಮಾನವ ಕಳ್ಳಸಾಗಣೆ ಶಂಕೆಯ ಮೇಲೆ ವ್ಯಾಟ್ರಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿಸಿ ವಶಕ್ಕೆ ಪಡೆದುಕೊಂಡಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದೆ.ಪ್ಯಾರಿಸ್ ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿಯ ಪ್ರಕಾರ 303 ಭಾರತೀಯ ಪ್ರಯಾಣಿಕರನ್ನು ಹೊತ್ತ ವಿಮಾನವು ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಟೇಕಾಫ್ ಆಗಿತ್ತು.
ರೊಮೇನಿಯನ್ ಕಂಪನಿ ಲೆಜೆಂಡ್ ಏರ್ಲೈನ್ಸ್ನ A340 ವಿಮಾನವು ಇಂಧನ ತುಂಬಲು ಲ್ಯಾಂಡ್ ಆಗಿತ್ತು.
ಲ್ಯಾಂಡಿಂಗ್ ನಂತರ ಮಾನವ ಕಳ್ಳಸಾಗಣೆ ಅನುಮಾನದ ಮೇಲೆ ತನಿಖೆಗಾಗಿ ವಿಮಾನವನ್ನು ವ್ಯಾಟ್ರಿ ವಿಮಾನ ನಿಲ್ದಾಣದಲ್ಲೇ ಉಳಿಸಿಕೊಳ್ಳಲಾಗಿದೆ ಎಂದು ಅದು ತಿಳಿಸಿದರು. ಫ್ರಾನ್ಸ್ ನ ಸಂಘಟಿತ ಅಪರಾಧಗಳ ತಡೆ ಘಟಕವು ಈ ಕುರಿತು ತನಿಖೆಯನ್ನು ಕೈಗೆತ್ತಿಕೊಂಡಿದೆ.
ವಿಮಾನದಲ್ಲಿರುವವರು ಭಾರತೀಯ ಮೂಲದವರಾಗಿದ್ದು, ಕೇಂದ್ರ ಅಮೆರಿಕಕ್ಕೆ ತೆರಳಿ ಅಲ್ಲಿಂದ ಯುನೈಟೆಡ್ ಸ್ಟೇಟ್ಸ್ ಅಥವಾ ಕೆನಡಾಗೆ ಅಕ್ರಮವಾಗಿ ನುಸುಳಲು ತೆರಳುತ್ತಿರುವ ಶಂಕೆ ವ್ಯಕ್ತವಾಗಿದೆ ಎಂದು ‘ಎಎಫ್ಪಿ’ ಸುದ್ದಿಸಂಸ್ಥೆ ಹೇಳಿದೆ.
ಫ್ರಾನ್ಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಕೂಡ ಈ ಕುರಿತು ತನಿಖೆಯನ್ನು ಪ್ರಾರಂಭಿಸಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭೂ ಹಗರಣ ಪ್ರಕರಣ: ಸೊರೇನ್ ಗೆ ಮಧ್ಯಂತರ ಜಾಮೀನು ನೀಡಲು ಕೋರ್ಟ್ ನಿರಾಕರಣೆ3,464 ಕೋಟಿ ಬರ ಪರಿಹಾರ - ಬಾಕಿ ಪರಿಹಾರಕ್ಕಾಗಿ ನಾಳೆ ವಿಧಾನಸೌಧದ ಮುಂದೆ ಹೋರಾಟ - ಸಿಎಂ ಸಿದ್ದರಾಮಯ್ಯ ಕರೆಬರ ಪರಿಹಾರ ಬಿಡುಗಡೆಗೆ ಧನ್ಯವಾದ ಹೇಳಿದ ಬಿಜೆಪಿಯನ್ನ ತರಾಟೆಗೆ ತೆಗೆದುಕೊಂಡ ನೆಟ್ಟಿಗರುಬರಗಾಲ ಪರಿಹಾರ ನೀಡಿದ ಮೋದಿ ಸರ್ಕಾರ, ಕಾಂಗ್ರೆಸ್ ಸರ್ಕಾರ ತನ್ನ ಪಾಲಿನ ಡಬಲ್ ಪರಿಹಾರ ನೀಡಲಿ: ಆರ್.ಅಶೋಕ ಆಗ್ರಹಹೆಲಿಕಾಪ್ಟರ್‌ನಲ್ಲಿ ಹತ್ತಿ ಕೂರುವಾಗ ಜಾರಿ ಬಿದ್ದ ಮಮತಾ ಬ್ಯಾನರ್ಜಿಆ್ಯಂಬುಲೆನ್ಸ್‌ ಚಾಲಕನ ಎಡವಟ್ಟು ಸರಣಿ ಅಪಘಾತಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿದೆ 168 ಹುದ್ದೆಗಳು: ಐಟಿಐ, ಡಿಪ್ಲೋಮಾ ಪಾಸಾದವರು ಅಪ್ಲೈ ಮಾಡಿರಸ್ತೆಯ ಮಧ್ಯದಲ್ಲಿ ಕುರ್ಚಿಯ ಮೇಲೆ ಕುಳಿತು ರೀಲ್ ಮಾಡಿ ಪೊಲೀಸರ ಅತಿಥಿಯಾದ ವ್ಯಕ್ತಿ.!ಹಸ್ತಾಂತರಕ್ಕೆ ಸಿದ್ದತೆ: ಬ್ರಿಟನ್ ನಿಂದ ಫ್ರಾನ್ಸ್ ಗೆ ಶಿಫ್ಟ್ ಆಗಲು ಮಲ್ಯ ನಿರ್ಧಾರ?ಇವಿಎಂ-ವಿವಿಪ್ಯಾಟ್ ಪ್ರಕರಣದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌