ಮಾಯಕೊಂಡ ದಲ್ಲಿ ಬ್ರಹ್ಮಕುಮಾರಿ ಸಂಸ್ಥೆಯ ಹೊಸ ಕಟ್ಟಡದ ಶಂಕು ಸ್ಥಾಪನೆ
ಬ್ರಹ್ಮಾ ಕುಮಾರಿ ದಾವಣಗೆರೆ ಸಂಚಾಲಕಿ ಲೀಲಾ ಅವರು ಭೂಮಿ ಪೂಜಿ ಮಾಡಿ ಮಾತನಾಡುತ್ತ ಈ ಸಂಸ್ಥೆ ಜಗತ್ತಿನಲ್ಲಿ ಅತಿಶ್ರೇಷ್ಠ ಮಹಿಳೆಯರಿಂದ ನಡೆಸುವ ಏಕಮೇವ ಆಧ್ಯಾತ್ಮಿಕ ಸಂಸ್ಥೆ ಆಗಿದ್ದು, 85 ದೇಶಗಳಲ್ಲಿ 8500 ಶಾಖೆ ಹೊಂದಿದೆ. ಸರ್ಕಾರ ಹೇಗೆ ಪ್ರತಿ ಒಂದು ಹಳ್ಳಿ ಹಳ್ಳಿಯಲ್ಲಿ ಶಾಲೆ ಆರೋಗ್ಯ ಕೇಂದ್ರ ಇರಬೇಕು ಎಂದು ಪ್ರಯತ್ನ ಮಾಡುತ್ತಿದೆ ಹಾಗೆಯೇ ನಮ್ಮ ಸಂಸ್ಥೆಯು ಪ್ರತಿಯೊಂದು ಹಳ್ಳಿಯಲ್ಲಿ ಸೇವೆ ಮಾಡಬೇಕು ಎಂದು ಗುರಿ ಇಟ್ಕೊಂಡಿದೆ. ಮಾಯಕೊಂಡ ಸುತ್ತಮುತ್ತಲಿನ ಹಳ್ಳಿಗಳಿಗೆ ಹತ್ತಿರವಿರುವ ಯೋಗ್ಯ ಸ್ಥಾನವಾಗಿದೆ. ಅದಕ್ಕಾಗಿ ತಾವೆಲ್ಲರೂ ತನು ಮನ ಧನದಿಂದ ಸಹಾಯ ಮಾಡಬೇಕೆಂದು ಕರೆ ನೀಡಿದರು. ಶಾಸಕರಾದ ಕೆ ಎಸ್ ವಸಂತಪ್ಪನವರು ಭೂಮಿ ಪೂಜೆ ನೆರವೇರಿಸಿ ಬ್ರಹ್ಮಕುಮಾರಿ ಸಂಸ್ಥೆ ನನಗೆ ಬಹಳ ವರ್ಷದಿಂದ ಪರಿಚಯಿದೆ .ಇವರು ಮನುಕುಲಕ್ಕೆ ಮಾಡುವ ಸೇವೆ ಅತಿ ಶ್ರೇಷ್ಠವಾಗಿದೆ. ನನ್ನ ಕ್ಷೇತ್ರದಲ್ಲಿ ಅನೇಕ ಸೇವಾ ಕೇಂದ್ರಗಳಿಗೆ ನಾನು ಧನ ಸಹಾಯ ಮಾಡಿದ್ದೇನೆ.5 ಲಕ್ಷ ಧನ ಸಹಾಯ ಮಾಡುತ್ತೇನೆ ಎಂದು ಘೋಷಣೆ ಮಾಡಿದರು
ಮುಖ್ಯ ಅತಿಥಿಗಳಾಗಿ ಬಿ.ಸಿ. ಸಾಕಮ್ಮ ಅಧ್ಯಕ್ಷರು ಗ್ರಾಮ ಪಂಚಾಯತಿ, ಶ್ರೀಮತಿ ಶಿವಮ್ಮ ಮಲ್ಲೇಶಪ್ಪ ಉಪಾಧ್ಯಕ್ಷರು ಗ್ರಾಮ ಪಂಚಾಯತಿ, ಮಾಯಕೊಂಡ, ಶ್ರೀ ಎಸ್. ಟಿ. ರುದ್ರೇಶ, ಕೃಷಿ ಸಮಾಜ ಸದಸ್ಯರು ಮಾಯಕೊಂಡ, ಮಾಲತೇಶ, ಎಂ.,ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ಜಿ.ಎಂ. ಮಂಜುನಾಥ್, ಕನ್ನಡ ಯುವ ಶಕ್ತಿಕೇಂದ್ರದ ಅಧ್ಯಕ್ಷರು, ಮಹಾದೇವಯ್ಯ ವರ್ತಕರು, ಮಾಯಕೊಂಡ. ಇ.ಎಂ. ಮಂಜುನಾಥ, ಉಪಸಂಪಾದಕರು, ಜನತಾವಾಣಿ, ದಾವಣಗೆರೆ ಈಶ್ವರೀಯ ಜೀವನದ ಅನುಭವ ಹಂಚಿಕೊಂಡರು.ಅವರು, ಬಿ ಪಂಚಣ್ಣ ,ಮಾಲೀಕರು ಚೆನ್ನಬಸವೇಶ್ವರ ರೈಸ್ ಮಿಲ್, ಎಚ್.ಎಸ್. ರುದ್ರಯ್ಯ ವರ್ತಕರು, ಮಲೆಬೆನ್ನೂರು. ನಾಗೇಂದ್ರ ಪಿ.ಸೆ. ಸಿವಿಲ್ ಇಂಜಿನಿಯರ್, ದಾವಣಗೆರೆ.
ಹಾಗೂ ಮಾಯಕೊಂಡ ಗ್ರಾಮದ ಪಂಚಾಯಿತಿ ಸದಸ್ಯರಾದ ಲಕ್ಷ್ಮಪ್ಪ , ಮಲ್ಲಿಕಾರ್ಜುನಪ್ಪ, ಎನ್ ಮಂಜುನಾಥ್ ಎಸ್.ಆರ್. ಬಸವರಾಜಪ್ಪ,ನಾಗಪ್ಪ, ಪ್ಪ ,ಜಿ .ಆರ್. ಹನುಮಂತಪ್ಪ ,ಯಲ್ಲಪ್ಪ,
ಶ್ರೀಮತಿ ಸುನಿತಾ ,
ಎಚ್. ಡಿ .ಮೋಟಮ್ಮ, ಜಿ.ಎಸ್. ಪುಷ್ಪ ,ನಾಗಮ್ಮ, ಎಚ್. ಆರ್. ಲತಾ, ಪಿ ಸಿ ಗೌರಮ್ಮ ಮುಂತಾದವರು ಉಪಸ್ಥಿತ ಇದ್ದರು.
:
ವಿಶ್ವಾಸ ಸೋಹೋನಿ
ಬ್ರಹ್ಮಾ ಕುಮಾರಿ ಮೀಡಿಯಾ ವಿಂಗ್ಸ್
9483937106.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.