LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮುಂಬೈ: ಭೀಕರ ದುರಂತ, ಬಸ್ ಗೆ ಬೆಂಕಿ ತಗುಲಿ 25 ಪ್ರಯಾಣಿಕರ ಸಜೀವ ದಹನ

ಬುಲ್ಧಾನ(ಮಹಾರಾಷ್ಟ್ರ): ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 25 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಚಾಲಕ, ನಿರ್ವಾಹಕ ಸೇರಿ ಎಂಟು‌ ಮಂದಿ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.

ಮಹಾರಾಷ್ಟ್ರದ ಬುಲ್ಧಾನದಲ್ಲಿ ಶನಿವಾರ ಬೆಳಗಿನ ಜಾವ ಎರಡು ಗಂಟೆ ಹೊತ್ತಿನಲ್ಲಿ ಈ ಭೀಕರ ಬಸ್ ಅಪಘಾತ ಸಂಭವಿಸಿದೆ. ಬಸ್ಸಿನಲ್ಲಿ ಒಟ್ಟು 33 ಪ್ರಯಾಣಿಕರಿದ್ದರು. ಬುಲ್ಧಾನ ಜಿಲ್ಲೆಯ ಸಿಂಧಖೇದರಾಜ ಬಳಿಯ ಪಿಂಪಲಖುಟಾ ಗ್ರಾಮದ ಬಳಿ ಸಮೃದ್ಧಿ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಬಸ್ ನಾಗ್ಪುರದಿಂದ ಪುಣೆಗೆ ಹೋಗುತ್ತಿತ್ತು. ಬಸ್‌ನಲ್ಲಿ ನಾಗ್ಪುರ, ವಾರ್ಧಾ ಮತ್ತು ಯವತ್ಮಾಲ್‌ನ ಪ್ರಯಾಣಿಕರಿದ್ದರು. ಈ ಬಸ್ ವಿದರ್ಭ ಟ್ರಾವೆಲ್ಸ್ಗೆ ಸೇರಿದ್ದಾಗಿದೆ.

https://bcsuddi.com/%e0%b2%95%e0%b3%81%e0%b2%b0%e0%b2%bf-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%ae%e0%b3%87%e0%b2%95%e0%b3%86-%e0%b2%b8%e0%b2%be%e0%b2%95%e0%b2%be%e0%b2%a3%e0%b2%bf%e0%b2%95%e0%b3%86/

ಸಮೃದ್ಧಿ ಹೆದ್ದಾರಿಯಲ್ಲಿ ಬಸ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಂತರ ಬೆಂಕಿ ಹೊತ್ತಿಕೊಂಡಿದೆ. ಬಸ್ಸಿನಿಂದ 25 ಮೃತದೇಹಗಳನ್ನು ಹೊರತೆಗೆದು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತರ ಗುರುತು ಸಿಗದಷ್ಟು‌ಮಟ್ಟಿಗೆ ಸುಟ್ಟು ಕರಕಲಾಗಿವೆ. ಗಾಯಾಳುಗಳನ್ನು ಬುಲ್ಧಾನ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಬುಲ್ಧಾನ ಪೊಲೀಸ್ ಉಪ ಎಸ್ಪಿ ಬಾಬುರಾವ್ ಮಹಾಮುನಿ ತಿಳಿಸಿದ್ದಾರೆ. ಅಪಘಾತದ ನಂತರ ಬಸ್ಸಿನಿಂದ ಹೆಚ್ಚಿನ ಪ್ರಮಾಣದ ಡೀಸೆಲ್ ರಸ್ತೆಯ ಮೇಲೆ ಸೋರಿಕೆಯಾಗಿದೆ. ಈ ವೇಳೆ ಬಸ್‌ನ ಇಂಜಿನ್ನಲ್ಲಿ ಸ್ಪಾರ್ಕ್ ಆಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೈಬರ್ ವಂಚಕರ ಬಲೆಗೆ ಬಿದ್ದ ನಟಿ ಅಂಜಲಿ ಪಾಟೀಲ್ - 5.79 ಲಕ್ಷ ರೂ. ಪಂಗನಾಮನಿರ್ಮಲಾ ಸೀತಾರಾಮನ್​​ರನ್ನು ವಜಾಗೊಳಿಸಿ - ರಾಷ್ಟ್ರಪತಿಗೆ ತಮಿಳುನಾಡು IRS ಅಧಿಕಾರಿ ಪತ್ರ'ಚುನಾವಣಾ ಲಾಭಕ್ಕಾಗಿ ಕಾಂಗ್ರೆಸ್ ತಂದಿರುವ ಗ್ಯಾರಂಟಿಗಳು ಮಕ್ಕಳ ಭವಿಷ್ಯಕ್ಕೆ ಎರವಾಗಿದೆ' - ಹೆಚ್​ಡಿಕೆJOB NEWS : 2250 ಕಾನ್ಸ್ ಟೇಬಲ್, SI ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ'ನಾವು ದ್ವೇಷ ರಾಜಕಾರಣ ಮಾಡುತ್ತಿಲ್ಲ, ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದೇವೆ': ಡಿಸಿಎಂಬಿಕೆ ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ - ರಾಜ್ಯ ಬಿಜೆಪಿ ನಾಯಕರಿಂದ ಆಕ್ರೋಶಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣ ಬಿಡುಗಡೆ ಇದ್ದರು ಸಹ ವರ್ಗಾವಣೆಯಾಗಿಲ್ಲವೆ? ಇಲ್ಲಿದೆ ಅದರ ಪೂರ್ತಿ ವಿವರಮಕ್ಕಳು ಹೂ ಕಿತ್ತರೆಂದು ಅಂಗನವಾಡಿ ಶಿಕ್ಷಕಿಯ ಮೂಗು ಕತ್ತರಿಸಿದ ವ್ಯಕ್ತಿರಾಮಮಂದಿರ ಲೋಕಾರ್ಪಣೆ ವೇಳೆ ಹಳೇ ಕೇಸ್ ಹುಡುಕಿ ಜೈಲಿಗೆ ಹಾಕುವ ಕೆಲಸ ಹೆಮ್ಮೆ ತರುತ್ತಾ?’; ಕೋಟಾಬಿಜೆಪಿ ತೊರೆದ ಶ್ರೀರಾಮುಲು ಸಹೋದರಿ, ಮಾಜಿ ಸಂಸದೆ ಶಾಂತಾ ವೈಎಸ್​ಆರ್ ಸಿಗೆ ಸೇರ್ಪಡೆ