LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮಾನವ ಕಳ್ಳಸಾಗಾಣಿಕೆಯಲ್ಲಿ ಬಂಧಿಯಾಗಿದ್ದ ಶಂಕೆ- ಮುಂಬೈ ತಲುಪಿದ ವಿಮಾನ

ಮುಂಬೈ: ಮಾನವ ಕಳ್ಳಸಾಗಾಣಿಕೆಯ ಶಂಕೆಯಿಂದ ಪ್ಯಾರಿಸ್ ನಲ್ಲಿ ತಡೆಹಿಡಿಯಲ್ಪಟ್ಟಿದ್ದ ರೊಮೇನಿಯನ್ ವಿಮಾನವು ಮುಂಬೈ ವಿಮಾನ ನಿಲ್ದಾಣಕ್ಕೆ ಮರಳಿದೆ. ಈ ವಿಮಾನವು ಫ್ರೆಂಚ್ ಅಧಿಕಾರಿಗಳು ಅನುಮತಿ ನೀಡಿದ ಬಳಿಕ ತನ್ನ ಪ್ರಯಾಣವನ್ನು ಪುನರಾರಂಭಿಸಿದೆ.

ದುಬೈನಿಂದ 303 ಮಂದಿ ಪ್ರಯಾಣಿಕರೊಂದಿಗೆ ಹೊರಟ ವಿಮಾನವನ್ನು ಮಾನವ ಕಳ್ಳಸಾಗಾಣಿಕೆಯ ಶಂಕೆಯಿಂದ ಕಳೆದ ಗುರುವಾರ ಪ್ಯಾರೀಸ್ ನ 150 ಕಿ.ಮೀ. ದೂರದ ವಟ್ರಿ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿತ್ತು. ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರ 303 ಮಂದಿ ಪೈಕಿ 276 ಮಂದಿ ಪ್ರಯಾಣಿಕರು ಭಾರತೀಯರು ಇದ್ದರು ಎನ್ನಲಾಗಿದೆ.

ಇನ್ನು ಈ ಪ್ರಯಾಣಿಕರ ಪೈಕಿ 25 ಮಂದಿ ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಿ ಅಲ್ಲೇ ಉಳಿದುಕೊಂಡಿದ್ದಾರೆ. ಡಿ. 25 ರ ಬೆಳಗ್ಗೆಯೇ ವಿಮಾನ ಟೇಕ್ ಆಫ್ ಆಗುವ ನಿರೀಕ್ಷೆಯಿತ್ತು, ಆದರೆ ಕೆಲವು ಪ್ರಯಾಣಿಕರು ಭಾರತಕ್ಕೆ ಮರಳಲು ಬಯಸದ ಕಾರಣ ಡಿ. 25 ರ ಮಧ್ಯಾಹ್ನ 2:30 ರ ನಂತರ ಹೊರಟು ಇಂದು ಬೆಳಗ್ಗೆ 4 ಗಂಟೆಗೆ ಮುಂಬೈಗೆ ಮರಳಿದೆ ಎಂದು ತಿಳಿದುಬಂದಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ದೇವೇಗೌಡರ ಕುಟುಂಬ ಸದಸ್ಯರು ಹಾಸನವಷ್ಟೇ ಅಲ್ಲ ಕರ್ನಾಟಕದ ಹೆಸರು ಕೆಡಿಸಿದ್ದಾರೆ'- ವೀರಪ್ಪ ಮೊಯ್ಲಿಲೈಂಗಿಕ ದೌರ್ಜನ್ಯ ಕೇಸ್‌: ಪ್ರಜ್ವಲ್‌ ವಿರುದ್ಧ ಮತ್ತೊಂದು ದೂರು ದಾಖಲುಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೆಳಗಿಳಿಯಲಿ, ಪ್ರಜ್ವಲ್‌ನನ್ನ 24 ಗಂಟೆಗಳಲ್ಲೇ ಬಂಧಿಸುತ್ತೇವೆ: ಅಶೋಕ್ ಸವಾಲುಅಮೆರಿಕ ವಿ.ವಿಯಲ್ಲಿ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ- ಹಲವು ವಿದ್ಯಾರ್ಥಿಗಳು ಅರೆಸ್ಟ್‌ತಮಿಳಿನ ಖ್ಯಾತ ಗಾಯಕಿ ಉಮಾ ರಮಣನ್ ನಿಧನಸಂಸದ ಪ್ರಜ್ವಲ್ ರೇವಣ್ಣಗೆ ಎಸ್‍ಐಟಿ ಲುಕೌಟ್ ನೋಟಿಸ್ ಜಾರಿಶಾಲಾ-ಕಾಲೇಜು ದಿನಗಳಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಹೆಗ್ಗಡೆಯವರು ಬಳಸುತ್ತಿದ್ದ ಐಷಾರಾಮಿ ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು? ಅದೀಗ ಎಲ್ಲಿದೆ ಗೊತ್ತಾ?ಅಗತ್ಯ ಆಚರಣೆಗಳಿಲ್ಲದ, ವಿಧಿಬದ್ಧವಲ್ಲದ ಹಿಂದೂ ವಿವಾಹಗಳು ಅಸಿಂಧು: ಸುಪ್ರೀಂ ಕೋರ್ಟ್'ಪ್ರಜ್ವಲ್ ರೇವಣ್ಣ ಕೇಳಿದಂತೆ ಸಮಯ ಕೊಡಲು ಆಗಲ್ಲ'- ಪರಮೇಶ್ವರ್‌ಬೀಟ್ರೂಟ್ ಒಳ್ಳೆಯದೇ.. ಆದ್ರೆ ಈ ಆರೋಗ್ಯ ಸಮಸ್ಯೆಯಿರುವವರು ತುಸು ಎಚ್ಚರ ವಹಿಸಿ..!