LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮುಡಾ ಕೇಸ್‌: ಮಧ್ಯರಾತ್ರಿವರೆಗೆ ಸಿಎಂ ಸಿದ್ದರಾಮಯ್ಯರಿಂದ ಕಡತ ವಿಲೇವಾರಿ?

ಬೆಂಗಳೂರು: ಮುಡಾ ಹಗರಣದಲ್ಲಿ ಕೊಂಚ ರಿಲೀಫ್ ಪಡೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ತಡರಾತ್ರಿವರೆಗೆ ಕುಳಿತು ವರ್ಗಾವಣೆ ಸೇರಿದಂತೆ ಪ್ರಮುಖ ಕಡತಗಳಿಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಬುಧವಾರ ಇಡೀ ದಿನ ಗಾಂಧಿ ಜಯಂತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಇಂದು (ಗುರುವಾರ) ದಸರಾ ಕಾರ್ಯಕ್ರಮದ ನಿಮಿತ್ತ ಮೈಸೂರಿನಲ್ಲಿ ಇರಲಿದ್ದಾರೆ. ಶುಕ್ರವಾರ ಹಾಗೂ ಶನಿವಾರ ರಾಯಚೂರು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಮಂಗಳವಾರ ರಾತ್ರಿಯೇ ಹಲವು ಮಹತ್ವದ ಕಡತಗಳಿಗೆ ಸಹಿ ಮಾಡಿದ್ದಾರೆ ಎಂಬ ಮಾಹಿತಿ ಸಿಎಂ ಆಪ್ತಮೂಲಗಳಿಂದ ಲಭ್ಯವಾಗಿದೆ. ಮಂಗಳವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಲ್ಲದ ಮನಸ್ಸಿನಿಂದಲೇ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳು, ಸಂಜೆ ವಿಧಾನಸೌಧದಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಕುರಿತ ಸಭೆಯಲ್ಲೂ ಹೆಚ್ಚು ಆಸಕ್ತಿ ವಹಿಸಿರಲಿಲ್ಲ. ವಿಧಾನಸೌಧದಿಂದ ತಮ್ಮ ನಿವಾಸಕ್ಕೆ ತೆರಳಿದ ಸಿದ್ದರಾಮಯ್ಯ, ರಾತ್ರಿವರೆಗೆ ಮುಡಾ ಪ್ರಕರಣದ ಆಗು-ಹೋಗುಗಳ ಕುರಿತು ಅಧಿಕಾರಿಗಳು ಹಾಗೂ ಆಪ್ತರೊಂದಿಗೆ ಚರ್ಚಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಾಲ್ಲೂಕನ್ನು ಅಭಿವೃದ್ದಿಪಡಿಸುವುದೇ ನನ್ನ ಮೊದಲ ಆಧ್ಯತೆ: ಶಾಸಕ ಡಾ.ಎಂ.ಚಂದ್ರಪ್ಪವಚನ: -ದಾಸೋಹದ ಸಂಗಣ್ಣ.!FASTag ಬಳಕೆದಾರರಿಗೆ ಎಚ್ಚರಿಕೆ : ಫೆಬ್ರವರಿ 17 ರಿಂದ ಜಾರಿಗೆ ಬರಲಿವೆ ಹೊಸ ನಿಯಮಗಳುಇಂತಹ ಮಹಿಳೆಯರಿಗಿಲ್ಲ ಗೃಹಲಕ್ಷ್ಮೀ ಭಾಗ್ಯ.. ಗೃಹಲಕ್ಷ್ಮೀ ಯೋಜನೆ ಹಣ ಕ್ಯಾನ್ಸಲ್‌ಬಿಯರ್‌ ರೇಟ್‌ ಕೇಳಿ ಶಾಕ್‌: ಹಾಟ್‌ ಡ್ರಿಂಕ್ಸ್‌ ಮೊರೆಹೋದ ಮದ್ಯಷ್ರಿಯರುಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧರಾಗೋಣ- ಡಿಸಿಎಂ ಡಿ.ಕೆ. ಶಿವಕುಮಾರ್'9 ವಿಶ್ವವಿದ್ಯಾನಿಲಯಗಳಿಗೆ ಬೀಗ ಜಡಿಯಲು ಹೊರಟಿರುವ ಸರ್ಕಾರದ ನಡೆ ಖಂಡನೀಯ'- ವಿಜಯೇಂದ್ರಚಾಂಪಿಯನ್ಸ್ ಟ್ರೋಫಿ : ಟೀಂ ಇಂಡಿಯಾ ಆಡುವ ವೇಳಾಪಟ್ಟಿ ICAT ಸಂಸ್ಥೆಯ ಏರ್ ಆಂಬ್ಯುಲೆನ್ಸ್ ಮೂಲಕ ಶಾಂತಕುಮಾರ್ ಬೆಂಗಳೂರಿಗೆ ಶಿಫ್ಟ್ಕೇಳಿದಷ್ಟು ವರದಕ್ಷಿಣೆ ತರಲಿಲ್ಲವೆಂದು ಸೊಸೆಗೆ ಎಚ್‌ಐವಿ ಸೋಂಕಿತ ಸೂಜಿ ಚುಚ್ಚಿದ ಅತ್ತೆ-ಮಾವ