LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ಮುಂದಿನ ದಿನಗಳಲ್ಲಿ ದೇಶದ ಬೆಳವಣಿಗೆ ಉಸಿರುಗಟ್ಟಲಿದೆ'- ಜೈರಾಮ್ ರಮೇಶ್

ನವದೆಹಲಿ : ದೇಶದ ಆರ್ಥಿಕತೆಯು ಹಲವು ವರ್ಷಗಳಿಂದ ಅತ್ಯಂತ ಅನಿಶ್ಚಿತ ಹಾಗೂ ಜಟಿಲ ಸ್ಥಿತಿಯಲ್ಲಿದೆ. ಬದಲಾಗದ ವೇತನ, ಹಣದುಬ್ಬರ ಮತ್ತು ಅಸಮಾನತೆಯು ಬಳಕೆಯ ಸಾಮರ್ಥ್ಯವನ್ನು ಕುಗ್ಗಿಸುತ್ತಿದೆ ಎಂದು ಕಾಂಗ್ರೆಸ್ ಹೇಳಿತ್ತು.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಈಗ ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಮುಂದಿನ ದಿನಗಳಲ್ಲಿ ದೇಶದ ಬೆಳವಣಿಗೆ ಉಸಿರುಗಟ್ಟಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಳೆದ ಮೂರು ದಶಕದ ದೇಶದ ಬೆಳವಣಿಗೆ ಹಾದಿಯಲ್ಲಿ, ಬಳಕೆಯ ಸಾಮರ್ಥ್ಯ ವೃದ್ಧಿಯು ಮುಖ್ಯ ವಿಚಾರವಾಗಿದೆ. ಅದು ಕೋಟ್ಯಂತರ ಕುಟುಂಬಗಳನ್ನು ಬಡತನದಿಂದ ಹೊರತಂದು ಮಧ್ಯಮವರ್ಗಕ್ಕೆ ನಿಲ್ಲಿಸಿದೆ. ಅಗತ್ಯ ಸಾಮಗ್ರಿಗಳನ್ನು ಖರೀದಿಸುವ ಸಾಮರ್ಥ್ಯ ಒದಗಿಸಿದೆ. ಅದು ಆರ್ಥಿಕತೆ ಅಭಿವೃದ್ಧಿ ಹೊಂದುತ್ತಿರುವುದರ ಸಂಕೇತವಾಗಿದ್ದು, ಅದರ ಪ್ರಯೋಜನವು ಎಲ್ಲರಿಗೂ ಹಂಚಿಕೆಯಾಗಲಿದೆ ಎಂದು ಪೋಸ್ಟ್ ಮಾಡಿದ್ದಾರೆ.

ಕಳೆದ 10 ವರ್ಷಗಳಲ್ಲಿ ದೇಶದ ಬಳಕೆಯ ಸಾಮರ್ಥ್ಯವು ಹಿಮ್ಮುಖವಾಗಿದೆ. ದೇಶದ ಆರ್ಥಿಕತೆಗೆ ದೊಡ್ಡ ಹೊಡೆತವಾಗಿ ಬದಲಾಗಿದೆ. ವೇತನ ನಿಶ್ಚಲತೆ, ಅತಿಯಾದ ಹಣದುಬ್ಬರ ಮತ್ತು ಅಸಮಾನತೆಯೇ ಇದಕ್ಕೆ ಕಾರಣ. ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ 'ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆ (ಎಎಸ್‌ಐ) 2022-2023' ವರದಿ ಸೇರಿದಂತೆ ಹಲವು ಪೂರಕ ಅಂಕಿ-ಅಂಶಗಳನ್ನು ಹಂಚಿಕೊಂಡಿರುವ ಅವರು, ಈಗಿನ ಕೊಳ್ಳುವ ಸಾಮರ್ಥ್ಯವು 10 ವರ್ಷಗಳ ಹಿಂದಿನ ಮಟ್ಟಕ್ಕಿಂತಲೂ ಕುಸಿದಿರುವುದು ಸ್ಪಷ್ಟವಾಗಿದೆ ಎಂದು ಬರೆದುಕೊಂಡಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
10 ತಿಂಗಳ ಮಗುವಿನ ಪ್ರಾಣ ಕಸಿದ ತಂದೆ ಎಸೆದ ತುಂಡು ಬೀಡಿ!!ಕ್ಯಾನ್ಸರ್’ಗೆ ಇನ್ನು ಕಿಮೋ ಥೆರಪಿ ಬೇಕಿಲ್ಲ..!! ಮಹತ್ವದ ಆವಿಷ್ಕಾರ ಹುಟ್ಟುಹಾಕಿದ ಸಂಶೋಧಕರ ತಂಡಇಸ್ರೇಲ್‌-ಇರಾನ್‌ ರಣರಂಗಕ್ಕೆ ಅಮೆರಿಕ ನೇರ ಎಂಟ್ರಿ?'ವಿಚ್ಛೇದನದ ಭಯಕ್ಕೆ ವಿವಾಹ ಆಗುತ್ತಿಲ್ಲ'- ನಟ ಸಲ್ಮಾನ್‌ ಖಾನ್‌ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರತಿ ತಿಂಗಳ ಒಂದು ಶನಿವಾರ ‘ಸಂಭ್ರಮ ಶನಿವಾರ’ – ಬ್ಯಾಗ್ ರಹಿತ ದಿನ; ಶಿಕ್ಷಣ ಇಲಾಖೆ ಮಹತ್ವದ ಆದೇಶಲೋಕಾಯುಕ್ತ ಹೆಸರು ಹೇಳಿ ಕೋಟಿ..ಕೋಟಿ ರೂಪಾಯಿ ಲೂಟಿ..!!ಉತ್ತಮ ಸಂಬಳದ ವೃತ್ತಿ ತೊರೆದು ಐಎಎಸ್ ಅಧಿಕಾರಿಯಾದ ಪ್ರಿಯಾ ರಾಣಿ ಯಶೋಗಾಥೆಯು.ಪಿ.ಎಸ್.ಸಿ ಪರೀಕ್ಷಾ ತರಬೇತಿಗೆ ಅರ್ಜಿ ಆಹ್ವಾನಜೂನ್ 19 ರಂದು ನೇರ ನೇಮಕಾತಿ ಸಂದರ್ಶನಇಂದಿನಿಂದ ಜೂನ್ 17 ರಿಂದ 30 ರವರೆಗೆ ಈ ಹಳ್ಳಿಗಳಲ್ಲಿಈ ಸಮಯದಲ್ಲಿ  ಕರೆಂಟ್ ಇರಲ್ಲ.!